Advertisement

ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು : ಡಾ|ಕೆ. ಮುರಳೀಧರನ್‌

12:00 AM Sep 05, 2019 | mahesh |

ಕಾಸರಗೋಡು: ಏಷ್ಯನ್‌ ಪೆಸಿಫಿಕ್‌ ತೆಂಗಿನ ಕಾಯಿ ಸಮುದಾಯದ ರಚನೆಯ ದಿನವಾದ ಸೆ. 2ರಂದು ವಿಶ್ವ ತೆಂಗಿನ ದಿನ ಆಚರಿಸಲಾಗುತ್ತಿದೆ. ತೆಂಗಿನ ಬೆಳೆಗಾರರಿಗೆ ಹೆಚ್ಚಿನ ಆದಾಯ ಪಡೆಯಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಭಾರತ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಉತ್ತೇಜಿಸಬೇಕಾಗಿದೆ ಎಂದು ಡಾ| ಕೆ. ಮುರಳೀಧರನ್‌ ಹೇಳಿದರು.

Advertisement

ವಿಶ್ವ ತೆಂಗಿನ ದಿನ ಆಚರಣೆಯ ಅಂಗವಾಗಿ ಕಾಸರಗೋಡು ಕೇಂದ್ರ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಯಲ್ಲಿ ತೆಂಗಿನ ಕಾಯಿಯಲ್ಲಿ ವೈಜ್ಞಾನಿಕ ಕೃಷಿ ಮತ್ತು ಸಂಸ್ಕರಣೆಯ ತಂತ್ರಜ್ಞಾನಗಳ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರ ಹಾಗು ಸಿಪಿಸಿಆರ್‌ಐ ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ ಕಾಸರಗೋಡು ಮತ್ತು ಕೊಚ್ಚಿಯ ತೆಂಗಿನ ಕಾಯಿ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೊಗ್ರಾಲ್ ಪುತ್ತೂರು ಪಂಚಾಯತ್‌ ಅಧ್ಯಕ್ಷ ಎ.ಎ.ಜಲೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸೂಕ್ಷ್ಮ ನೀರಾವರಿ ಮತ್ತು ವೈಜ್ಞಾನಿಕ ಕೃಷಿ ಎರಡೂ ಉತ್ಪಾದನೆ ಹಾಗೂ ಉತ್ಪಾದಕ ಹೆಚ್ಚಿಸುವ ಅಂಶಗಳಾಗಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಾರಿಗೊಳಿಸುತ್ತಿರುವ ಜಲಶಕ್ತಿ ಅಭಿಯಾನ ಕಾರ್ಯಕ್ರಮಕ್ಕೆ ಸೇರ್ಪಡೆಗೊಳ್ಳುವ ಮೂಲಕ ಎಲ್ಲ ಸಾರ್ವ ಜನಿಕರು ನೀರಿನ ಸಂರಕ್ಷಣಾ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದರು.

Advertisement

ತೆಂಗಿನ ಕಾಯಿ ಕೃಷಿಕರ ಅನುಕೂಲಕ್ಕಾಗಿ ತೆಂಗು ಕೃಷಿ ವಿಧಾನಗಳು ಎಂಬ ಶೀರ್ಷಿಕೆಯ ತೆಂಗಿನ ಕೃಷಿ ತಂತ್ರಜ್ಞಾನಗಳ ಪ್ರಕಟನೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ತೆಂಗಿನ ಕಾಯಿಯ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳ ಕುರಿತು ಡಾ| ಸಿ. ತಂಬಾನ್‌ ಮಾತನಾಡಿದರು. ತೆಂಗಿನ ಕಾಯಿಯಲ್ಲಿ ಕೀಟಗಳು ಮತ್ತು ರೋಗ ನಿರ್ವಹಣೆ ಎಂಬ ವಿಷಯ ಕುರಿತು ಡಾ| ಪಿ.ಎಸ್‌. ಪ್ರತಿಭಾ, ರೈತರ ಆದಾಯ ದ್ವಿಗುಣಗೊಳಿಸಲು ತೆಂಗಿನ ತೋಟಗಳಲ್ಲಿ ಸೂಕ್ಷ್ಮ ನೀರಾವರಿ ಮತ್ತು ನೀರಿನ ಸಂರಕ್ಷಣೆ ಎಂಬ ವಿಷಯದ ಕುರಿತು ವಿಜ್ಞಾನಿ ಡಾ| ಎ.ಸಿ. ಮ್ಯಾಥ್ಯೂ, ತೆಂಗಿನ ಕಾಯಿಯಲ್ಲಿ ಮೌಲ್ಯವರ್ಧನೆಗಾಗಿ ತಂತ್ರಜ್ಞಾನಗಳು ಎಂಬ ವಿಷಯ ಕುರಿತು ಡಾ| ಶೆಮೀಮಾ ಬೇಗಂ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next