ಹಲವಾರು ಜನರಲ್ಲಿ ಒಂದೊಂದು ಅಭಿಪ್ರಾಯಗಳಿದ್ದು, ಕೇವಲ ದುಡ್ಡಿದ್ದರಷ್ಟೇ ಮಾತ್ರ ನಾವು ಬೇರೆಯವರಿಗೆ ಸಹಕರಿಸಬಹುದು ಅಂದುಕೊಂಡಿರುತ್ತಾರೆ. ಆದರೆ ಅದು ಅವರಲ್ಲಿರುವ ಬಹುದೊಡ್ಡ ತಪ್ಪು ಅಭಿಪ್ರಾಯ. ಎಂದಿಗೂ ಕೂಡ ಹಣ ಒಂದೇ ಉಪಕರಿಸುವ ಮಾನದಂಡವಾಗುವುದಿಲ್ಲ. ಸಹಕರಿಸಲು ನಿಜವಾದ ಮನಸ್ಸೊಂದಿದ್ದರೆ ಸಾಕು, ನೆರವಾಗಲು ಸಾವಿರಾರು ದಾರಿಗಳಿವೆ.
ಹೌದು ಜೂನ್ 14 ವಿಶ್ವ ರಕ್ತದಾನಿಗಳ ದಿನ ಯಾವುದೇ ಸ್ವಾರ್ಥವನ್ನೂ ಬಯಸದೇ ಅಳಿವು -ಉಳಿವಿನಲ್ಲಿರುವ ಜೀವವನ್ನು ರಕ್ಷಿಸುವ ನಿಜವಾದ ಹೀರೋಗಳೇ ರಕ್ತದಾನಿಗಳು. ಪ್ರತಿಯೊಬ್ಬ ಮನುಷ್ಯನ ಜೀವಕ್ಕೆ ಅವಶ್ಯಕವಾದುದು ರಕ್ತ. ದೇಹದ ರಕ್ತದ ಪ್ರಮಾಣದಲ್ಲಿ ಸ್ವಲ್ಪ ಏರುಪೇರಾದರೂ ಕೂಡ ಅಂದು ಮನುಷ್ಯನ ಪ್ರಾಣಕ್ಕೆ ಕುತ್ತು ಬರುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುವವ ಜೀವ ರಕ್ಷಕರೇ ರಕ್ತದಾನಿಗಳು.
ಇಂತಹ ಸಂದರ್ಭಗಳಲ್ಲಿ ವೈದ್ಯರ ನೆರವು ಎಷ್ಟು ಅಗತ್ಯವೋ ಅಷ್ಟೇ ಪ್ರಮುಖವಾದವರು ರಕ್ತದಾನಿಗಳು. ನಮ್ಮನ್ನು ರಕ್ಷಿಸುತ್ತಿರುವ ಕಣ್ಣಿಗೆ ಕಾಣದ ದೇವರಿದ್ದರೆ, ಕಣ್ಣಿಗೆ ಕಾಣುವ ದೇವರ ಸ್ವರೂಪದಲ್ಲಿರುವವರು ರಕ್ತದಾನಿಗಳು. ಪ್ರತಿಯೊಬ್ಬ ಆರೋಗ್ಯಕರ ವ್ಯಕ್ತಿಯೂ ಕೂಡ ವೈದ್ಯರ ಸಲಹೆಯ ಮೇರೆಗೆ ರಕ್ತದಾನ ಮಾಡಬಹುದಾಗಿದೆ. ಇದರಿಂದ ಒಂದು ಜೀವವನ್ನು ಉಳಿಸಬಹುದಾಗಿದೆ. ಹಾಗೆಯೇ ರಕ್ತದಾನದ ಬಗೆಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕಾಗಿದೆ.
ಪ್ರಜ್ವಲ್ ಕುಮಾರ್
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ಎಂ. ಜಿ. ಎಂ. ಕಾಲೇಜು ಉಡುಪಿ.