Advertisement

ಸ್ವಲೀನತೆ ಮಕ್ಕಳನ್ನು ಪ್ರೀತಿಯಿಂದ ಕಾಣಿರಿ

12:55 AM Apr 02, 2021 | Team Udayavani |

ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆಟಿಸಂ ಮಾನಸಿಕ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಹೆಚ್ಚಾಗಿ ಮಕ್ಕಳ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಸರಿಸುಮಾರು 3ನೇ ವರ್ಷದಲ್ಲಿ ಈ ಸಮಸ್ಯೆಯ ಲಕ್ಷಣ ಗಳು ಕಾಣಸಿಗುತ್ತವೆ. ಲಕ್ಷಣಗಳು ಅವ್ಯಕ್ತವಾಗಿರುತ್ತವೆ. ಸಾಧ್ಯವಾದಷ್ಟು ಬೇಗನೆ ಆಟಿಸಂ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ  ಸಮಾ ಜದ ಮುಖ್ಯವಾಹಿನಿಯಿಂದ ದೂರವುಳಿಯುತ್ತಾರೆ.

Advertisement

ವಿಶ್ವ ಆಟಿಸಂ ಜಾಗೃತಿ ದಿನ :

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಬುದ್ಧಿಮಾಂದ್ಯ ರಲ್ಲ. ಅಂಥ ಮಕ್ಕಳು ಇತರ ಮಕ್ಕಳಂತೆಯೇ ಇರುತ್ತಾರೆ. ಅವರ ಕೆಲವು ನಡವಳಿಕೆಗಳು ಭಿನ್ನವಾಗಿರಬಹುದು. ಆದರೆ ಅವ

ರಿಗೂ ಸಮಾಜದಲ್ಲಿ ಇತರ ಮಕ್ಕ ಳಂತೆ ಶಿಕ್ಷಣ ಪಡೆಯುವ, ವಿಶೇಷ ಕೌಶಲಗಳನ್ನು ಕಲಿಯುವ ಹಕ್ಕಿದೆ. ಅವರೂ ಬುದ್ಧಿವಂತರು ಎಂಬುದನ್ನು ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಈ ನಿಟ್ಟಿನಲ್ಲಿ ವಿಶೇಷವಾದ ಜಾಗೃತಿ ಕಾರ್ಯ ಕ್ರಮಗಳು ನಡೆಯಬೇಕು. ಜನರ ಈ ಕಾಯಿಲೆ ಕುರಿತಾಗಿನ ಪೂರ್ವಾಗ್ರಹಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯು  ಎಪ್ರಿಲ್‌ 2 ಅನ್ನು     ವಿಶ್ವ ಆಟಿಸಂ ಜಾಗೃತಿ ದಿನ ಎಂದು ಘೋಷಿಸಿದೆ.

ರೋಗದ ಲಕ್ಷಣಗಳು :

Advertisement

ಆಟಿಸಂ ಸಮಸ್ಯೆಯ ಮಕ್ಕಳು ತಮ್ಮದೇ ಆದ ಪ್ರಪಂಚದಲ್ಲಿ ತಲ್ಲೀನರಾಗಿರುತ್ತಾರೆ. ಮತ್ತೆ ಮತ್ತೆ ಮಾಡಿದ್ದನ್ನೇ ಮಾಡುತ್ತಿರುತ್ತಾರೆ. ಯಾವುದೇ ವಿಷಯದ ಚಟು ವಟಿಕೆಯಲ್ಲಿ ಆಸಕ್ತಿ ಇಲ್ಲದಿರುವುದು, ಮಾತಿನ ಬೆಳವಣಿಗೆ ಆಗದಿರು ವುದು, ಸಂವಹನ ಕ್ರಿಯೆಯಲ್ಲಿ ತೊಂದರೆ, ಪ್ರತಿಕ್ರಿಯೆ ನೀಡದಿ

ರುವ ಮನಃಸ್ಥಿತಿ ಹೊಂದಿರುತ್ತಾರೆ.

