Advertisement
ಶಕಿಬ್ ಅಲ್ ಹಸನ್ 51 ರನ್ ಬಾರಿಸುವ ಜತೆಗೆ 29 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಶಕಿಬ್ ವಿಶ್ವಕಪ್ ಪಂದ್ಯವೊಂದರಲ್ಲಿ 50 ಪ್ಲಸ್ ರನ್ ಜತೆಗೆ 5 ವಿಕೆಟ್ ಹಾರಿಸಿದ ಕೇವಲ 2ನೇ ಆಲ್ರೌಂಡರ್. ಯುವರಾಜ್ ಸಿಂಗ್ ಮೊದಲಿಗ.
ಬಾಂಗ್ಲಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹೀಂ ಸರ್ವಾಧಿಕ 83 ರನ್ ಕೊಡುಗೆ ಸಲ್ಲಿಸಿದರು (87 ಎಸೆತ, 4 ಬೌಂಡರಿ, 1 ಸಿಕ್ಸರ್). ಶಕಿಬ್ 69 ಎಸೆತ ಎದುರಿಸಿ 51 ರನ್ ಹೊಡೆದರು. ಈ ಎಚ್ಚರಿಕೆಯ ಆಟದಲ್ಲಿ ಕೇವಲ ಒಂದು ಬೌಂಡರಿ ಸೇರಿತ್ತು. ಶಕಿಬ್-ರಹೀಂ ಜೋಡಿಯ 3ನೇ ವಿಕೆಟ್ ಜತೆಯಾಟದಲ್ಲಿ 61 ರನ್ ಒಟ್ಟುಗೂಡಿತು.
Related Articles
Advertisement
ಅಫ್ಘಾನ್ ಬೌಲರ್‌ಗಳಲ್ಲಿ ಸ್ಪಿನ್ನರ್ ಮುಜೀಬ್ ದಾಳಿ ಹೆಚ್ಚು ಪರಿಣಾಮಕಾರಿಯಾಗಿತ್ತು. 10 ಓವರ್‌ಗಳ ಸ್ಪೆಲ್ನಲ್ಲಿ ಕೇವಲ 39 ರನ್ ನೀಡಿದ ಅವರು 3 ವಿಕೆಟ್ ಉರುಳಿಸಿದರು.
ಹಿಂದಿನ ಆರೂ ಪಂದ್ಯ ಸೋತು ಈಗಾಗಲೇ ಹೊರಬಿದ್ದಿರುವುದರಿಂದ ಅಫ್ಘಾನಿಸ್ಥಾನ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿತ್ತು. ಆದರೆ ಬಾಂಗ್ಲಾದೇಶಕ್ಕೆ ಇದು ಮಹತ್ವದ ಮುಖಾಮುಖೀ ಆಗಿತ್ತು. ಮುಂದಿನೆರಡೂ ಪಂದ್ಯಗಳನ್ನು ಗೆದ್ದರೆ ಮೊರ್ತಜ ಪಡೆ ನಾಕೌಟ್ ಕನಸು ಕಾಣಬಹುದು.
ಸ್ಕೋರ್ ಪಟ್ಟಿಬಾಂಗ್ಲಾದೇಶ
ಲಿಟನ್ ದಾಸ್ ಸಿ ಶಾಹಿದಿ ಬಿ ಮುಜೀಬ್ 16
ತಮೀಮ್ ಇಕ್ಬಾಲ್ ಬಿ ನಬಿ 36
ಶಕಿಬ್ ಅಲ್ ಹಸನ್ ಎಲ್‌ಬಿಡಬ್ಲ್ಯು ಮುಜೀಬ್ 51
ಮುಶ್ಫಿಕರ್ ರಹೀಂ ಸಿ ನಬಿ ಬಿ ಡಿ.ಜದ್ರಾನ್ 83
ಸೌಮ್ಯ ಸರ್ಕಾರ್ ಎಲ್‌ಬಿಡಬ್ಲ್ಯು ಮುಜೀಬ್ 3
ಮೊಹಮದುಲ್ಲ ಸಿ ನಬಿ ಬಿ ನೈಬ್ 27
ಮೊಸದ್ದೆಕ್ ಹೊಸೈನ್ ಬಿ ನೈಬ್ 35
ಮೊಹಮ್ಮದ್ ಸೈಪುದ್ದೀನ್ ಔಟಾಗದೆ 2
ಇತರ 9
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 262
ವಿಕೆಟ್ ಪತನ: 1-23, 2-82, 3-143, 4-151, 5-207, 6-251, 7-262.
