Advertisement

ವಿಶ್ವಕಪ್‌ ಕಪ್‌ ಹಾಕಿ: ವಿಶೇಷ ಅಂಚೆ ಚೀಟಿ ಬಿಡುಗಡೆ

06:30 AM Nov 29, 2018 | Team Udayavani |

ಭುವನೇಶ್ವರ: ಇಲ್ಲಿ ಬುಧವಾರ ಆರಂಭಗೊಂಡ 14ನೇ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ವಿಶೇಷ ಹಾಕಿ ಅಂಚಿಚೀಟಿಗಳನ್ನು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬಿಡುಗಡೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತಾಡಿದ ನವೀನ್‌ ಪಟ್ನಾಯಕ್‌, “ಹಾಕಿ ವಿಶ್ವಕಪ್‌ ಸಂದರ್ಭದಲ್ಲಿ ಇಂಥ ಸುಂದರವಾದ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿದ ಅಂಚೆ ಇಲಾಖೆಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.

ಈ ವಿಶೇಷ ಹಾಕಿ ಅಂಚೆಚೀಟಿಗಳನ್ನು ಸಾರ್ವಜನಿಕರು ಪಡೆಯಬಹುದಾಗಿದ್ದು, ಇದಕ್ಕಾಗಿ ವಿಶ್ವಕಪ್‌ ಹಾಕಿ ಪಂದ್ಯಗಳು ನಡೆಯುವ “ಕಳಿಂಗ ಸ್ಟೇಡಿಯಂ’ ಹೊರಗೆ ವಿಶೇಷ ಸ್ಟಾಲ್‌ ಒಂದನ್ನು ತೆರೆಯಲಾಗುವುದು ಎಂದು ಒಡಿಶಾ ಅಂಚೆ ಮಹಾನಿರ್ದೇಶಕ ಜಲೇಶ್ವರ್‌ ಕಹರ್‌ ತಿಳಿಸಿದ್ದಾರೆ. ಈ ಅಂಚೆಚೀಟಿಗಳಿಗೆ ಸಂಬಂಧಪಟ್ಟ ರಾಜ್ಯ ಮಟ್ಟದ ಪ್ರದರ್ಶವೊಂದು ಡಿ. 15ರಿಂದ 17ರ ತನಕ ನಡೆಯಲಿದೆ ಎಂದೂ ಅವರು ತಿಳಿಸಿದರು.

ಅಂಚೆ ಚೀಟಿ ಸಂಪ್ರದಾಯ
ವಿಶ್ವಕಪ್‌ ಹಾಕಿ ಪಂದ್ಯಾವಳಿ ವೇಳೆ ಆತಿಥೇಯ ದೇಶದ ಅಂಚೆ ಇಲಾಖೆ ಅಂಚೆಚೀಟಿ ಜತೆಗೆ ಅಂಚೆ ಲಕೋಟೆಯನ್ನೂ ಬಿಡುಗಡೆಗೊಳಿಸುವುದೊಂದು ಸಂಪ್ರದಾಯ. ಹಿಂದೆ 1982 ಮತ್ತು 2010ರಲ್ಲಿ ಭಾರತದ ಆತಿಥ್ಯದಲ್ಲಿ ಹಾಕಿ ವಿಶ್ವಕಪ್‌ ನಡೆದಾಗಲೂ ಅಂಚೆ ಇಲಾಖೆ ಈ ಮಹತ್ವದ ಕಾರ್ಯಕ್ಕೆ ಮುಂದಾಗಿತ್ತು. 1982ರ ಮುಂಬಯಿ ಆವೃತ್ತಿಯ ವಿಶ್ವಕಪ್‌ ವೇಳೆ ಒಂದು ರೂ. ಮುಖಬೆಲೆಯ ಅಂಚೆಚೀಟಿ ಹಾಗೂ 2010ರ ಹೊಸದಿಲ್ಲಿ ಆವೃತ್ತಿಯ ವೇಳೆ ಹೀರೋ ಹೊಂಡಾ ಪ್ರಾಯೋಜಿತ, ಪಾಲ್ಗೊಂಡ ಎಲ್ಲ ದೇಶಗಳ ಧ್ವಜದ ಚಿತ್ರವುಳ್ಳ 5 ರೂ. ಮೌಲ್ಯದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next