ಕೊಲಂಬೊ: ಆತಿಥೇಯ ಶ್ರೀಲಂಕಾ ಮೇಲೀಗ ಎರಡು ಕಡೆಗಳಿಂದ ಒತ್ತಡ. ಒಂದನೆಯದು, ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ 3-0 ಸೋಲಿಗೆ ಏಕ ದಿನ ಸರಣಿಯಲ್ಲಾದರೂ ಸೇಡು ತೀರಿಸಿಕೊಂಡು ಮರ್ಯಾದೆ ಉಳಿಸಿಕೊಳ್ಳುವುದು. ಮತ್ತೂಂದು, 2019ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುವುದು. ರವಿವಾರದಿಂದ ಆರಂಭವಾಗ ಲಿರುವ 5 ಪಂದ್ಯಗಳ ಏಕದಿನ ಸರಣಿ ಯಲ್ಲಿ ಶ್ರೀಲಂಕಾದ ವಿಶ್ವಕಪ್ ಭವಿಷ್ಯ ಬಹುತೇಕ ನಿರ್ಧಾರವಾಗ ಲಿದೆ.
1996ರ ಚಾಂಪಿಯನ್ ತಂಡವಾಗಿ ರುವ ಶ್ರೀಲಂಕಾ ಸದ್ಯ ಐಸಿಸಿ ರ್‍ಯಾಂಕಿಂಗ್‌ನಲ್ಲಿ 88 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಅಂದರೆ 9 ಸ್ಥಾನ ದಲ್ಲಿರುವ ವೆಸ್ಟ್ ಇಂಡೀಸ್‌ಗಿಂತ 10 ಅಂಕಗಳ ಮುನ್ನಡೆ ಹೊಂದಿದೆ. ಇದೇ ಸೆ. 30ಕ್ಕೆ ಕೊನೆಗೊಳ್ಳುವಂತೆ, ಅಗ್ರ 8 ರ್‍ಯಾಂಕಿಂಗ್ ತಂಡಗಳಷ್ಟೇ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುತ್ತವೆ. ಆತಿಥೇಯ ರಾಷ್ಟ್ರವಾಗಿರುವ ಕಾರಣ ಇಂಗ್ಲೆಂಡನ್ನು ಹೊರತುಪಡಿಸಿ ಉಳಿದ 7 ತಂಡಗಳು ಈ ನಿಯಮದ ವ್ಯಾಪ್ತಿಗೆ ಬರುತ್ತವೆ.
ಭಾರತದೆದುರು 2 ಪಂದ್ಯ ಗೆದ್ದರೆ ಆಗ ಶ್ರೀಲಂಕಾದ ಅಂಕ 90ಕ್ಕೆ ಏರುತ್ತದೆ. ಇನ್ನೊಂದೆಡೆ 78 ಅಂಕ ಹೊಂದಿ ರುವ ವೆಸ್ಟ್ ಇಂಡೀಸಿಗೆ ಸೆ. 30ರೊಳಗೆ ಗರಿಷ್ಠ 88 ಅಂಕಗಳನ್ನಷ್ಟೇ ಗಳಿಸಲು ಸಾಧ್ಯ. ಆದರೆ ಆದು ಅಯರ್‌ಲ್ಯಾಂಡ್ ವಿರುದ್ಧ ಏಕೈಕ ಪಂದ್ಯ (ಸೆ. 13) ಹಾಗೂ ಆತಿಥೇಯ ಇಂಗ್ಲೆಂಡ್ ಎದುರಿನ ಎಲ್ಲ 5 ಪಂದ್ಯ (ಸೆ. 19-20) ಗೆಲ್ಲಬೇಕಾದುದು ಅನಿವಾರ್ಯ!
ಅಕಸ್ಮಾತ್ ಭಾರತದೆದುರು ಒಂದೇ ಪಂದ್ಯ ಗೆದ್ದರೆ ಲಂಕೆಯ ಅಂಕ 88ರಲ್ಲೇ ಉಳಿಯುತ್ತದೆ. ಮೇಲಿನ ಎಲ್ಲ 6 ಪಂದ್ಯಗಳನ್ನು ಗೆದ್ದರೆ ದಶಮಾಂಶ ಲೆಕ್ಕಾಚಾರದಲ್ಲಿ ವೆಸ್ಟ್ ಇಂಡೀಸ್ ಲಂಕೆ ಯನ್ನು ಮೀರಿ ನಿಲ್ಲುತ್ತದೆ.
ಭಾರತ ನಂ. 3
ಭಾರತ ಸದ್ಯ 114 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 113 ಅಂಕ ಹೊಂದಿರುವ ಇಂಗ್ಲೆಂಡಿಗೆ 4ನೇ ಸ್ಥಾನ. ಶ್ರೀಲಂಕಾ ವಿರುದ್ಧ ಕನಿಷ್ಠ 4-1 ಅಂತರ ದಿಂದ ಸರಣಿ ಗೆದ್ದರಷ್ಟೇ ಭಾರತದ 3ನೇ ಸ್ಥಾನ ಉಳಿಯುತ್ತದೆ. ಇಲ್ಲವಾದರೆ 4ನೇ ಸ್ಥಾನಕ್ಕೆ ಜಾರುತ್ತದೆ.