Advertisement

ಸೋಮಣ್ಣರಿಂದ ಕಾಮಗಾರಿ ಪರಿಶೀಲನೆ

01:40 PM Jun 04, 2021 | Team Udayavani |

ಬೆಂಗಳೂರು: ವಸತಿ ಸಚಿವ ಹಾಗೂಗೋವಿಂದರಾಜನಗರ ವಿಧಾನಸಭಾಕ್ಷೇತ್ರದ ಶಾಸಕ ವಿ.ಸೋಮಣ್ಣ ಗುರುವಾರ ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅಧಿಕಾರಿಗಳೊಂದಿಗೆ ಸ್ವತಃ ತಾವೇಕಾಮಗಾರಿಗಳ ಪರಿಶೀಲನೆ ನಡೆಸಿದರು.

Advertisement

ಜೈ ಮುನಿರಾವ್‌ ವೃತ್ತದಲ್ಲಿರುವಸರ್ಕಾರಿ ಶಾಲೆಯನ್ನು ಅತ್ಯಾಧುನಿಕಉಪಕರಣಗಳನ್ನು ಒಳಗೊಂಡುಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆವಿದ್ಯಾಭ್ಯಾಸಕ್ಕೆ ಕೊರತೆ ಬಾರದಂತೆಹಾಗೂ ವಿದ್ಯಾರ್ಥಿಗಳಿಗೆ ಅವಶ್ಯಕವಾದಪೀಠೊಪಕರಣಗಳನ್ನು ಒದಗಿಸಲಾಗುತ್ತಿದ್ದು,

ವಿಶೇಷವೇನೆಂದರೆ ಇದುವರೆಗೂಕೇವಲ 10ನೇ ತರಗತಿವರೆಗೂ ಮಾತ್ರ ಇಲ್ಲಿ ವ್ಯಾಸಂಗ ಮಾಡಲಾಗುತ್ತಿದೆ. ಪದವಿಪೂರ್ವ ಕಾಲೇಜು ಕೂಡತೆರೆಯಲಾಗುತ್ತಿದೆ ,ಈ ಶಾಲೆ ಮತ್ತುಪದವಿ ಪೂರ್ವ ಕಾಲೇಜು ಒಟ್ಟು4 ಕೋಟಿ ಅನುದಾನದಿಂದ ನಿರ್ಮಾಣವಾಗುತ್ತಿದೆ ಎಂದುಸಚಿವರುತಿಳಿಸಿದರು.

ವಾರ್ಡಿನಲ್ಲಿ ಬಸವ ವನ ಉದ್ಯಾನವನಪ್ರಾರಂಭವಾಗುತ್ತಿದ್ದು,ಈಉದ್ಯಾನವನವು ಬಸವಣ್ಣನವರಪ್ರತಿಮೆ, ಸುಮಾರು 200 ಜನರುಕುಳಿತು ಯೋಗ ಮಾಡುವುದಕ್ಕಾಗಿ ‌ ಗಿಪಿರಮಿಡ್‌ ರೀತಿಯ ಯೋಗ ಕೇಂದ್ರ,ಆಯುರ್ವೇದಿಕ್‌ ಗಿಡಗಳು , ಜನರು‌ವಾಯುವಿಹಾರ ಮಾಡಲು ಬೇಕಾದಪರಿಸರವನ್ನು ಏರ್ಪಡಿಸಲಾಗುತ್ತಿದ್ದು ಈಬಸವ ವನ ಮತ್ತು ಸರ್ಕಾರಿ ಶಾಲೆಯುಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ ಎಂದರು

.ಗೋವಿಂದರಾಜನಗರ ಮಂಡಲದಅಧ್ಯಕ್ಷರಾದ ವಿಶ್ವನಾಥ್‌ ಗೌಡ ರವರು , ಸ್ಥಳೀಯ ಬಿಬಿಎಂಪಿ ಮಾಜಿ ಸದಸ್ಯರುಗಳಾದ ರೂಪ ಲಿಂಗೇಶ್‌, ಶ್ರೀಧರ್‌,ರಮೇಶ್‌, ಅಧಿಕಾರಿಗಳು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next