ಆಟಿಸಂ ಎಂದರೇನು ? :

ಸ್ವಲೀನತೆ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಅಸ್ವ ಸ್ಥತೆ. ಅಂತಹ ಮಕ್ಕಳಲ್ಲಿ ಬುದ್ಧಿಮಟ್ಟ ಎಲ್ಲ ಮಕ್ಕಳಲ್ಲಿರುವಂತೆ ಇರದೆ ಕಡಿಮೆಯಾಗಿರುತ್ತದೆ. 6 ತಿಂಗಳ ಅನಂತರ ರೋಗ ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ರೋಗದ ಲಕ್ಷಣಗಳು ಹೆಚ್ಚಾಗುತ್ತವೆ. ಉಪಶಮನವಾಗಲು ಯಾವುದೇ ಚಿಕಿತ್ಸೆಗಳಿಲ್ಲದಿದ್ದರೂ ಅಸ್ವಸ್ಥತೆ ಹೆಚ್ಚಾಗದಂತೆ ತಡೆಯಬಹುದಾಗಿದೆ.

ಆನುವಂಶಿಕ ಪ್ರಭಾವ :

ಇತ್ತೀಚಿನ ವರ್ಷಗಳಲ್ಲಿ ಆಟಿಸಂ ಜಾಗೃತಿ ವಿಶ್ವಾದ್ಯಂತ ಬೆಳೆದಿದೆ. ಸಂಶೋಧನೆಗಳ ಪ್ರಕಾರ ಹುಟ್ಟಿನಿಂದ ಬರುವುದರಲ್ಲಿ ಆನುವಂಶಿಕ ಅಂಶಗಳ ಪ್ರಭಾವ ಹೆಚ್ಚಿರುತ್ತದೆ. ವೈದ್ಯರ ಪ್ರಕಾರ ಮಕ್ಕಳು ತಾಯಿಯ ಗರ್ಭದಲ್ಲಿರು ವಾಗ ಅನುಭವಿಸಿದ ಕಷ್ಟ ಅಥವಾ ಆಕೆಯ ಮೇಲೆ ಬೀರಿದ ಪ್ರಭಾವಗಳಿಂದ ಈ ರೋಗ ಬರುವ ಸಂಭವವಿರುತ್ತದೆ. ಅದಲ್ಲದೆ ರುಬೇಲಾ ಸೋಂಕಿನಿಂದ ಶೇ. 1ರಷ್ಟು ಮಕ್ಕಳು ಆಟಿಸಂಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಆಟಿಸಂ ಮಕ್ಕಳನ್ನು ಪ್ರೀತಿಸಿ :

ಆಟಿಸಂ ಇರುವ ಮಕ್ಕಳು ಹುಟ್ಟಿದಾಗ, ಹೆತ್ತವರು ತುಂಬಾ ಪ್ರೀತಿ- ವಾತ್ಸಲ್ಯದಿಂದ ಆರೈಕೆ ಮಾಡಬೇಕು. ಅವರ ನಿರ್ಲಕ್ಷ್ಯ ಸಲ್ಲದು. ಆ ಮಕ್ಕಳನ್ನು ಕೂಡ ಎಲ್ಲ ಮಕ್ಕಳಂತೆ ಸಮಾಜದಲ್ಲಿ ಬಹಳ ಗೌರವ, ಮುತುವರ್ಜಿಯಿಂದ ಸಾಕಿ ಬೆಳೆಸಬೇಕಾದ ಜವಾಬ್ದಾರಿಯಿದೆ. ಅವರಿಗೆ ಸೂಕ್ತ ಚಿಕಿತ್ಸೆ- ತರಬೇತಿ ಜತೆಗೆ, ಅಂತಹ ಮಕ್ಕಳು ಇರುವ ಶಾಲೆಗೆ ಸೇರಿಸಿ ಅಗತ್ಯ ಶಿಕ್ಷಣ ನೀಡಬೇಕು. ಆಟಿಸಂ ಬಾಧಿತ ಮಕ್ಕಳನ್ನು ಹೆತ್ತವರ ಜತೆಗೆ ಸಮಾಜ ಕೂಡ ಪ್ರೀತಿಯಿಂದ ಕಾಣಬೇಕು.

Advertisement

Udayavani is now on Telegram. Click here to join our channel and stay updated with the latest news.

Next