Advertisement

ಕೋವಿಡ್ ಅಂಟಿಸಿ, ಲಡಾಖ್‌ ಗಡಿಯಲ್ಲಿ ಸುಮ್ಮನೆ ತಂಟೆ ಮಾಡಿದ ಚೀನಾಗೆ ಛೀ ಎನ್ನುತ್ತಿದೆ ಜಗತ್ತು

11:56 AM Oct 08, 2020 | keerthan |

ಹೊಸದಿಲ್ಲಿ: ಜಗತ್ತಿಗೆಲ್ಲ ಕೋವಿಡ್ ಅಂಟಿಸಿ, ಲಡಾಖ್‌ ಗಡಿಯಲ್ಲಿ ಸುಖಾಸುಮ್ಮನೆ ತಂಟೆ ಎಬ್ಬಿಸಿದ್ದ ಚೀನ ವರ್ತನೆ ಬಗ್ಗೆ ವಿಶ್ವದ ಸಿರಿವಂತ ರಾಷ್ಟ್ರಗಳಲ್ಲಿ ನಕಾರಾತ್ಮಕ, ವಿರೋಧದ ಅಲೆಗಳು ಎದ್ದಿವೆ.

Advertisement

ಹೌದು! ಜಗತ್ತಿನ ಮುಂದುವರಿದ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಯುಕೆ, ಜರ್ಮನಿ, ಅಮೆರಿಕ, ದ. ಕೊರಿಯಾ, ಸ್ಪೇನ್‌, ಕೆನಡಾ, ನೆದರ್ಲೆಂಡ್‌, ಸ್ವೀಡನ್‌ಗಳಲ್ಲಿನ ಜನತೆ ಚೀನ ಬಗ್ಗೆ ತೀವ್ರ ನಕಾರಾತ್ಮಕ ಭಾವ ಹೊಂದಿದ್ದಾರೆ ಎಂದು ಪ್ಯೂ ರಿಸರ್ಚ್‌ ಸೆಂಟರ್‌ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಕಳೆದೊಂದು ದಶಕದಿಂದ “ಪ್ಯೂ’ ಈ ವಿಷಯದ ಮೇಲೆ ಪ್ರಮಖ 14 ದೇಶಗಳಲ್ಲಿ ಸಮೀಕ್ಷೆ ಕೈಗೊಂಡಿತ್ತು.

ಛೀ ಚೀನ!: ವಿಶ್ವದ ಬೇರೆಲ್ಲ ರಾಷ್ಟ್ರಗಳಿಗಿಂತ ಜಪಾನ್‌ (ಶೇ.86) ಮತ್ತು ಆಸ್ಟ್ರೇಲಿಯಾಗಳಲ್ಲಿ (ಶೇ.81) ಚೀನ ವಿರೋಧಿ ಭಾವ ಅಧಿಕವಿದೆ. ಯುಕೆ ಶೇ.74, ಜರ್ಮನಿ ಶೇ.71, ನೆದರ್ಲೆಂಡ್‌ ಶೇ.73, ಅಮೆರಿಕ ಶೇ.73 ಮಂದಿ ಚೀನ ವಿರುದ್ಧ ಅತೃಪ್ತಿ ಹೊಂದಿ ದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಸೀಸಿಗರಲ್ಲಿ ಡ್ರ್ಯಾಗನ್‌ ವಿರುದ್ಧ ಶೇ.24ರಷ್ಟು, ಅಮೆರಿಕದಲ್ಲಿ ಶೇ.20, ಇಂಗ್ಲೆಂಡಿನಲ್ಲಿ ಶೇ.19ರಷ್ಟು ನಕಾರಾತ್ಮಕ ಭಾವ ಅಧಿಕಗೊಂಡಿದೆ.

ಇದನ್ನೂ ಓದಿ:ಬೆಂಗಳೂರು ಈಗ ಕೋವಿಡ್ ರಾಜಧಾನಿ: ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!

ಅತೃಪ್ತಿ: ಕೋವಿಡ್ ಸಾಂಕ್ರಾಮಿಕವನ್ನು ಚೀನ ನಿರ್ವಹಿಸಿದ ರೀತಿಗೂ ಅಸಮಾಧಾನ ವ್ಯಕ್ತವಾಗಿದೆ. 14 ರಾಷ್ಟ್ರಗಳಲ್ಲಿ ಶೇ.61 ಮಂದಿ ಚೀನ ಅತ್ಯಂತ ಕೆಟ್ಟದಾಗಿ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಿದೆ ಎಂದು ಅಭಿಮತ ಸೂಚಿಸಿದ್ದಾರೆ.

Advertisement

ಬಡರಾಷ್ಟ್ರಗಳ ಸಾಲ ಮನ್ನಾ ಮಾಡಲು ಚೀನಕ್ಕೆ ಒತ್ತಡ
ಬಡ ರಾಷ್ಟ್ರಗಳಿಗೆ ಸಾಲ ಕೊಟ್ಟು ಜೀವ ಹಿಂಡುವ ಚೀನಕ್ಕೆ ವಿಶ್ವಬ್ಯಾಂಕ್‌ ಕಿವಿಹಿಂಡಿದೆ. ಕೋವಿಡ್ ದಿಂದ ನಲುಗಿರುವ ಬಡರಾಷ್ಟ್ರಗಳ ಸಾಲವನ್ನು ಮನ್ನಾ ಮಾಡಲು ವಿಶ್ವ ಬ್ಯಾಂಕ್‌ ಚೀನದ ಮೇಲೆ ಒತ್ತಡ ಹಾಕಿದೆ. ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಾಲ್ಪಸ್‌ ಸೋಮವಾರ ಚೀನ ಅಧ್ಯಕ್ಷರಿಗೆ ಕರೆಮಾಡಿದ್ದಾರೆ. “ಜಿ-20’ಯ “ಸಾಲ ಸೇವಾ ಅಮಾನತು ಉಪಕ್ರಮ’ (ಡಿಎಸ್‌ಎಸ್‌ಐ) ಅಡಿಯಲ್ಲಿ ಸಾಲ ಮನ್ನಾ ಮಾಡಲು ಒತ್ತಡ ಹಾಕಿದ್ದಾರೆ ಎಂದು ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next