Advertisement

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಕೆ. ಶ್ರೀಕಾಂತ್‌ ಗೆಲುವು

10:56 PM Dec 13, 2021 | Team Udayavani |

ವೆಲ್ವಾ (ಸ್ಪೇನ್‌): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೆ. ಶ್ರೀಕಾಂತ್‌ ಗೆಲುವಿನ ಆರಂಭ ಪಡೆದರೆ, ಬಿ. ಸಾಯಿ ಪ್ರಣೀತ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದರು.

Advertisement

12ನೇ ಶ್ರೇಯಾಂಕದ ಕೆ. ಶ್ರೀಕಾಂತ್‌ ಆತಿಥೇಯ ಸ್ಪೇನ್‌ನ ಪಾಬ್ಲೊ ಅಬಿಯನ್‌ ಅವರನ್ನು 36 ನಿಮಿಷಗಳ ಹೋರಾಟದ ಬಳಿಕ 21-12, 21-16 ಅಂತರದಿಂದ ಮಣಿಸಿದರು.

ಬಿ. ಸಾಯಿ ಪ್ರಣೀತ್‌ ಅವರನ್ನು ಹಾಲೆಂಡ್‌ನ‌ ಮಾರ್ಕ್‌  21-17, 7-21, 21-18ರಿಂದ ಹಿಮ್ಮೆಟ್ಟಿಸಿದರು.

ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮೀತ್‌ ರೆಡ್ಡಿ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಡೆನ್ಮಾರ್ಕ್‌ನ ಜೋಯೆಲ್‌ ಎಲ್ಪೆ-ರಾಸ್ಮಸ್‌ ಜೇರ್‌ 21-16, 21-15 ಅಂತರದಿಂದ ಭಾರತೀಯ ಜೋಡಿಯನ್ನು ಪರಾಭವ ಗೊಳಿಸಿದರು.

ಇದನ್ನೂ ಓದಿ:ಚಿನ್ನ ಗೆದ್ದ ಅಜಯ್‌ ಸಿಂಗ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ಆಯ್ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next