Advertisement

ಅರ್ಥ ವ್ಯವಸ್ಥೆ ಬೆಳವಣಿಗೆ ಇಳಿಕೆ : ವಿಶ್ವ­ಬ್ಯಾಂಕ್‌

02:08 AM Oct 07, 2022 | Team Udayavani |

ವಾಷಿಂಗ್ಟನ್‌: ಪ್ರಸಕ್ತ ವಿತ್ತೀಯ ವರ್ಷಕ್ಕಾಗಿ ದೇಶದ ಅರ್ಥ ವ್ಯವಸ್ಥೆ ಶೇ.6.5ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ವಿಶ್ವ­ಬ್ಯಾಂಕ್‌ ಗುರುವಾರ ಹೇಳಿದೆ.

Advertisement

ಆದರೆ, ಜಗತ್ತಿನ ಇತರ ರಾಷ್ಟ್ರಗಳ ಅರ್ಥ ವ್ಯವಸ್ಥೆಗ­ಳಿಗೆ ಹೋಲಿಕೆ ಮಾಡಿದರೆ, ಕೊರೊನಾ ಅನಂತರದಲ್ಲಿ ಭಾರತದ ಅರ್ಥ ವ್ಯವಸ್ಥೆ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಿದೆ. ಜಗತ್ತಿನ ಒಟ್ಟಾರೆ ವಾತಾ­ವರಣ ಕೈಮೀರಿ ಹೋಗುತ್ತಿರುವುದರಿಂದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಾಗಿ, ಜೂನ್‌ನಲ್ಲಿ ಇದ್ದ ಶೇ.6.6ಕ್ಕಿಂತ ಶೇ.1ರಷ್ಟು ಬೆಳವಣಿಗೆ ನಿರೀಕ್ಷೆಯನ್ನು ಕಡಿಮೆಗೊಳಿ­ಸುತ್ತಿರುವುದಾಗಿ ಅದು ಪ್ರತಿಪಾದಿಸಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಭಾರತದ ಸ್ಥಿತಿ ಅತ್ಯುತ್ತಮವೇ ಆಗಿದೆ. ಆದರೆ ಜಗತ್ತಿನಲ್ಲಿ ಉಂಟಾಗು­ತ್ತಿರುವ ತಲ್ಲಣಗಳಿಂದಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.6.5ರ ದರದಲ್ಲಿ ಅರ್ಥ ವ್ಯವಸ್ಥೆ ಬೆಳವಣಿಗೆ ಕಾಣಲಿದೆ ಎಂದು ದಕ್ಷಿಣ ಏಷ್ಯಾಕ್ಕಾಗಿನ ವಿಶ್ವಬ್ಯಾಂಕ್‌ನ ಹಣ­ಕಾಸು ತಜ್ಞ ಹ್ಯಾನ್ಸ್‌ ಟಿಮ್ಮರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next