Advertisement

ವಿಶ್ವಕಪ್‌: ಆ. 25ರಿಂದ ಟಿಕೆಟ್‌ ಮಾರಾಟ

10:43 PM Aug 09, 2023 | Team Udayavani |

ಹೊಸದಿಲ್ಲಿ: ಭಾರತದ ವಿವಿಧ ಕಡೆ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟದ ಟಿಕೆಟ್‌ ಮಾರಾಟವು ಆ. 25ರಿಂದ ಆರಂಭವಾಗಲಿದೆ. ಕೂಟವು ಅ. 5ರಂದು ಆರಂಭವಾಗಲಿದ್ದು ಟಿಕೆಟ್‌ ಮಾರಾಟ 40 ದಿನ ಮುಂಚಿತವಾಗಿ ಆರಂಭವಾಗಲಿದೆ.

Advertisement

ವಿಶ್ವಕಪ್‌ನ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಟಿಕೆಟ್‌ ಮಾರಾಟದ ದಿನಾಂಕವನ್ನು ಘೋಷಿಸಲಾಗಿದೆ. ವಿಶ್ವಕಪ್‌ ಕೂಟ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಭಾರತ ಪಾಲ್ಗೊಳ್ಳದ ಎಲ್ಲ ಪಂದ್ಯಗಳ ಟಿಕೆಟ್‌ ಮಾರಾಟ ಮೊದಲ ಹಂತದಲ್ಲಿ ನಡೆಯಲಿದೆ. ಆಬಳಿಕ ಭಾರತ ಪಾಲ್ಗೊಳ್ಳುವ ಪಂದ್ಯಗಳ ಟಿಕೆಟ್‌ ಮಾರಾಟವು ಆರು ಹಂತಗಳಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next