ಬೌಲಿಂಗ್:
ಮುಜೀಬ್ ಉರ್ ರೆಹಮಾನ್ 10-0-39-3
ದೌಲತ್ ಜದ್ರಾನ್ 9-0-64-1
ಮೊಹಮ್ಮದ್ ನಬಿ 10-0-44-1
ಗುಲುºದಿನ್ ನೈಬ್ 10-1-56-2
ರಶೀದ್ ಖಾನ್ 10-0-52-0
ರಹಮತ್ ಶಾ 1-0-7-0
ಅಫ್ಘಾನಿಸ್ಥಾನ
ಗುಲ್ಬದಿನ್ ನೈಬ್ ಸಿ ದಾಸ್ ಬಿ ಶಕಿಬ್ 47
ರಹಮತ್ ಶಾ ಸಿ ತಮಿಮ್ ಬಿ ಶಕಿಬ್ 24
ಹಶ್ಮತುಲ್ಲ ಶಾಹಿದಿ ಸ್ಟಂಪ್ಡ್ ರಹೀಂ ಬಿ ಮೊಸದ್ದೆಕ್ 11
ಅಸYರ್‌ಅಫ್ಘಾನ್ ಸಿ ಶಬ್ಬೀರ್ (ಬದಲಿ) ಬಿ ಶಕಿಬ್ 20
ಮೊಹಮ್ಮದ್ ನಬಿ ಬಿ ಶಕಿಬ್ 0
ಸಮಿಯುಲ್ಲ ಶಿನ್ವರಿ ಔಟಾಗದೆ 49
ಇಕ್ರಮ್ ಅಲಿ ಖೀಲ್ ರನೌಟ್ 11
ನಜಿಬುಲ್ಲ ಜದ್ರಾನ್ ಸ್ಟಂಪ್ಡ್ ರಹೀಮ್ ಬಿ ಶಕಿಬ್ 23
ರಶೀದ್ ಖಾನ್ ಸಿ ಮೊರ್ತಜ ಬಿ ಮುಸ್ತಫಿಜುರ್ 2
ದೌಲತ್ ಜದ್ರಾನ್ ಸಿ ರಹೀಂ ಬಿ ಮುಸ್ತಫಿಜುರ್ 0
ಮುಜೀಬ್ ಉರ್ ರಹಮಾನ್ ಬಿ ಸೈಫುದ್ದೀನ್ 0
ಇತರ 13
ಒಟ್ಟು (47 ಓವರ್‌ಗಳಲ್ಲಿ ಆಲೌಟ್) 200
ವಿಕೆಟ್ ಪತನ: 1-49, 2-79, 3-104, 4-104, 5-117, 6-132, 7-188, 8-191.
ಬೌಲಿಂಗ್:
ಮಶ್ರಫೆ ಮೊರ್ತಜ 7-0-37-0
ಮುಸ್ತಫಿಜುರ್ ರಹಮಾನ್ 8-1-32-2
ಮೊಹಮ್ಮದ್ ಸೈಫುದ್ದೀನ್ 8-0-33-1
ಶಕಿಬ್ ಅಲ್ ಹಸನ್ 10-1-29-5
ಮೆಹಿದಿ ಹಸನ್ 8-0-37-0
ಮೊಸದ್ದೆಕ್ ಹೊಸೈನ್ 6-0-25-1
ಪಂದ್ಯಶ್ರೇಷ್ಠ: ಶಕಿಬ್ ಅಲ್ ಹಸನ್