Advertisement

ಪಾಕ್‌ ಪರಾಕ್ರಮ; ಇಂಗ್ಲೆಂಡಿಗೆ ಸೋಲಿನೇಟು

10:15 AM Jun 05, 2019 | Sriram |

ನಾಟಿಂಗ್‌ಹ್ಯಾಮ್‌: ಸೋಮವಾರ “ಟ್ರೆಂಟ್‌ಬ್ರಿಜ್‌’ ಅಂಗಳದಲ್ಲಿ ನಡೆದ ಭಾರೀ ಮೊತ್ತದ ವಿಶ್ವಕಪ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಂತ ಪಾಕಿಸ್ಥಾನ ಆತಿಥೇಯ ಇಂಗ್ಲೆಂಡನ್ನು 14 ರನ್ನುಗಳಿಂದ ಮಣಿಸಿ ಹಳಿ ಏರಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 8 ವಿಕೆಟಿಗೆ 348 ರನ್‌ ಪೇರಿಸಿದರೆ, ಇಂಗ್ಲೆಂಡ್‌ ಜೋ ರೂಟ್‌ (107) ಮತ್ತು ಜಾಸ್‌ ಬಟ್ಲರ್‌ (103) ಅವರ ಶತಕದ ಹೊರತಾಗಿಯೂ 9 ವಿಕೆಟಿಗೆ 334 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಮೊತ್ತವನ್ನು ಬೆನ್ನಟ್ಟಿ ಗೆದ್ದರೆ ಇಂಗ್ಲೆಂಡ್‌ ವಿಶ್ವಕಪ್‌ನಲ್ಲಿ ನೂತನ ದಾಖಲೆ ನಿರ್ಮಿಸುತ್ತಿತ್ತು. ಇದು ವಿಶ್ವಕಪ್‌ ಇತಿಹಾಸದ ಸರ್ವಾಧಿಕ ಮೊತ್ತದ ಯಶಸ್ವೀ ಚೇಸಿಂಗ್‌ ಆಗುತ್ತಿತ್ತು. ಹಿಂದಿನ ದಾಖಲೆ ಐರ್ಲೆಂಡ್‌ ಹೆಸರಲ್ಲಿದೆ. 2011ರ ಬೆಂಗಳೂರು ಪಂದ್ಯದಲ್ಲಿ ಅದು ಇಂಗ್ಲೆಂಡ್‌ ವಿರುದ್ಧವೇ 7 ವಿಕೆಟಿಗೆ 329 ರನ್‌ ಗಳಿಸಿ ಜಯಭೇರಿ ಮೊಳಗಿಸಿತ್ತು.

ಶತಕವಿಲ್ಲದೆ ಬೃಹತ್‌ ಸ್ಕೋರ್‌
ಪಾಕಿಸ್ಥಾನ-ಇಂಗ್ಲೆಂಡ್‌ ನಡುವಿನ ಕಳೆದ 5 ಪಂದ್ಯಗಳ ಏಕದಿನ ಸರಣಿಯ ಮುಂದುವರಿದ ಭಾಗದಂತೆ ಸಾಗಿದ ಈ ಪಂದ್ಯದಲ್ಲಿ ಆರಂಭದಿಂದಲೇ ರನ್‌ ಸುರಿಮಳೆ ಆಗತೊಡಗಿತು. ಕ್ರೀಸ್‌ ಇಳಿದವರೆಲ್ಲ ಇಂಗ್ಲೆಂಡ್‌ ಬೌಲರ್‌ಗಳ ಮೇಲೆರಗಿ ಹೋದರು. ಆದರೆ ಈ ಬೃಹತ್‌ ಮೊತ್ತದಲ್ಲಿ ಯಾರಿಂದಲೂ ಶತಕ ದಾಖಲಾಗಲಿಲ್ಲ. ಹೀಗಾಗಿ ಒಂದೂ ಸೆಂಚುರಿ ಕಾಣದೆ ವಿಶ್ವಕಪ್‌ನಲ್ಲಿ ಅತ್ಯಧಿಕ ಮೊತ್ತ ಗಳಿಸಿದ ದಾಖಲೆ ಪಾಕಿಸ್ಥಾನದ್ದಾಯಿತು. ಹಿಂದಿನ ದಾಖಲೆ ದಕ್ಷಿಣ ಆಫ್ರಿಕಾ ಹೆಸರಲ್ಲಿತ್ತು. 2015ರ ವೆಲ್ಲಿಂಗ್ಟನ್‌ ಪಂದ್ಯದಲ್ಲಿ ಯುಎಇ ವಿರುದ್ಧ 6ಕ್ಕೆ 341 ರನ್‌ ಪೇರಿಸಿದಾಗ ಅಲ್ಲಿ ಯಾರಿಂದಲೂ ಶತಕ ದಾಖಲಾಗಿರಲಿಲ್ಲ.

