Advertisement

World Cancer Day: ಕ್ಯಾನ್ಸರ್ ನಿಂದ ದೂರವಿರಲು ಮಾಡಬೇಕಿರುವುದಿಷ್ಟು

08:09 AM Feb 04, 2024 | Team Udayavani |

ವಿಶ್ವಾದ್ಯಂತ ಜನರಲ್ಲಿ ಜಾಗ್ರತಿ ಮೂಡಿಸಲು ಫೆಬ್ರವರಿ 04 ರಂದು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ಕ್ಯಾನ್ಸರ್ ದಿನ ಆಚರಿಸುತ್ತೇವೆ. ಕ್ಯಾನ್ಸರ್ ಬರಲು ಕಾರಣ ಹಾಗೂ ಅದರ ಪರಿಣಾಮ ಮತ್ತು ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಜಾಗ್ರತಿ ಕಾರ್ಯಕ್ರಮಗಳು ಆಚರಿಸಲಾಗುತ್ತದೆ.

Advertisement

ಕ್ಯಾನ್ಸರ್ ಬರಲು ಕಾರಣಗಳು:

ಹಾರ್ಮೋನ್ ಗಳಲ್ಲಿ ಅಸಮತೋಲನ.

ಧೂಮಪಾನ, ಮಧ್ಯಪಾನ, ತಂಬಾಕನ್ನು ಸೇವಿಸುವುದು.

ಸುತ್ತಲಿನ ಪರಿಸರ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದು ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ.

Advertisement

ನಾವು ಧೂಮಪಾನ ಮಾಡದ್ದಿದ್ದರೂ, ಧೂಮಪಾನ ಮಾಡುವವರ ಜೊತೆ ಇದ್ದರೆ ಅಥವಾ ಧೂಮಪಾನದ ಹೊಗೆಯನ್ನು ಉಸಿರಾಡುತ್ತಿದರೆ ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಕ್ಯಾನ್ಸರ್ ಲಕ್ಷಣಗಳು:

ಆಯಾಸವಗುವುದು

ದೇಹದ ತೂಕದಲ್ಲಿ ಬದಲಾವಣೆ

ನುಂಗಲು ತೊಂದರೆ

ಸ್ನಾಯು ಮತ್ತು ಕೀಲು ನೋವು

ವಿವರಿಸಲಾಗದ ಜ್ವರ ಮತ್ತು ರಾತ್ರಿ ಬೆವರುವಿಕೆ

ಕೂದಲು ಉದುರುವಿಕೆ

ನಿರಂತರ ಕೆಮ್ಮು ಅಥವಾ ಉಸಿರಾಟದ ತೊಂದರೆ

 ಕ್ಯಾನ್ಸರ್ ತಡೆಗಟ್ಟಲು ಕ್ರಮಗಳು:

ಧೂಮಪಾನ ಮಾಡದಿರುವುದು

ಆರೊಗ್ಯಕರ ಆಹಾರವನ್ನು ಸೇವಿಸುವುದು

ವ್ಯಾಯಮ ಮಾಡುವುದು

ಮದ್ಯಪಾನ, ತಂಬಾಕು ಸೇವಿಸದಿರುವುದು

ಅತಿಯಾದ ಬೊಜ್ಜು ಪದಾರ್ಥ, ಮಾಂಸವನ್ನು ಮಿತಿಯಾಗಿ ಸೇವಿಸುವುದು

ಕ್ಯಾನ್ಸರ್ ಗೆ ಚಿಕಿತ್ಸೆಗಳು:

ಕೀಮೊಥೆರಪಿ, ಇದು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ

ಹಾರ್ಮೊನ್ ಥೆರಪಿ

ಹೈಪರ್ಥರ್ಮಿಯಾ, ಇದರಲ್ಲಿ ದೇಹದ ಅಂಗಾಂಶವನ್ನು 113°F ವರೆಗೆ ಬಿಸಿಮಾಡಲಾಗುತ್ತದೆ. ಇದರಿಂದ ಕಾನ್ಸರ್ ಕೋಶಗಳು ಕೊಲ್ಲಲ್ಪಡುತ್ತದೆ.

ಇಮ್ಯುನೋಥೆರಪಿ, ಇದೊಂದು ರೋಗನಿರೋಧಕ ವ್ಯವಸ್ಥೆಯ ಚಿಕಿತ್ಸೆ.

ಫೋಟೋ ಡೈನಾಮಿಕ್ ಥೆರಪಿ, ಇದರಲ್ಲಿ ಬೆಳಕಿನ ಸಹಾಯದಿಂದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾರೆ.

ಶಸ್ತ್ರಚಿಕಿತ್ಸೆ.

 

“ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ”

ಹಾಗೆ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟಲು ಆದಷ್ಟು ಪ್ರಯತ್ನ ಪಡೋಣ.

 

ಬಿ.ಶರಣ್ಯ ಜೈನ್

ಎಸ್.ಡಿ. ಎಂ.ಕಾಲೇಜು ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next