Advertisement
“ಭಾರವಾದ ಹೃದಯದಿಂದ ಈ ನಿರ್ಧಾರ ವನ್ನು ತೆಗೆದುಕೊಂಡಿದ್ದೇವೆ. ಈ ಯುದ್ಧದ ಪ್ರಭಾವದಿಂದ ಉಕ್ರೇನ್ ಹೊರಬರುವುದು ಸುಲಭವಲ್ಲ’ ಎಂದು ಐಒಸಿ ಹೇಳಿದೆ.
ಐಒಸಿಯು ರಷ್ಯಾ ಮತ್ತು ಬೆಲಾರಸ್‌ನ ಮೇಲೆ ಸಂಪೂರ್ಣ ನಿಷೇಧವನ್ನೇನೂ ಹೇರಿಲ್ಲ. ಸಾಂಸ್ಥಿಕ ಅಥವಾ ಕಾನೂನು ಕಾರಣಗಳಿಗಾಗಿ ಇಷ್ಟು ಬೇಗ ಆಟಗಾರರು ಮತ್ತು ಅಧಿಕಾರಿಗಳನ್ನು ಹೊರ ಹಾಕಲು ಸಾಧ್ಯವಾಗದಿದ್ದರೆ ಉಭಯ ದೇಶದ ಆಟಗಾರರು ತಟಸ್ಥವಾಗಿ ಭಾಗವಹಿಸಬೇಕು. ಅವರ ರಾಷ್ಟ್ರಧ್ವಜ, ರಾಷ್ಟ್ರಗೀತೆ ಅಥವಾ ಚಿಹ್ನೆಯನ್ನು ಬಳಸಬಾರದು ಎಂದು ಐಒಸಿ ಹೇಳಿದೆ. ಇವುಗಳಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವೂ ಒಳಗೊಂಡಿದೆ. ರಗ್ಬಿ ಸದಸ್ಯತ್ವ ರದ್ದು?
ಇದೇ ವೇಳೆ ರಗ್ಬಿ ಒಕ್ಕೂಟವೂ ಐಒಸಿ ಸಮಿತಿಯ ಶಿಫಾರಸಿನ ಮೇರೆಗೆ ರಷ್ಯಾ ಮತ್ತು ಬೆಲಾರಸ್‌ಗಳನ್ನು ಅಂತಾರಾಷ್ಟ್ರಿಯ ರಗ್ಬಿ ಕ್ರೀಡೆಯಿಂದ ಅಮಾನತುಗೊಳಿಸುವುದರ ಜತೆಗೆ ಅನಿರ್ದಿಷ್ಟಾವಧಿಗೆ ರಷ್ಯಾವನ್ನು “ವಿಶ್ವ ರಗಿº’ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ಇದರಿಂದ ಮುಂದಿನ ವರ್ಷ ಫ್ರಾನ್ಸ್‌ನಲ್ಲಿ ನಡೆ ಯಲಿರುವ ರಗಿº ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೆಣಸುವ ಅವಕಾಶವನ್ನು ರಷ್ಯಾ ಕಳೆದುಕೊಂಡಿದೆ.
Related Articles
ಅಂತಾರಾಷ್ಟ್ರೀಯ ಫುಟ್‌ಬಾಲ್ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಪಂದ್ಯಗಳಿಂದಲೂ ರಷ್ಯಾ ತಂಡಗಳನ್ನು ಬಹಿಷ್ಕರಿಸಲಾಗಿದೆ.
Advertisement
ವಿವಿಧ ದೇಶಗಳ ಫುಟ್‌ಬಾಲ್ ಸಂಸ್ಥೆಗಳು ಉಕ್ರೇನ್‌ನಲ್ಲಿ ಅತಿಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಫಿಫಾವನ್ನು ಒತ್ತಾಯಿಸಿದ್ದವು. ಹೀಗಾಗಿ ಯುರೋಪ್ ಫುಟ್‌ಬಾಲ್ ಒಕ್ಕೂಟ ಆಡಳಿತ ಮಂಡಳಿಯ ಸಮನ್ವಯತೆಯೊಂದಿಗೆ ಫಿಫಾ ಈ ನಿರ್ಧಾರ ಕೈಗೊಂಡಿದೆ.
“ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ಅವಕಾಶ ನಿರಾಕರಿಸಿ, ರಷ್ಯಾ ಹಾಗೂ ಆ ದೇಶದ ಕ್ಲಬ್‌ಗಳಿಗೂ ನಿರ್ಬಂಧ ಹೇರಲಾಗಿದೆ. ಮುಂದಿನ ಆದೇಶದ ವರೆಗೆ ಈ ನಿರ್ಬಂಧ ಮುಂದುವರಿಯಲಿದೆ’ ಎಂದು ಫಿಫಾ ಮತ್ತು ಅದರ ಯುರೋಪಿಯನ್ ಫುಟ್‌ಬಾಲ್ ಒಕ್ಕೂಟದ ಪ್ರತಿನಿಧಿ ತಿಳಿಸಿದ್ದಾರೆ.