ಮೂವರಿಂದ ಅರ್ಧ ಶತಕ
ಪಾಕ್‌ ಸರದಿಯಲ್ಲಿ ಒಟ್ಟು 3 ಅರ್ಧ ಶತಕ ದಾಖಲಾಯಿತು. ಮೊಹಮ್ಮದ್‌ ಹಫೀಜ್‌ ಸರ್ವಾಧಿಕ 84 ರನ್‌, ಬಾಬರ್‌ ಆಜಂ 63 ರನ್‌ ಮತ್ತು ನಾಯಕ ಸಫ‌ìರಾಜ್‌ ಅಹ್ಮದ್‌ 55 ರನ್‌ ಮಾಡಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಉಳಿದಂತೆ ಆರಂಭಿಕರಾದ ಇಮಾಮ್‌ ಉಲ್‌ ಹಕ್‌ 44, ಫ‌ಕಾರ್‌ ಜಮಾನ್‌ 36 ರನ್‌ ಹೊಡೆದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 14.1 ಓವರ್‌ಗಳಿಂದ 82 ರನ್‌ ಒಟ್ಟುಗೂಡಿದಾಗಲೇ ಪಾಕಿಸ್ಥಾನದ ಭಾರೀ ಮೊತ್ತದ ಮುನ್ಸೂಚನೆ ಲಭಿಸಿತ್ತು. ಇದೇ ಪಾಕ್‌ ಸರದಿಯ ದೊಡ್ಡ ಜತೆಯಾಟವಾಗಿತ್ತು.

Advertisement

ಅನುಭವಿ ಹಫೀಜ್‌ ಬ್ಯಾಟಿಂಗ್‌ ಬಿರುಸಿನಿಂದ ಕೂಡಿತ್ತು. ಅವರ 84 ರನ್‌ 62 ಎಸೆತಗಳಿಂದ ಬಂತು. ಸಿಡಿಸಿದ್ದು 8 ಬೌಂಡರಿ ಮತ್ತು 2 ಸಿಕ್ಸರ್‌. ಇದು ಅವರ 38ನೇ ಫಿಫ್ಟಿ.ಬಾಬರ್‌ ಆಜಂ ಗಳಿಕೆ 66 ಎಸೆತಗಳಿಂದ 63 ರನ್‌. ಇದರಲ್ಲಿ ಕೇವಲ 4 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಇದು ಬಾಬರ್‌ ದಾಖಲಿಸಿದ 13ನೇ ಅರ್ಧ ಶತಕ. ಸಫ‌ìರಾಜ್‌ ಅವರ 55 ರನ್‌ 44 ಎಸೆತಗಳಿಂದ ಬಂತು (5 ಬೌಂಡರಿ). ಇದು ಅವರ 11ನೇ ಅರ್ಧ ಶತಕವಾಗಿದೆ.

ವೋಕ್ಸ್‌, ಅಲಿ ಬೌಲಿಂಗ್‌ ಯಶಸ್ಸು
ಇಂಗ್ಲೆಂಡ್‌ ಬೌಲಿಂಗ್‌ ಸರದಿಯಲ್ಲಿ ಮೊಯಿನ್‌ ಅಲಿ 50ಕ್ಕೆ 3 ಮತ್ತು ಕ್ರಿಸ್‌ ವೋಕ್ಸ್‌ 71ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಇನ್ನಿಂಗ್ಸಿನ ಏಕೈಕ ಮೇಡನ್‌ ಓವರ್‌ಗೆ ವೋಕ್ಸ್‌ ಸಾಕ್ಷಿಯಾದರು. ಜತೆಗೆ 4 ಕ್ಯಾಚ್‌ ಮೂಲಕವೂ ಗಮನ ಸೆಳೆದರು. 2 ವಿಕೆಟ್‌ ಮಾರ್ಕ್‌ ವುಡ್‌ ಪಾಲಾಯಿತು. ಭಾರೀ ನಿರೀಕ್ಷೆ ಮೂಡಿಸಿದ ಜೋಫ‌Å ಆರ್ಚರ್‌ ಅತ್ಯಂತ ದುಬಾರಿಯಾದರು.

