ಭಾರತೀಯ ವಾಯುಸೇನೆಯಲ್ಲಿರುವ 26ರ ಹರೆಯದ ಕವಿಂದರ್ ಬಿಷ್ಟ್ ಚೀನದ ಸ್ಪರ್ಧಿಗೆ ಭರ್ಜರಿ ಪಂಚ್ ಕೊಟ್ಟು ಮುಖದಲ್ಲಿ ರಕ್ತ ಸುರಿಯುವಂತೆ ಮಾಡಿದರು. 2017ರ ಹ್ಯಾಂಬರ್ಗ್ ವಿಶ್ವ ಕೂಟದಲ್ಲಿ ಕ್ವಾರ್ಟರ್ ಫೈನಲ್ ತನಕ ಸಾಗಿದ್ದ ಬಿಷ್ಟ್, ಈ ಬಾರಿ ಪದಕವೊಂದನ್ನು ಗೆಲ್ಲುವ ಭಾರತದ ನೆಚ್ಚಿನ ಸ್ಪರ್ಧಿ ಆಗಿದ್ದಾರೆ.
ಕವಿಂದರ್ ಬಿಷ್ಟ್ ಅವರಿಗೂ ಮುನ್ನ ಅಮಿತ್ ಪಂಘಲ್ (52 ಕೆಜಿ), ಮನೀಷ್ ಕೌಶಿಕ್ (63 ಕೆಜಿ) ಕೂಡ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು.
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಲು ಇದು ಮಹತ್ವದ ಕೂಟವಾಗಿದ್ದು, 10ರ ಬದಲು 8 ಪರಿಷ್ಕೃತ ತೂಕ ವಿಭಾಗಗಳಲ್ಲಿ ಈ ಅರ್ಹತೆ ಲಭಿಸಲಿದೆ (52, 57, 63, 69, 75, 81, 91, +91 ಕೆಜಿ ವಿಭಾಗ).
Advertisement