Advertisement
20 ವರ್ಷಗಳ ಬಳಿಕ ಹೆಚ್ಚಳಸದ್ಯದ ಪರಿಸ್ಥಿತಿಯನ್ನು ಮಹಾಬಿಕ್ಕಟ್ಟು ಎಂದು ವಿಶ್ವ ಬ್ಯಾಂಕ್ ಪರಿಗಣಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಉದ್ಯಮಗಳು ಮುಚ್ಚುವ ಲಕ್ಷಣಗಳು ಗೋಚರವಾಗುತ್ತಿವೆ ಎಂಬ ಎಚ್ಚರಿಕೆ ನೀಡಿದೆ. ಇದರ ಪರಿಣಾಮ 1998ರ ನಂತರ ಮೊದಲ ಬಾರಿಗೆ ಜಾಗತಿಕವಾಗಿ ಬಡವರ ಪ್ರಮಾಣ ಹೆಚ್ಚಳವಾಗುತ್ತದೆ. ಇತ್ತೀಚೆಗಷ್ಟೇ ಬಹಿರಂಗಗೊಳಿಸಿರುವ ಅಂಕಿಅಂಶಗಳು ಸದ್ಯದಲ್ಲೇ ವಾಸ್ತವದಲ್ಲಿ ಕಾಣಲಿದೆ ಎಂದು ಹೇಳಿದೆ.
ಸೋಂಕಿನಿಂದ ನಲುಗಿರುವ ಆಫ್ರಿಕ ಖಂಡದಲ್ಲಿ ಸಮಸ್ಯೆಗಳ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಸಹಾರ ಉಪಖಂಡದ ಜನರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ವಿಶ್ವಸಂಸ್ಥೆ ಆಫ್ರಿಕನ್ ಕಮಿಷನ್ ಆನ್ ಹ್ಯೂಮನ್ ಆ್ಯಂಡ್ ಪೀಪಲ್ಸ… ರೈಟ್ಸ್‌ನ ಅಧ್ಯಕ್ಷ ಸೊಲೊಮನ್ ಡೆಸೊರ್ ಸಾಂಕ್ರಾಮಿಕ ರೋಗಗಳ ನೆಲೆಯಾಗಿರುವ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಶಕ್ತವಾಗಿರುವ ಆಫ್ರಿಕ ದೇಶಗಳ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ಭರವಸೆಯ ನುಡಿಗಳನ್ನಾಡಿದ್ದಾರೆ. ಆದರೂ ವಿಶ್ವ ಬ್ಯಾಂಕಿನ ಪ್ರಕಾರ 100 ದೇಶಗಳ ಪೈಕಿ 39 ದೇಶಗಳ ಕನಿಷ್ಠ 2.3 ಕೋಟಿ ನಿವಾಸಿಗಳು ಕೋವಿಡ್‌ನಿಂದ ಕಡು ಬಡತನದತ್ತ ಸಾಗುವ ನಿರೀಕ್ಷೆಯಿದೆ. ದಕ್ಷಿಣ ಏಷ್ಯಾವೂ ಇದೇ ಹಾದಿಯತ್ತ ಸಾಗುತ್ತಿದ್ದು, ನೈಜೀರಿಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ಜತೆಗೆ ಭಾರತದಲ್ಲಿಯೂ ಬಡವರ ಪ್ರಮಾಣದಲ್ಲಿ ಅತಿದೊಡ್ಡ ಬದಲಾವಣೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
Related Articles
Advertisement