Advertisement

ಡಿಜಿಟಲ್‌ ವ್ಯ ವಹಾರದಲಿ ಮೋಸವಿಲ್ಲ

03:16 PM Mar 16, 2022 | Team Udayavani |

ಕೋಲಾರ: ಗ್ರಾಹಕರು ವಸ್ತುಗಳನ್ನು ಕೊಂಡುಕೊಳ್ಳುವ ವೇಳೆ ಡಿಜಿಟಲ್‌ ಹಣಕಾಸು ವ್ಯವಹಾರ‌ವನ್ನು ಮಾಡುವ ಮೂಲಕ ಮೋಸ ಹೋಗುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ತಿಳಿಸಿದರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆದ ವಿಶ್ವ ಗ್ರಾಹಕರ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್‌ ಹಣಕಾಸು ಮಾಡುವುದರಿಂದ ತಮ್ಮ ವ್ಯವಹಾರದ ದಾಖಲೆಗಳು ಇರುತ್ತದೆ. ಇದರಲ್ಲಿ ಮೋಸವಾದರೇ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಪ್ರತಿದಿನ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಅಲ್ಲದೇ ಸಣ್ಣ ಪುಟ್ಟ ಆಂಗಡಿಗಳಲ್ಲಿಯೂ ಈ ಆನ್‌ಲೈನ್‌ ಪಾವತಿಯನ್ನು ಮಾಡಬಹುದಾಗಿದೆ. ಡಿಜಿಟಲ್‌ ಪಾವತಿ ಮಾಡುವುದರಿಂದ ದಾಖಲೆಗಳು ಇರುತ್ತದೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಆ ವಸ್ತುವಿನ ಪ್ರಮಾಣ, ದಿನಾಂಕ ಇವುಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಇತ್ತಿಚೀನ ದಿನಗಳಲ್ಲಿ ಗ್ರಾಹಕರು ಖರೀದಿಸು ತ್ತಿರುವ ದಿನ ನಿತ್ಯದ ವಸ್ತುಗಳಲ್ಲಿ ಮೋಸವಾಗುತ್ತಿರುವುದರಿಂದ ಗ್ರಾಹಕರು ಕಾನೂನು ರೀತಿಯ ಹಕ್ಕನ್ನು ಚಲಾಯಿಸಬೇಕು. ಗ್ರಾಹಕರಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ಯಾಕೇಜ್‌ ಗುಣಮಟ್ಟವನ್ನು ಗ್ರಾಹಕರು ಪರಿಶೀಲಿಸಬೇಕು. ಪ್ಯಾಕೇಜ್‌ ಒಳಗಿನ ಪದಾರ್ಥಗಳ ವಿವರಗಳನ್ನು ಆ ಪ್ಯಾಕೇಜ್‌ ಮೇಲೆ ಮುದ್ರಿಸಬೇಕು. ಗ್ರಾಹಕರು ತಾವು ಖರೀದಿಸಿರುವ ವಸ್ತುವಿನಲ್ಲಿ ಗುಣಮಟ್ಟವಿಲ್ಲದಿದ್ದಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ಹೋಗಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ಮಾತನಾಡಿ, ವಿಶ್ವ ಗ್ರಾಹಕರ ದಿನಾಚರಣೆ ಮಹತ್ವ ತಿಳಿಸಿಕೊಟ್ಟರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸೈಯದ್‌ ಅನ್ಸರ್‌ ಕಲಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಚ್‌. ಸೋಮಶಂಕರಪ್ಪ, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಎಂ.ಪಿ.ಪ್ರಭುದೇವ, ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್‌.ಸಿ.ಚೌಡೇಗೌಡ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ರಘು ಪತಿಗೌಡ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಕೆ.ಎಸ್‌.ನಾಗವೇಣಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next