ಬ್ಲ್ಯಾಕ್‌ಬೆಲ್ಟ್ ಹಿಂದಕ್ಕೆರಷ್ಯಾ ಅಧ್ಯಕ್ಷ ವ್ಲಾದಿ ಮಿರ್ ಪುತಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲ್ಯಾಕ್‌ಬೆಲ್ಟ್ ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ. ವಿಶ್ವ ಟೇಕ್ವಾಂಡೋ ತನ್ನ ಧ್ಯೇಯವಾಕ್ಯವನ್ನು “ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾದುದು’ ಎಂದು ಉಲ್ಲೇಖಿಸಿ ಈ ನಿರ್ಧಾರವನ್ನು ಪ್ರಕಟಿಸಿದೆ. “ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿ ಇದಾಗಿದೆ. ಕ್ರೀಡೆಯ ಗೌರವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಇದು ಉಲ್ಲಂ ಸುತ್ತದೆ. ಈ ನಿಟ್ಟಿನಲ್ಲಿ ನ. 2013ರಲ್ಲಿ ಪುತಿನ್‌ಗೆ ನೀಡಲಾದ ಗೌರವ 9ನೇ ಡಾನ್ ಬ್ಲ್ಯಾಕ್‌ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ’ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗೌರವ ಪ್ರಶಸ್ತಿ ಹಿಂಪಡೆದ ಐಒಸಿ
ಒಲಿಂಪಿಕ್ ಸಮಿತಿಯು 2011ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿ ಮಿರ್ ಪುತಿನ್ ಅವರಿಗೆ ನೀಡಲಾದ “ಒಲಿಂಪಿಕ್ಸ್ ಆರ್ಡರ್’ ಗೌರವವನ್ನು ಹಿಂಪಡೆದಿದೆ. ಜತೆಗೆ ರಷ್ಯಾದ ಇತರ ಅಧಿಕಾರಿಗಳಿಗೆ ನೀಡಲಾದ ಈ ಗೌರವವನ್ನೂ ಹಿಂಪಡೆಯಲಾಗಿದೆ. ಯುರೋಪಿನ ಹಲವು ಕ್ರೀಡಾ ಸಂಸ್ಥೆಗಳು ಈಗಾಗಲೇ ರಷ್ಯಾವನ್ನು ವಿರೋಧಿಸಿವೆ. ಹಾಗೆಯೇ ರಷ್ಯಾ ತಂಡದ ವಿರುದ್ಧ ಆಡಲು ನಿರಾಕರಿಸಿದ್ದಾರೆ. ಜತೆಗೆ ರಷ್ಯಾದ ಐಸ್ ಹಾಕಿ ತಂಡವನ್ನು ಪುರುಷರ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕೆಂದು ಫಿನ್‌ಲ್ಯಾಂಡ್ ಕೂಡ ಒತ್ತಾಯಿಸಿದೆ. ಯುದ್ಧ ನಿಲ್ಲಿಸಲು ಮನವಿ
ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್ ಚೆಂಕೋವಾ ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. “ನಾನು ಚಿಕ್ಕಂದಿನಿಂದಲೂ ಟೆನಿಸ್ ಆಡುತ್ತಿದ್ದೆ . ಇಂದಿನ ವರೆಗೆ ನಾನು ರಷ್ಯಾವನ್ನು ಪ್ರತಿನಿಧಿಸಿದ್ದೇನೆ. ಇದು ನನ್ನ ಮನೆ ಮತ್ತು ನನ್ನ ದೇಶ. ಆದರೀಗ ಪರಿಸ್ಥಿತಿ ಬದಲಾಗುತ್ತಿದೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಂತೆ ನಾನು ಕೂಡ ಭಯದಲ್ಲಿದ್ದೇನೆ. ಹಾಗೆಂದು ನನ್ನ ನಿಲುವನ್ನು ನಾನು ಸ್ಪಷ್ಟವಾಗಿ ಹೇಳಲು ಹೆದರು ವುದಿಲ್ಲ. ನಾನು ಈ ಯುದ್ಧ ಮತ್ತು ಹಿಂಸೆಯ ವಿರೋಧಿಯಾಗಿದ್ದೇನೆ’ ಎಂದು ಹೇಳಿದ್ದಾರೆ.