ಮಹಾನಗರ: ನಗರದ ಶಕ್ತಿನಗರದಲ್ಲಿರುವ ಲಕ್ಷ್ಮೀ ಮೆಮೋರಿ ಯಲ್ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗ ಅರಿವು ಸಂಸ್ಥೆ ಹಾಗೂ ವಿಕಾಸನ ಸಂಸ್ಥೆ ಇವುಗಳ ಜಂಟಿ ಸಹಯೋಗದೊಂದಿಗೆ ವಿಶ್ವ ಸಲ್ಲೀನತೆ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಶ್ರವಣ ಮತ್ತು ವಾಕ್ ಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕ ಡಾಣ ಸೋಮಶೇಖರ್ ಎಚ್.ಎಸ್., ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಶಕ್ತಿನಗರದ ಅರಿವು ಸಂಸ್ಥೆಯ ಕೌನ್ಸೆÕಲರ್ ಪೂರ್ಣಿಮಾ ಭಟ್ ಮಾತನಾಡಿ, ಸಲ್ಲೀನತೆ ಮಕ್ಕಳನ್ನು ಆಟಿಸಂ ತರಬೇತಿ ಕೇಂದ್ರಗಳಿಗೆ ಸೇರಿಸಬೇ ಕು. ಇಲ್ಲವಾದರೆ ಅವರು ಮಾನಸಿಕವಾಗಿ ಇನ್ನಷ್ಟು ಕ್ಷೀಣಿಸುವ ಸಾಧ್ಯತೆ ಇದೆ ಎಂದರು.
ಲಕ್ಷ್ಮೀ ಮೇಮೋರಿಯಲ್ ಕಾಲೇಜಿನ ಪ್ರಾಂಶುಪಾಲೆ ಡಾಣ ಲಾರಿಸ್ಯಾ ಮಾರ್ಥಾ ಸಾಮ್ಸ್ ಅಧ್ಯಕ್ಷತೆ ವಹಿಸಿದ್ದರು. ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಡಾ ಥೆರೇಸಾ ಮಾಥಾಯಸ್, ವಿಕಾಸನ ಸಂಸ್ಥೆ ಅಧ್ಯಕ್ಷೆ ಶೈಲಜಾ ಉಪಸ್ಥಿತರಿದ್ದರು.
ಅರಿವು ಸಂಸ್ಥೆಯ ವತಿಯಿಂದ, ಸಲ್ಲೀನತೆ ಹೊಂದಿದ ಮಕ್ಕಳು ರ್‍ಯಾಂಪ್‌ವಾಕ್ ಮೂಲಕ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಿದರು. ಲಕ್ಷ್ಮೀಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಮೂರನೇ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳು ಫ್ಲಾಶ್ ಮೋಬ್ ಮೂಲಕ ಆಟಿಸಂ ಬಗ್ಗೆ ದೃಶ್ಯಾವಳಿ ಪ್ರದರ್ಶಿಸಿದರು. ಉಪನ್ಯಾಸಕಿ ಶರ್ಮಿಳಾ ಸ್ವಾಗತಿಸಿ, ಉಪನ್ಯಾಸಕ ಹರೀಶ್ ವಂದಿಸಿದರು. ಅನುಷಾ ಲೋಬೋ ಹಾಗೂ ಐಶ್ವರ್ಯಾ ನಿರೂಪಿಸಿದರು.