Advertisement

ಚಾಂಪಿಯನ್ನರ ಎದುರು ಅಫ್ಘಾನ್‌ಗೆ ಅಚ್ಚರಿಯ ತವಕ

02:11 AM Jun 01, 2019 | Team Udayavani |

ಬ್ರಿಸ್ಟಲ್‌: ಹಾಲಿ ಚಾಂಪಿಯನ್‌ ಹಾಗೂ ಅತ್ಯಧಿಕ 5 ಸಲ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯದ ನೂತನ ಪಯಣಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅನನುಭವಿಯಾದರೂ ಕೂಟದ ಅಪಾಯಕಾರಿ ತಂಡವಾಗಿರುವ ಅಫ್ಘಾನಿಸ್ಥಾನ ವಿರುದ್ಧ ಫಿಂಚ್‌ ಪಡೆ ಶನಿವಾರ ಸಂಜೆ ಆಡಲಿಳಿಯಲಿದೆ. ಇದು ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ವಿಶ್ವಕಪ್‌ ಇತಿಹಾಸದ ಮೊತ್ತಮೊದಲ ಹಗಲು-ರಾತ್ರಿ ಪಂದ್ಯ!

Advertisement

ಆಸ್ಟ್ರೇಲಿಯದ ಗಮನವೆಲ್ಲ ನಿಷೇಧ ಮುಗಿಸಿ ಬಂದಿರುವ ವಾರ್ನರ್‌-ಸ್ಮಿತ್‌ ಆಟದ ಮೇಲೆ ನೆಟ್ಟಿದೆ. ಇಬ್ಬರೂ ಈಗಾಗಲೇ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದು, ವಿಶ್ವಕಪ್‌ನಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯ ವಿದೆ. ಆಗ ಕಾಂಗರೂಗಳಿಂದ ದೊಡ್ಡ ಮಟ್ಟದ ಪ್ರದರ್ಶನ ವನ್ನು ನಿರೀಕ್ಷಿಸಲಡ್ಡಿಯಿಲ್ಲ. ಮಾರ್ಷ್‌, ಖ್ವಾಜಾ, ಮ್ಯಾಕ್ಸ್‌ವೆಲ್‌ ಆಸೀಸ್‌ ಬ್ಯಾಟಿಂಗ್‌ ಸರದಿಯ ಉಳಿದ ಪ್ರಮುಖರು.

ಅನುಮಾನವಿರುವುದೇ ಫಿಂಚ್‌ ಆಟದ ಮೇಲೆ. ನಾಯಕತ್ವದ ಒತ್ತಡದಿಂದಲೋ ಏನೋ, ಫಿಂಚ್‌ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿದ್ದಾರೆ. ಆಸೀಸ್‌ ಬೌಲಿಂಗ್‌ ಅತ್ಯಂತ ಘಾತಕ. ಫಾಸ್ಟ್‌ ಮತ್ತು ಸ್ಪಿನ್‌ ವಿಭಾಗಗಳೆರಡೂ ಉತ್ತಮ ಸಮತೋಲನದಿಂದ ಕೂಡಿವೆ.

ಅನನುಭವಿಯಾದರೂ ಶಕ್ತಿಶಾಲಿ!
ಅನನುಭವಿ ಎಂಬುದನ್ನು ಹೊರತುಪಡಿಸಿದರೆ ಅಫ್ಘಾನಿ ಸ್ಥಾನ ಸಾಕಷ್ಟು ಶಕ್ತಿಶಾಲಿ ತಂಡ. ಕೂಟದಲ್ಲಿ ಒಂದೆರಡು ತಂಡಗಳನ್ನಾದರೂ ಉರುಳಿಸಿ ಅಚ್ಚರಿ ನಿರ್ಮಿಸದೇ ಇರದು. ಆದರೆ ಚಾಂಪಿಯನ್ನರ ಎದುರು ಇದು ಸಾಧ್ಯವೇ? ಕುತೂಹಲ ಸಹಜ. ವಿಶ್ವಮಟ್ಟದ ಸ್ಪಿನ್ನರ್‌ ರಶೀದ್‌ ಖಾನ್‌, ಮೊಹಮ್ಮದ್‌ ನಬಿ ತಂಡದ ಆಸ್ತಿ. ವೇಗದ ಬೌಲಿಂಗ್‌ ವಿಭಾಗ ಸಾಮಾನ್ಯ.

ವಿಶ್ವಕಪ್‌ಗೆ ಕೇವಲ 2 ತಿಂಗಳಿರುವಾಗ ಅಫ್ಘಾನ್‌ ತಂಡದ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೀಗ ಎಲ್ಲರೂ ಹೊಂದಿಕೊಂಡು ಆಡಲಾರಂಭಿಸಿದ್ದಾರೆ.

Advertisement

ಸಂಭಾವ್ಯ ತಂಡ
ಆಸ್ಟ್ರೇಲಿಯ: ಫಿಂಚ್‌ (ನಾಯಕ), ವಾರ್ನರ್‌, ಉಸ್ಮಾನ್‌ ಖ್ವಾಜಾ/ಶಾನ್‌ ಮಾರ್ಷ್‌, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಸ್ಟಾರ್ಕ್‌, ಝಂಪ.

ಅಫ್ಘಾನಿಸ್ಥಾನ: ನೈಬ್‌ (ನಾಯಕ), ಶಾಜಾದ್‌, ಹಜ್ರತುಲ್ಲ ಜಜಾರಿ, ರಹಮತ್‌ ಶಾ, ಅಸYರ್‌ ಅಫ್ಘಾನ್‌, ಜದ್ರಾನ್‌, ನಬಿ, ರಶೀದ್‌ ಖಾನ್‌, ಮುಜೀಬ್‌ , ದೌಲತ್‌ ಜದ್ರಾನ್‌, ಅಫ್ತಾಬ್‌ ಆಲಂ.

Advertisement

Udayavani is now on Telegram. Click here to join our channel and stay updated with the latest news.

Next