ಸ್ಕೋರ್‌ ಪಟ್ಟಿ
ಪಾಕಿಸ್ಥಾನ
ಇಮಾಮ್‌ ಉಲ್‌ ಹಕ್‌ ಸಿ ವೋಕ್ಸ್‌ ಬಿ ಮೊಯಿನ್‌ 44
ಫ‌ಕಾರ್‌ ಜಮಾನ್‌ ಸ್ಟಂಪ್ಡ್ ಬಟ್ಲರ್‌ ಬಿ ಮೊಯಿನ್‌ 36
ಬಾಬರ್‌ ಆಜಂ ಸಿ ವೋಕ್ಸ್‌ ಬಿ ಮೊಯಿನ್‌ 63
ಮೊಹಮ್ಮದ್‌ ಹಫೀಜ್‌ ಸಿ ವೋಕ್ಸ್‌ ಬಿ ವುಡ್‌ 84
ಸಫ‌ìರಾಜ್‌ ಅಹ್ಮದ್‌ ಸಿ ಮತ್ತು ಬಿ ವೋಕ್ಸ್‌ 55
ಆಸಿಫ್ ಅಲಿ ಸಿ ಬೇರ್‌ಸ್ಟೊ ಬಿ ವುಡ್‌ 14
ಶೋಯಿಬ್‌ ಮಲಿಕ್‌ ಸಿ ಮಾರ್ಗನ್‌ ಬಿ ವೋಕ್ಸ್‌ 8
ವಹಾಬ್‌ ರಿಯಾಜ್‌ ಸಿ ರೂಟ್‌ ಬಿ ವೋಕ್ಸ್‌ 4
ಹಸನ್‌ ಅಲಿ ಔಟಾಗದೆ 10
ಶಾದಾಬ್‌ ಖಾನ್‌ ಔಟಾಗದೆ 10
ಇತರ 20
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 348
ವಿಕೆಟ್‌ ಪತನ: 1-82, 2-111, 3-199, 4-279, 5-311, 6-319, 7-325, 8-337.
ಬೌಲಿಂಗ್‌:
ಕ್ರಿಸ್‌ ವೋಕ್ಸ್‌ 8-1-71-3
ಜೋಫ‌Å ಆರ್ಚರ್‌ 10-0-79-0
ಮೊಯಿನ್‌ ಅಲಿ 10-0-50-3
ಮಾರ್ಕ್‌ ವುಡ್‌ 10-0-53-2
ಬೆನ್‌ ಸ್ಟೋಕ್ಸ್‌ 7-0-43-0
ಆದಿಲ್‌ ರಶೀದ್‌ 5-0-43-0
ಇಂಗ್ಲೆಂಡ್‌
ಜಾಸನ್‌ ರಾಯ್‌ ಎಲ್‌ಬಿಡಬ್ಲ್ಯು ಶಾದಾಬ್‌ 8
ಜಾನಿ ಬೇರ್‌ಸ್ಟೊ ಸಿ ಸಫ‌ìರಾಜ್‌ ಬಿ ರಿಯಾಜ್‌ 32
ಜೋ ರೂಟ್‌ ಸಿ ಹಫೀಜ್‌ ಬಿ ಶಾದಾಬ್‌ 107
ಇಯಾನ್‌ ಮಾರ್ಗನ್‌ ಬಿ ಹಫೀಜ್‌ 9
ಬೆನ್‌ ಸ್ಟೋಕ್ಸ್‌ ಸಿ ಸಫ‌ìರಾಜ್‌ ಬಿ ಮಲಿಕ್‌ 13
ಜಾಸ್‌ ಬಟ್ಲರ್‌ ಸಿ ರಿಯಾಜ್‌ ಬಿ ಆಮಿರ್‌ 103
ಮೊಯಿನ್‌ ಅಲಿ ಸಿ ಫ‌ಕಾರ್‌ ಬಿ ರಿಯಾಜ್‌ 19
ಕ್ರಿಸ್‌ ವೋಕ್ಸ್‌ ಸಫ‌ìರಾಜ್‌ ಬಿ ರಿಯಾಜ್‌ 21
ಜೋಫ‌Å ಆರ್ಚರ್‌ ಸಿ ರಿಯಾಜ್‌ ಬಿ ಆಮಿರ್‌ 1
ಆದಿಲ್‌ ರಶೀದ್‌ ಔಟಾಗದೆ 1
ಮಾರ್ಕ್‌ ವುಡ್‌ ಔಟಾಗದೆ 10
ಇತರ 8
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 334
ವಿಕೆಟ್‌ ಪತನ: 1-12, 2-60, 3-86, 4-118, 5-248, 6-288, 7-320, 8-320, 9-322.
ಬೌಲಿಂಗ್‌:
ಶಾದಾಬ್‌ ಖಾನ್‌ 10-0-63-2
ಮೊಹಮ್ಮದ್‌ ಆಮಿರ್‌ 10-0-67-2
ವಹಾಬ್‌ ರಿಯಾಜ್‌ 10-0-82-3
ಹಸನ್‌ ಅಲಿ 10-0-66-0
ಮೊಹಮ್ಮದ್‌ ಹಫೀಜ್‌ 7-0-43-1
ಶೋಯಿಬ್‌ ಮಲಿಕ್‌ 3-0-10-1

ಹಫೀಜ್‌ ಪಂದ್ಯಶ್ರೇಷ್ಠ
ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪರಾಕ್ರಮಗೈದ ಮೊಹಮ್ಮದ್‌ ಹಫೀಜ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 62 ಎಸೆತಗಳಲ್ಲಿ 84 ರನ್‌ ಸಿಡಿಸಿದ ಅವರು 7 ಓವರ್‌ ಎಸೆದಿದ್ದು 1 ವಿಕೆಟ್‌ ಹಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next