Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

11:48 AM Jan 25, 2020 | Suhan S |

ತೇರದಾಳ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಮೊದಲ ಬಾರಿಗೆ ಎದುರಿಸುವ ಬೋರ್ಡ್‌ ಪರೀಕ್ಷೆಯಾದ ಎಸ್‌ಎಸ್‌ಎಲ್‌ಸಿ ಹಂತವು ಮಹತ್ವದ್ದಾಗಿದೆ. ಇದರ ಬಗ್ಗೆ ಯಾರೂ ಅಲಕ್ಷ್ಯ ಮಾಡಬಾರದು ಎಂದು ತಮದಡ್ಡಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಎ.ಎಲ್‌. ಅಥಣಿ ಹೇಳಿದರು.

Advertisement

ನಗರದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸರ್‌.ಎಂ. ವಿಶ್ವೇಶ್ವರಯ್ಯ ಪಪೂ ವಿಜ್ಞಾನ ಕಾಲೇಜ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಮೊದಲು ಸರಿಯಾಗಿ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರಿಸಲು ಆರಂಭಿಸಬೇಕು. ಸುಲಭವೆನಿಸಿದ ಉತ್ತರಗಳನ್ನು ಮೊದಲು ಬಿಡಿಸಿದರೆ, ಉಳಿದವುಗಳು ಸಹ ಬಳಿಕ ಸ್ಮರಣೆಗೆ ಬರುತ್ತವೆ. ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಆತಂಕಕ್ಕೆ ಒಳಗಾಗದೇ ಮೊದಲು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಇನ್ನೂ ಸಾಕಷ್ಟು ದಿನಗಳಿವೆ. ಇಷ್ಟಪಟ್ಟು ಓದಿ, ಹೆಚ್ಚಿನ ಸಾಧನೆ ತೋರಬೇಕು. ಮನಸ್ಸು ಮಾಡಿದರೆ 625ಕ್ಕೆ ಒಂದು ಸಹ ಅಂಕ ಕಳೆದುಕೊಳ್ಳದೆ ಉತ್ತೀರ್ಣರಾಗಬಹುದೆಂಬ ನಂಬಿಕೆಯಿಟ್ಟು ಓದಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಚೇರಮನ್‌ ಅಮೇಶ ಅವರಾದಿ ಅವರು ಮಾದರಿ ಪ್ರಶ್ನೆ ಪತ್ರಿಕೆಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿ ಆಗಲಿ ಎಂಬ ಉದ್ದೇಶದಿಂದ ನುರಿತ ಶಿಕ್ಷಕರನ್ನು ಸಂಪರ್ಕಿಸಿ ಆರು ವಿಷಯಗಳನ್ನು ಒಳಗೊಂಡ ಮಾದರಿ ಪ್ರಶ್ನೆ ಪತ್ರಿಕೆಯ ಪುಸ್ತಕವನ್ನು ಸಂಸ್ಥೆವತಿಯಿಂದ ಮುದ್ರಿಸಿ, ಸುಮಾರು 400 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಶ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಹೆಚ್ಚಿನ ಅಂಕ ಪಡೆಯುವ ಮೂಲಕ ಮುಂದಿನ ಶಿಕ್ಷಣಕ್ಕೆ ಅಣಿಯಾಗಬೇಕು ಎಂದರು.

ಪಿಯು ಕಾಲೇಜ್‌ ಚೇರಮನ್‌ ಶಿವಾನಂದ ನಿವರಗಿ, ಸಿಬಿಎಸಿ ಚೇರಮನ್‌ ಶಂಕರ ಹೊಸಮನಿ, ಮಹೇಶ ಯಾದವಾಡ, ಮಹಾಂತೇಶ ಪಂಚಾಕ್ಷರಿ, ಶಂಕರ ಮಂಗಸೂಳಿ, ಈರಪ್ಪ ಯಾದವಾಡ, ಪ್ರಾಚಾರ್ಯ ಅಶೋಕ ಸಿದ್ದಾಪುರ, ಮಂಜುನಾಥ ಬಿರಾದಾರ, ಡಿ.ಐ. ಮೋಮಿನಾ, ವಿನಾಯಕ ಕಾರಖೂನ, ಎಸ್‌.ಆರ್‌. ಪಕಾಲಿ, ಶರಣಪ್ಪ ಹುಗ್ಗೇರ, ಗುರುಬಸಪ್ಪ ಬಿರಾದಾರ, ವಿವಿಧ ಶಾಲೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next