ಆತಿಥ್ಯದಲ್ಲಿ ಜ.7ರಿಂದ ಜ.21ರವರೆಗೆ ಕೂಟ ನಡೆಯಲಿದೆ. 1 ಬಾರಿ ವಿಶ್ವಕಪ್ ಹಾಗೂ 2 ಸಲ ಟಿ20 ಟ್ರೋಫಿ ಗೆದ್ದಿರುವ ಭಾರತ ತಂಡ ನೂರಾರು ಕನಸಿನೊಂದಿಗೆ ಕಣಕ್ಕೆ ಇಳಿಯುತ್ತಿದೆ.
Advertisement
ಭಾರತ ತಂಡ ಪಾಕ್ ಪ್ರಯಾಣ ಆರಂಭಿಸುವ ಮೊದಲು ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಈ ವೇಳೆ ಎನ್‌ಜಿಒ ಸಂಸ್ಥೆ ಸಮರ್ಥನಂ ವತಿಯಿಂದಆಟಗಾರರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಂಡದ ಎಲ್ಲ ಸದಸ್ಯರು ಹಾಜರಿದ್ದರು. ಬಳಿಕ ಮಾತನಾಡಿದ ಸಮರ್ಥನಂ ಸಂಸ್ಥಾಪಕ ಜಿ.ಕೆ.ಮಹಾಂತೇಶ್, ಬೆಂಗಳೂರಿನಲ್ಲಿ ಭಾರತ ತಂಡ ಕಠಿಣ ಅಭ್ಯಾಸ ನಡೆಸಿ ಹೋರಾಟಕ್ಕೆ ಸಜ್ಜಾಗಿದೆ. ಆಟಗಾರರುಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.