ಮಾಗಡಿ: ಯುವಕರು ದುಷcಟಗಳಿಂದ ದೂರ ಇರಬೇಕು. ಮಹಿಳೆಯರು ಸಹ ತಂಬಾಕು ಸೇವನೆ ಬಿಡಬೇಕು ಎಂದು ಕೃಷಿಕ ಸಮಾಜದ ದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್ ತಿಳಿಸಿದರು.
ತಾಲೂಕಿನ ಹುಲೀಕಟ್ಟೆ ಗ್ರಾಮದಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ರೈತ ಮಹಿಳೆಯರಿಗೆ ಔಷಧಿ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ಯುವಕರುಗಾಂಜಾ, ಮದ್ಯ ಸೇವನೆ, ಬೀಡಿ, ಸಿಗರೇಟ್‌ದಾಸರಾಗುತ್ತಿರುವುದು ಬಿಟ್ಟರೆ ದೇಶವು ಕ್ಯಾನ್ಸರ್ ಮುಕ್ತರಾಷ್ಟ್ರವಾಗುತ್ತದೆ. ಮಹಿಳೆಯರಿಗೆ ಸ್ತ್ರೀಯರಿಗೆ ಮುಖ್ಯವಾಗಿ ಎದೆಯಲ್ಲಿ ಗಂಟು ಆಗುವುದು. ಅಥವಾಗರ್ಭಕೋಶದ ಕೆಳಭಾಗದಲ್ಲಿ ಬಿಳಿಸೆರಗು ಹೋಗುವುದು ಅಥವಾ ರಕ್ತ ಹೋಗುವುದು ಈ ತರದ ಯಾವುದೇ ಸಮಸ್ಯೆ ಇದ್ದರೆ ಕೆಲವರು ಮುಜುಗರಕ್ಕೀಡಾಗುತ್ತಾರೆ. ಇದನ್ನು ವೈದ್ಯರ ಬಳಿ ಹೇಳಿಕೊಳ್ಳುವುದಿಲ್ಲ. ಆದರೆ ಈ ರೀತಿ ಮರೆಮಾಚುವುದರಿಂದ ಸಮಸ್ಯೆ ಇನ್ನೂ ಹೆಚ್ಚು ಆಗುತ್ತದೆ ಎನ್ನುತ್ತಾರೆ ವೈದ್ಯರು.
ತಪಾಸಣೆ ಮಾಡಿಸಿ: ಸಮಸ್ಯೆ ದೊಡ್ಡದಾದ ಬಳಿಕ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಗೆ ಒಳಪಟ್ಟರೆ ಗುಣ ಪಡಿಸಲು ಕಷ್ಟವಾಗುತ್ತೆ. ಹಾಗಾಗಿ ಸ್ನಾನ ಮಾಡುವಾಗ ಅಥವಾ ಇನ್ಯಾವುದೇ ಸಮಯದಲ್ಲಿ ತಮ್ಮ ಎದೆಯ ಭಾಗದಲ್ಲಿ ಗಂಟು ಇರುವುದು ತಿಳಿದುಬಂದರೆ ಕೂಡಲೇಪರೀಕ್ಷೆಗೆ ಒಳಗಾಗುವುದು ಒಳ್ಳೆಯದು. ಒಂದು ವೇಳೆ ಇದು ಕ್ಯಾನ್ಸರ್ ಆಗಿದ್ದರೆ ಕಾಯಿಲೆಯನ್ನು ಸಹ ಬೇಗ ಗುಣಪಡಿಸಲು ಸಾಧ್ಯವಾಗುತ್ತೆ.
ರೋಗ ಲಕ್ಷಣಗಳು: ಇದೇ ರೀತಿ ಗರ್ಭಕೋಶದ ಕೆಳಭಾಗದಲ್ಲಿ ಬಿಳಿಸೆರಗು ಹೋಗುವುದು ಅಥವಾ ಮುಟ್ಟು ಇಲ್ಲದಿರುವ ಸಂದರ್ಭಗಳಲ್ಲೂ ರಕ್ತ ಹೋಗುವುದು ಕೂಡ ಇದರ ಗುಣ ಲಕ್ಷಣಗಳಾಗಿವೆ. ಇದಲ್ಲದೆ ಮೂತ್ರ ಹೋಗುವಾಗ ರಕ್ತ ಹೋಗುವುದು ಅಥವಾ ಸರಿಯಾಗಿ ಮೂತ್ರ ಹೋಗಲು ಸಾಧ್ಯವಾಗದಿರುವುದು ಅಥವಾ ಕಷ್ಟವಾಗುವುದು. ಈ ರೀತಿ ನೋವು ಅಥವಾಉರಿ ಇಲ್ಲದಿದ್ದರೂ ಆದಷ್ಟು ಬೇಗ ಚೆಕ್ ಮಾಡಿಸಿ ಚಿಕಿತ್ಸೆಪಡೆದರೆ ಇದನ್ನು ಬೇಗನೆ ಗುಣಪಡಿಸಬಹುದು. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಿರಿ: ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು ಅತೀಬೇಗನೆ ಕಂಡು ಹಿಡಿದರೆ ಸುಲಭವಾಗಿ ಗುಣಪಡಿಸಬಹುದು ಎನ್ನುತ್ತಾರೆ.
ವೈದ್ಯರು, ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಕಂಡುಹಿಡಿದು ಚಿಕಿತ್ಸೆಯನ್ನು ಪಡೆಯುವುದರಿಂದ ಅದನ್ನು ಗುಣಪಡಿಸಬಹುದು. ಹಾಗೂ ವ್ಯಕ್ತಿ ಮೊದಲಿ ನಂತೆಯೇ ಆಗುವಂತೆ ಮಾಡಬಹುದು ಹಾಗೂ ತನ್ನದಿನ ನಿತ್ಯದ ಯಾವುದೇ ಕೆಲಸದಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳ ಬಹುದು ಎಂದು ತಿಳಿಸಿದರು. ಹುಲಿಕಟ್ಟೆ ಶಾಲೆಯ ಶಿಕ್ಷಕ ಚಂದ್ರಶೇಖರ್, ಕವಿತಾ, ಗಜಲಕ್ಷ್ಮೀ, ಇತರರು ಭಾಗವಹಿಸಿದ್ದರು.