Advertisement

ಅರ್ಥ ವ್ಯವಸ್ಥೆ ಶೇ.7.5 ವೃದ್ಧಿ

03:10 AM Jun 07, 2018 | Team Udayavani |

ವಾಷಿಂಗ್ಟನ್‌ : ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗಿರುವ ಅರ್ಥ ವ್ಯವಸ್ಥೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. ಇದರ ಜತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.3ರಷ್ಟು ಬೆಳವಣಿಗೆ ಸಾಧಿಸಲಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಶೇ.7.5ರಷ್ಟು  ಬೆಳವಣಿಗೆ ದಾಖಲಿಸಲಿದೆ ಎಂದು ಮಂಗಳವಾರ ವಾಷಿಂಗ್ಟನ್‌ ನಲ್ಲಿ ಬಿಡುಗಡೆ ಮಾಡಲಾಗಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2018-19ನೇ ವಿತ್ತೀಯ ವರ್ಷಕ್ಕೆ ಭಾರತದ ಅರ್ಥ ವ್ಯವಸ್ಥೆ ಶೇ. 7.3ರಷ್ಟು ಬೆಳವಣಿಗೆ ಸಾಧಿಸಲಿದೆ. 2019-20ನೇ ಸಾಲಿಗಾಗಿ ಅದು ಶೇ.7.5ಕ್ಕೆ ವೃದ್ಧಿಸಲಿದೆ ಎಂದು ವಿಶ್ವಬ್ಯಾಂಕ್‌ ನ ಅಭಿವೃದ್ಧಿ ಮುನ್ಸೂಚಕ ವಿಭಾಗದ ನಿರ್ದೇಶಕ ಐಹಾನ್‌ ಕೋಸೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next