Advertisement

world cup cricket: ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ- ಭಾರತಕ್ಕೆ ಬರಲಿದೆ ಪಾಕ್‌ ತಂಡ!

03:49 PM Aug 07, 2023 | Team Udayavani |

ಇಸ್ಲಾಮಾಬಾದ್‌: ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗಿಯಾಗುವ ಕುರಿತಂತೆ ಇದ್ದ ಎಲ್ಲ ಅನುಮಾನಗಳು ಇತ್ಯರ್ಥವಾಗಿದ್ದು, ಪಾಕ್‌ ವಿದೇಶಾಂಗ ಇಲಾಖೆಯು ಪಾಕ್‌ ಕ್ರಿಕೆಟ್‌ ತಂಡಕ್ಕೆ ಭಾರತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ.

Advertisement

ಪಾಕಿಸ್ತಾನವು ಮೊದಲಿನಿಂದಲೂ, ಕ್ರೀಡೆಯನ್ನು ರಾಜಕೀಯದಿಂದ ದೂರವೇ ಇಟ್ಟಿದೆ. ಹೀಗಾಗಿ, ನಾವು ಭಾರತಕ್ಕೆ ಕ್ರಿಕೆಟ್‌ ತಂಡ ಕಳುಹಿಸಲು ನಿರ್ಧರಿಸಿದ್ದೇವೆ. ಭಾರತದಲ್ಲೇ ನಡೆಯುವ 2023ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಕ್‌ ತಂಡ ಭಾಗಿಯಾಗಲಿದೆ. ಅಲ್ಲದೆ, ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧದ ವಿವಾದದಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಂದ್ಯಾವಳಿ ಮೇಲೆ ಪರಿಣಾಮ ಬೀರಬಾರದು ಎಂಬುದು ನಮ್ಮ ಉದ್ದೇಶ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇಷ್ಟೇ ಅಲ್ಲ, ಪಾಕಿಸ್ತಾನ ಕ್ರಿಕೆಟ್‌ ತಂಡದ ಭದ್ರತೆ ಬಗ್ಗೆಯೂ ನಾವು ಆತಂಕ ಹೊಂದಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಬಗ್ಗೆ ಹಂಚಿಕೊಂಡಿದ್ದೇವೆ. ನಮ್ಮ ತಂಡಕ್ಕೆ ಪೂರ್ಣ ಭದ್ರತೆ ಸಿಗಲಿದೆ ಎಂಬ ಭರವಸೆಯೂ ಇದೆ ಎಂದು ಹೇಳಿದೆ.

ಸದ್ಯದಲ್ಲೇ ಏಷ್ಯಾ ಕಪ್‌ ಪಂದ್ಯಾವಳಿ ನಡೆಯಲಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನ ಆಯೋಜನೆ ಮಾಡಲಿವೆ. ಪಾಕಿಸ್ತಾನ ಮಾತ್ರ ಏಷ್ಯಾ ಕಪ್‌ ಆಯೋಜನೆ ಮಾಡಬೇಕಿತ್ತು. ಆದರೆ, ಭಾರತ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಒಪ್ಪದ ಕಾರಣದಿಂದಾಗಿ, ಅನಿವಾರ್ಯವಾಗಿ ಭಾರತದ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿದೆ. ಈ ವಿವಾದದಿಂದಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣ ಬೆಳೆಸುವುದು ಅನುಮಾನ ಎಂಬ ಮಾತುಗಳಿದ್ದವು. ಅಲ್ಲದೆ, ಕೆಲವೊಂದು ಕ್ರೀಡಾಂಗಣಗಳ ಬಗ್ಗೆಯೂ ಪಾಕಿಸ್ತಾನ ಕ್ಯಾತೆ ತೆಗೆದಿತ್ತು. ಈಗ ಎಲ್ಲ ವಿವಾದಗಳು ಅಂತ್ಯಗೊಂಡು, ಪಾಕಿಸ್ತಾನ ಭಾರತ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next