ನವದೆಹಲಿ: ಮೇರಿ ಕೋಮ್ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಮಹಿಳಾ ಕೂಟದಲ್ಲೇ ಅತೀ ಹೆಚ್ಚು (6 ಚಿನ್ನ) ಪದಕ ಗೆದ್ದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದಾರೆ.
57 ಕೆ.ಜಿ ವಿಭಾಗದ ಮತ್ತೂಂದು ಫೈನಲ್‌ನಲ್ಲಿ ನಿರೀಕ್ಷೆ ಮೂಡಿಸಿದ್ದ ಭಾರತದ ಮತ್ತೋರ್ವ ಬಾಕ್ಸರ್ ಸೋನಿಯಾ ಚಾಹಲ್ ಜರ್ಮನಿ ಆಟಗಾರ್ತಿ ಒರೆ°ಲಾ ಗ್ಯಾಬ್ರಿಲೆ ವಿರುದ್ಧ 1-4 ಅಂಕಗಳಿಂದ ಸೋತಿದ್ದಾರೆ. ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್‌ನಲ್ಲಿ ಮೇರಿ ಕೋಮ್ 5-0 ಅಂತರದಿಂದ ಉಕ್ರೇನಿನ ಹನ್ನಾ ಒಕೊØàಟಾರನ್ನು ಸೋಲಿಸಿದರು. 48 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್ ಬಿರುಸಿನ ಪಂಚಿಂಗ್ ಮೂಲಕ ಎದುರಾಳಿಯನ್ನು ನಡುಗಿಸಿದರು. ಮಾತ್ರವಲ್ಲ ಸಂಪೂರ್ಣವಾಗಿ ತಲೆ ತಗ್ಗಿಸುವಂತೆ ಮಾಡಿ ಒಟ್ಟಾರೆ ವಿಶ್ವ ಕೂಟದ 6ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಮೇರಿ ಕೋಮ್ ಒಟ್ಟಾರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 7 ಪದಕ ಗೆದ್ದಂತಾಗಿದೆ. 2001ರಲ್ಲಿ ಮೊದಲ ಸಲ ವಿಶ್ವ ಕೂಟದಲ್ಲಿ ಮೇರಿ ಕೋಮ್ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿ ಪದಕ ಪಡೆದಿದ್ದರು. ಇದಾದ ಬಳಿಕ ಸತತ ಐದು ಬಾರಿ (2002, 2005, 2006, 2008 ಹಾಗೂ 2010) ಮೇರಿ ಕೋಮ್ ಚಿನ್ನದ ಪದಕ ಬಾಚಿಕೊಂಡಿದ್ದರು.
ವಿಶ್ವ ದಾಖಲೆ ಸಮ: ಒಟ್ಟಾರೆ ವಿಶ್ವ ಬಾಕ್ಸಿಂಗ್‌ನ ದಾಖಲೆಯೊಂದನ್ನು ಮೇರಿ ಕೋಮ್ ಸಮಗಟ್ಟಿದ್ದಾರೆ. ಕ್ಯೂಬಾ ಬಾಕ್ಸಿಂಗ್ ದಂತಕಥೆ ಫಿಲಿಕ್ಸ್ ಸಾವೊನ್ ಪುರುಷರ ವಿಭಾಗದ ವಿಶ್ವ ಬಾಕ್ಸಿಂಗ್ ಕೂಟದಲ್ಲಿ 6 ಚಿನ್ನದ ಪದಕ ಗೆದ್ದಿದ್ದರು. ಈ ದಾಖಲೆಯನ್ನು ಈಗ ಮೇರಿ ಕೋಮ್ ಸಮಗೊಳಿಸಿದ್ದಾರೆ. ಫಿಲಿಕ್ಸ್ ಮೂರು ಸಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ತಾರೆಯಾಗಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಈ ಹಿಂದೆ ಐರೆಲಂಡ್‌ನ ಕಾಟೆ ಟೇಲರ್ 5 ಸಲ ಚಿನ್ನದ ಪದಕ ಗೆದ್ದಿದ್ದರು. ಕೂಟ ಆರಂಭಕ್ಕೂ ಮೊದಲು ಮಣಿಪುರ ಬಾಕ್ಸರ್ ಟೇಲರ್ ಜತೆಗೆ 5 ಚಿನ್ನದ ಪದಕ ಜಂಟಿ ದಾಖಲೆ ಹೊಂದಿದ್ದರು. ಇದೀಗ ಕಾಟೆ ಟೇಲರ್ ದಾಖಲೆಯನ್ನು ಮೇರಿ ಮುರಿದಿದ್ದಾರೆ.
ಮೇರಿ ಕೋಮ್ ಗೆದ್ದ ವಿಶ್ವ ಬಾಕ್ಸಿಂಗ್
ವರ್ಷ ಸ್ಥಳ-ವಿಭಾಗ ಪದಕ
2001 ಸಾðಂಟನ್ (48 ಕೆ.ಜಿ) ಬೆಳ್ಳಿ
2002 ಅಂತ್ಯಾಲ (45 ಕೆ.ಜಿ) ಚಿನ್ನ
2005 ಪೊಡೋಲ್ಸ್$R(46 ಕೆ.ಜಿ) ಚಿನ್ನ
2006 ನವದೆಹಲಿ (46 ಕೆ.ಜಿ) ಚಿನ್ನ
2008 ನಿಂಗ್ಬೊ ಸಿಟಿ (46 ಕೆ.ಜಿ) ಚಿನ್ನ
2010 ಬ್ರಿಡ್ಜ್ಟೌನ್ (48 ಕೆ.ಜಿ) ಚಿನ್ನ
2018 ನವದೆಹಲಿ (48 ಕೆ.ಜಿ) ಚಿನ್ನ
ಪ್ರಧಾನಿ ಮೋದಿ ಅಭಿನಂದನೆ
ಮೇರಿ ಕೋಮ್ ಐತಿಹಾಸಿಕ ಚಿನ್ನ ಗೆಲ್ಲುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಅಭಿನಂದನೆ ಹೇಳಿದ್ದು, ಇದೊಂದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
“ಭಾರತೀಯ ಕ್ರೀಡೆಗೆ ಇಂದು ಹೆಮ್ಮೆಯ ದಿನ. ಅವರ ಗೆಲುವು ನಿಜವಾಗಿಯೂ ವಿಶೇಷತೆಯಿಂದ ಕೂಡಿದೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೇರಿ ಕೋಮ್ ಅವರಿಗೆ ಅಭಿನಂದನೆಗಳು’ ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ.