Advertisement
ಪ್ರಜ್ಞಾ ಪ್ರವಾಹ ಕರ್ನಾಟಕ ಘಟಕ ಏರ್ಪಡಿಸಿದ್ದ “ಭಾರತದ ಕೋವಿಡ್ ವಿರುದ್ಧದ ಹೋರಾಟ ಮತ್ತು ಮುಂಬರುವ ಸವಾಲುಗಳಿಗೆ ಕೇಂದ್ರ ಸರ್ಕಾರ ದ ಸನ್ನದ್ಧತೆ’ ಕುರಿತಂತೆ ಅಂತರ್ಜಾಲ ವಿಶೇಷ ಉಪನ್ಯಾಸ ಮಾಲಿಕೆಯಡಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಿಂದ ಆನ್ ಲೈನ್ ಮೂಲಕ ಬುಧವಾರ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಜನವರಿ ಮೊದಲ ವಾರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೋವಿಡ್- 19ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಪ್ರಥಮ ಸಭೆ ನಡೆಯಿತು. ಫೆಬ್ರವರಿಯಿಂದ ಚೀನಾದಿಂದ ದೇಶಕ್ಕೆ ಆಗಮಿಸುವ ಯಾತ್ರಿಕರು, ಜನರ ಆರೋಗ್ಯ ತಪಾಸಣೆ ವಿಮಾನನಿಲ್ದಾಣಗಳಲ್ಲಿ ಪ್ರಾರಂಭವಾಯಿತು. ಹಾಗೆಯೇ ಶಂಕಿತ ಸೋಂಕಿತರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿತ್ತು ಎಂದು ಹೇಳಿದರು.
Related Articles
ಪ್ರಯೋಗಾಲಯ ಸಿದ್ಧಪಡಿಸಲಾಗಿದೆ. ಮೇ ಅಂತ್ಯದ ಹೊತ್ತಿಗೆ 750 ಪ್ರಯೋಗಾಲಯ ಸ್ಥಾಪನೆ ಗುರಿ ಇದೆ. ಹೈಡ್ರೊಕ್ಲೋರೊಫೈನ್ ಔಷಧ ನೆರವನ್ನು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಒದಗಿಸುವ ಮೂಲಕ ಭಾರತ ಸಂಜೀವಿನಿಯಾಗಿದೆ ಎಂದು ಹೇಳಿದರು.
Advertisement
ಕೋವಿಡ್- 19ಕ್ಕೆ ಔಷಧ ಕಂಡುಹಿಡಿಲು ಅಮೆರಿಕ, ಚೀನಾ, ದಕ್ಷಿಣ ಕೊರಿಯಾ, ಇಂಗ್ಲೆಂಡ್ ಹಾಗೂ ಜರ್ಮನಿ ಸಂಶೋಧನೆಗೆ ಮುಂದಾಗಿವೆ. ಭಾರತದ ಜೈವಿಕ ತಂತಜ್ಞಾನ ವಿಭಾಗವು ಕ್ಯಾಂಡಿಲಾ ಇಂಡಿಯಾ ಲಿಮಿಟೆಡ್, ಸೆರೆಮನ್ ಚೂಟ್ ಮತ್ತು ಭಾರತ್ ಲ್ಯಾಬ್ ಎಂಬ ಮೂರು ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಕೋವಿಡ್- 19 ವೈರಸ್ ನ ಮೂರು ಸರಣಿಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಆಯುಷ್ ವಿಭಾಗದ ಮೂಲಕ ಮಾನವನ ಧಾರಣಾ ಶಕ್ತಿ ವೃದಿಟಛಿಗೆ ಔಷಧೋಪಚಾರ ತಯಾರಿಕೆಯೂ ನಡೆದಿದೆ. ಜತೆಗೆ ರೊಬೊಟ್ ತಂತ್ರಜ್ಞಾನದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎನ್- 95 ಮಾಸ್ಕ್ಮ ತ್ತು ಗುಣಮಟ್ಟದ ಪಿಪಿ ಕಿಟ್‌ಗಳ ತಯಾರಿಕೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ಚೀನಾದ ಗುಣ ಮಟ್ಟವಿಲ್ಲದ ಕಿಟ್‌ಗಳ ಮೇಲೆ ಭಾರತ ಇಂದು ಅವಲಂಬಿತವಾಗಿಲ್ಲ ಎಂದು ತಿಳಿಸಿದರು.
ಜಿಡಿಪಿ ಕುಸಿಯುವ ಸಾಧ್ಯತೆ: ಮಾರ್ಚ್, ಏಪ್ರಿಲ್ ದೇಶಕ್ಕೆ ಶೇ.30ರಷ್ಟು ಜಿಡಿಪಿ ಒದಗಿಸುವ ಮಾಸಗಳು. ಈ ತಿಂಗಳಲ್ಲಿ ದೇಶದ ಬಹುತೇಕ ಕಡೆ ಧಾರ್ಮಿಕ ಹಬ್ಬ, ಜಾತ್ರೆ, ಮಹೋತ್ಸವ, ಮದುವೆ ಇತರೆ ಆಚರಣೆ, ಸಮಾರಂಭ ನಡೆಯುತ್ತದೆ. ಕೈಗಾರಿಕಾ ವಲಯದಲ್ಲೂ ಇದೇ ಅವಧಿಯಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತದೆ. ಆದರೆ ಲಾಕ್‌ಡೌನ್ ನಿಂದ ದೇಶದ ಜಿಡಿಪಿ ಕುಸಿಯುವ ಸಾಧ್ಯತೆಯಿದೆ. ಮೂರು ಹಂತದಲ್ಲಿ ಕೇಂದ್ರ ಸರ್ಕಾರ ಜನರಿಗೆ ನೆರವಾಗುತ್ತಿದೆ ಎಂದು ಹೇಳಿದರು.
