Advertisement
ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ “ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ”. ಈ ಅಂತರಾಷ್ಟ್ರೀಯ ಆಂದೋಲನವು ಮಾಹಿತಿಯ ಅಂತರವನ್ನು ಮುಚ್ಚಲು ಮತ್ತು ಮೆದುಳಿನ ಆರೋಗ್ಯದ ದುರ್ಬಲತೆಗಳ ಬಗ್ಗೆ ಸಾರ್ವಜನಿಕ ಅರಿವನ್ನು ಹೆಚ್ಚಿಸಲು ಶ್ರಮಿಸುತ್ತದೆ. ಇದು ವಿಕಲಾಂಗ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
Related Articles
Advertisement
ಮತ್ತೋರ್ವ ಗೌರವ ಅತಿಥಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಮೆದುಳಿನ ಆರೋಗ್ಯದ ಕುರಿತಾದ ಭಿತ್ತಿಪತ್ರ (ಪೋಸ್ಟರ್) ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದ ಕುರಿತು ಅವಲೋಕನ ನೀಡಿದ ನರರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಅಪರ್ಣಾ ಆರ್. ಪೈ ಮೆದುಳಿನ ದಿನದ ಜಾಗೃತಿ ಅಂಗವಾಗಿ ಆಸ್ಪತ್ರೆಯ ಫೇಸ್ಬುಕ್ ಜಾಲತಾಣದಲ್ಲಿ ಮೆದುಳು ಆರೋಗ್ಯದ ಕುರಿತು ಸರಣಿ ಮಾತು ಇಂದು ಬಿತ್ತರಗೊಳ್ಳೊತ್ತಿದೆ ಎಂದರು.
ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ ಈ ವರ್ಷದ ಘೋಷ ವಾಕ್ಯವಾದ, ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯದ ಕುರಿತು ವಿವರವಾದ ಅವಲೋಕನ ನೀಡಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀಪದ್ಮ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು.