Advertisement

ವಿಶ್ವ 10ಕೆ ಮ್ಯಾರಥಾನ್‌: ಕೀನ್ಯಾ ಅಥ್ಲೀಟ್‌ಗಳ ಪಾರಮ್ಯ

11:58 AM May 22, 2017 | Team Udayavani |

ಬೆಂಗಳೂರು: ಉದ್ಯಾನನಗರಿಯಲ್ಲಿ ಭಾನುವಾರ ನಡೆದ ಟಿಸಿಎಸ್‌ ವಿಶ್ವ 10ಕೆ ಮ್ಯಾರಥಾನ್‌ನಲ್ಲಿ ಕೀನ್ಯಾ ಅಥ್ಲೀಟ್‌ಗಳು  ಪಾರಮ್ಯ ಮೆರೆದಿದ್ದಾರೆ. ನಿರೀಕ್ಷೆ ಮೂಡಿಸಿದ್ದ ಕೀನ್ಯಾದ ಅಥ್ಲೀಟ್‌ ಅಲೆಕ್ಸ್‌ ಕೊರಿಯೋ ಪುರುಷರ ಎಲೈಟ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಅವರು 28 ನಿಮಿಷ 12 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಹಿಳಾ ಎಲೈಟ್‌ ವಿಭಾಗದಲ್ಲಿ ಕೀನ್ಯಾದ ಇರ್ನೆ ಚೆಪಾrಯ್‌ 31.51 ನಿಮಿಷದಲ್ಲಿ ಗುರಿ ಸೇರಿ ಪ್ರಥಮ ಸ್ಥಾನ ಪಡೆದರು. ವಿಜೇತರು ತಲಾ 1.67 ಲಕ್ಷ ರೂ. ನಗದು ಬಹುಮಾನವನ್ನು ಪಡೆದರು.

Advertisement

ಪುರುಷರ ವಿಭಾಗದಲ್ಲಿ 2ನೇ ಸ್ಥಾನವನ್ನು ಕೀನ್ಯಾದವರೇ ಆದ ಎಡ್ವಿನ್‌ ಕಿಪ್ಟೋ (28 ನಿಮಿಷ 26 ಸೆಕೆಂಡ್ಸ್‌) ಪಡೆದುಕೊಂಡರು.

ಇವರು ಅಲೆಕ್ಸ್‌ಗೆ ಆರಂಭದಿಂದಲೂ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಲೆಕ್ಸ್‌ ತಮ್ಮ ಪ್ರಾಬಲ್ಯವನ್ನು ಮೆರೆದು
ಗೆಲುವಿನ ಸಿಹಿ ಕಂಡರು. 28 ನಿಮಿಷ 28 ಸೆಕೆಂಡ್ಸ್‌ ಸೆಕೆಂಡ್ಸ್‌ಗಳಲ್ಲಿ ಗುರಿ ಮುಟ್ಟಿದ ಉಗಾಂಡದ ಸ್ಟಿಫೆನ್‌ ಕಿಸ್ಸಾ 3ನೇ
ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯಾದ ವಕೆ°àìಷ್‌ ಡಿಜೆಫಾ 32 ನಿಮಿಷದಲ್ಲಿ ಗುರಿ ಸೇರಿ 2ನೇ ಸ್ಥಾನ
ಪಡೆದರು. ಮೊದಲ ಸ್ಥಾನ ಪಡೆದ ಚೆಪಾrಯ್‌ಗಿಂತ ಕೇವಲ 51 ಸೆಕೆಂಡ್ಸ್‌ ಹಿನ್ನಡೆ ಕಂಡು 2ನೇ ಸ್ಥಾನಕ್ಕೆ ಖುಷಿ ಪಡಬೇಕಾಯಿತು.

ಭರವಸೆ ಮೂಡಿಸಿದ್ದ ಕೀನ್ಯಾದ ಅಥ್ಲೀಟ್‌ ಹೆಲಾಹ್‌ ಕಿಪ್ರೋಪ್‌ 32.2 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಸ್ವಲ್ಪದರಲ್ಲೇ 2ನೇ ಸ್ಥಾನ
ಕಳೆದುಕೊಂಡರು. ಇವರು ಡಿಜೆಫಾಗೆ ಪ್ರಬಲ ಪೈಪೋಟಿ ನೀಡಿದ್ದರು.

ಭಾರತೀಯರ ವಿಭಾಗದಲ್ಲಿ ನವೀನ್‌, ಸಾಯಿಗೀತಾಗೆ ಪ್ರಶಸ್ತಿ
ಭಾರತೀಯರ ವಿಭಾಗದಲ್ಲಿ ನಡೆದ 10ಕೆ ಓಟದಲ್ಲಿ ನವೀನ್‌ ಕುಮಾರ್‌ 30 ನಿಮಿಷ.56 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ ಮಹಿಳಾ ವಿಭಾಗದಲ್ಲಿ ಸಾಯಿ ಗೀತಾನಾಯ್ಕ 36 ನಿಮಿಷ 01 ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿ ಮೊದಲ ಸ್ಥಾನ ಪಡೆದರು.

Advertisement

ಪುರುಷರ ವಿಭಾಗದಲ್ಲಿ 31 ನಿಮಿಷ 2ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿದ ಸಂದೀಪ್‌ ತಯ್ನಾಡೆ 2ನೇ ಮತ್ತು ಶಂಕರ್‌ ಮನ್‌
ಥಾಪ 31 ನಿಮಿಷ 7 ಸೆಕೆಂಡ್ಸ್‌ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ 2ನೇ ಸ್ಥಾನವನ್ನು ಪ್ರೀನು ಯಾದವ್‌ (36.46 ಸೆಕೆಂಡ್ಸ್‌), ಜ್ಯೋತಿ ಚೌಹಾಣ್‌ 37.12ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next