20 ಕೋಟಿ ಜನಧನ್ ಖಾತೆಗಳಿಗೆ 500 ರೂ.ನಂತೆ ಮೂರು ತಿಂಗಳು ಪಾವತಿ. ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತು 2000 ರೂ. ಗಳನ್ನು 8 ಕೋಟಿ ರೈತರ ಖಾತೆಗೆ ಸಂದಾಯವಾಗಿದೆ. 8 ಕೋಟಿ ಕುಟುಂಬ ಗಳಿಗೆ ಉಜ್ವಲಾ ಯೋಜನೆಯಡಿ ಸಿಲಿಂಡರ್‌ಅನ್ನು ಮೂರು ತಿಂಗಳು ಉಚಿತವಾಗಿ ನೀಡಲಾಗುತ್ತದೆ. 2.8 ಕೋಟಿ ವಿಕಲಚೇತನರು, ವಿಧವೆಯರು, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಹೆಚ್ಚುವರಿ 1000 ರೂ.ಗಳನ್ನು ಮೂರು ತಿಂಗಳು ನೀಡಲಾಗುತ್ತದೆ. 31,000 ಕೋಟಿ ರೂ. ಅನುದಾನದ ಹಣ ನೇರವಾಗಿ ಫಲಾನುಭವಿಗಳಖಾತೆಗೆ ಜಮೆಯಾಗುತ್ತದೆ. 15,000 ಕೋಟಿ ಅನುದಾನವನ್ನು ಎಲ್ಲ ರಾಜ್ಯಗಳಿಗೆ ನೀಡಲಾಗಿದ್ದು, ಆರೋಗ್ಯ ಸೌಲಭ್ಯ, ಬಳಕೆ ಮತ್ತು ಸುಧಾರಣೆಗೆ ಮಹತ್ವ ನೀಡಲು ಕೇಂದ್ರ ಸೂಚಿಸಿದೆ ಎಂದು ತಿಳಿಸಿದರು. 3 ವರ್ಷದಲ್ಲಿ ಭಾರತ ವಿಶ್ವ ಶಕ್ತಿಯಾಗುವ ವಿಶ್ವಾಸ
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1,500 ರೂ. ಸಹಾಯ ಧನ ನೀಡಲಾಗುತ್ತಿದೆ. ಆದಾಯ ತೆರಿಗೆ, ಜಿಎಸ್‌ಟಿ ರಿಟರ್ನ್, ಇಎಂಐ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಎಲ್ಲ ಅನುದಾನ, ನೆರವು ಕಡುಬಡವರ ಜೀವನೋಪಾಯಕ್ಕೆ ಮತ್ತು ಮುಂದಿನ ದಿನಗಳ ಆರ್ಥಿಕ ಚೈತನ್ಯಕ್ಕೆ ಸ್ವಲ್ಪ ನೆರವಾಗಲಿದೆ ಎನ್ನಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ಬದುಕುಳಿಯುವುದಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ನಂತರದ ದಿನಗಳಲ್ಲಿ ಬದುಕು ಸಾಗಿಸಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಕೇಂದ್ರ ಕ್ರಮ ಕೈಗೊಳ್ಳಲಿದೆ. ಸತತ ಹೋರಾಟದ ಫಲದಿಂದ ಮೂರು ವರ್ಷಗಳ ಬಳಿಕ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದಲ್ಲಿ ಸಂದೇಹವಿಲ್ಲ ಎಂದು ಬಿ.ಎಲ್.ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಜೀವನ ಪದಟಛಿತಿ, ಕೈಜೋಡಿಸಿ ಹೇಳುವ ನಮಸ್ಕಾರ ಆಚರಣೆ, ಯೋಗ, ಆಯುರ್ವೇದ ಮಹತ್ವ… ಹೀಗೆ ಅನೇಕ ಸಂಗತಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ. ಅಷ್ಟೇ ಅಲ್ಲದೆ ಕೋವಿಡ್ ಸಂಕಟವು ಅನೇಕ ಪ್ರಶಿಕ್ಷಣವನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ಭಾರತೀಯರಿಗೆ ನೀಡಿದೆ. ಸ್ವಾವಲಂಬನೆಯ ಮಹತ್ವದ ಪಾಠ ತಿಳಿಸಿಕೊಟ್ಟಿದೆ. ಇದೇ ಸಂದರ್ಭದಲ್ಲಿ ಚೀನಾ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಇದರಿಂದಾಗಿ ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ವಹಿವಾಟು ಮತ್ತು ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶಗಳನ್ನು ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಸದುಪಯೋಗಪಸಿಕೊಳ್ಳುವತ್ತ ಗಮನ ಹರಿಸಿದೆ. ಆ ಮೂಲಕ ಅನೇಕ ಭಾರತೀಯ ಉದ್ಯಮಿಗಳು ಹೂಡಿಕೆ ಮಾಡಿ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ನವ ಸಂಚಲನ ಮೂಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.