Advertisement

ಬೆಂಗಳೂರಿನಲ್ಲಿ ವಿಶ್ವದರ್ಜೆಯ ಸಿಟಿ: ಎಂ.ಬಿ.ಪಾಟೀಲ್‌

11:47 PM Nov 10, 2023 | Team Udayavani |

ಬೆಂಗಳೂರು: ರಾಜ್ಯದ ಆರ್ಥಿಕ ವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡುವುದರ ಜತೆಗೆ ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಜ್ಞಾನ, ಆರೋಗ್ಯ, ಆವಿಷ್ಕಾರ ಮತ್ತು ಸಂಶೋಧನಾ ನಗರ(ಕೆಎಚ್‌ಐಆರ್‌ ಸಿಟಿ)ವನ್ನು ಅಭಿವೃದ್ಧಿಪಡಿಸಲು ಸರಕಾರ ಉದ್ದೇಶಿಸಿದ್ದು, ಬೆಂಗಳೂರಿನಿಂದ ಕೇವಲ 50-80 ಕಿ.ಮೀ. ದೂರದಲ್ಲಿ ಈ ನಗರ ತಲೆಯೆತ್ತಲಿದೆ.
ಜಗತ್ತಿನ ಪ್ರಸಿದ್ಧ ಕಂಪೆನಿಗಳು, ಕೇಂಬ್ರಿಡ್ಜ್ಗೆ

Advertisement

ಸರಿಸಮನಾದ ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಅತ್ಯಾಧುನಿಕ ಸ್ಟಾರ್ಟ್‌ಅಪ್‌ಗ್ಳು, ತಯಾರಿಕೆ ಕಂಪೆನಿಗಳು ಈ ನಗರದಲ್ಲಿರಲಿವೆ. ಈಗಾಗಲೇ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಿಲಿಕಾನ್‌ ಸಿಟಿಯು ಈ ಪ್ರಾಜೆಕ್ಟ್ನಿಂದ ಮತ್ತೂಂದು ಸ್ತರಕ್ಕೆ ಏರಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಈ ಸಂಬಂಧ ಏರ್ಪಡಿಸಿದ್ದ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರ ದುಂಡು ಮೇಜಿನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇವಿ ನೀತಿ ಇನ್ನು ಕ್ಲೀನ್‌ ಮೊಬಿಲಿಟಿ ನೀತಿ
ಇವಿ- ನೀತಿ’ (ವಿದ್ಯುತ್‌ಚಾಲಿತ ವಾಹನ ನೀತಿ)ಯನ್ನು ಕ್ಲೀನ್‌ ಮೊಬಿಲಿಟಿ ನೀತಿ’ ಎಂದು ಮರುನಾಮಕರಣ ಮಾಡಲು ಉದ್ದೇಶಿಸಿದ್ದು, ಹಲವು ಮಾರ್ಪಾಡುಗಳೊಂದಿಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next