Advertisement

ಮೈಸೂರಲ್ಲಿ ಸಿದ್ದರಾಮಯ್ಯ ಜತೆ ಕೆಲಸ ಮಾಡುವೆ

03:05 AM Apr 05, 2019 | Team Udayavani |

ಬೆಂಗಳೂರು: ಮೈಸೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜತೆ ಕೆಲಸ ಮಾಡುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಹೇಳಿದ್ದಾರೆ. ಸಿದ್ದರಾಮಯ್ಯ ಅವರ
ರಾಜಕೀಯ ವೈರಿ ಎಂದು ಗುರುತಿಸಿಕೊಂಡಿದ್ದ ವಿಶ್ವನಾಥ್‌ ಅವರು ಈಗ ಮೈತ್ರಿಧರ್ಮದ ಪಾಲನೆಗಾಗಿ ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮ ಮಂಥನ ಸಂವಾದದಲ್ಲಿ “ಮೈಸೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜತೆಯಾಗಿ ಕೆಲಸ ಮಾಡುವಿರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ, “ಖಂಡಿತವಾಗಿಯೂ ಮಾಡುತ್ತೇವೆ. ಅದರಲ್ಲೇನಿದೆ, ಮೈತ್ರಿ ಮಾಡಿಕೊಂಡಿದ್ದೇವೆ, ಜತೆಯಾಗಿ ಕೆಲಸ ಮಾಡಲೇಬೇಕು’ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾದರೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಸೇರಿಲ್ಲ ಯಾಕೆ? ಎಂಬ ಪ್ರಶ್ನೆಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೂ ಸೇರಿಲ್ಲ. ತೆರೆಯೋ ಬಾಗಿಲನು ಎಂದು ನಾವು ಕಾಯುತ್ತಿದ್ದೇವೆ ಎಂದು ಚಟಾಕಿ ಹಾರಿಸಿದರು. ನಾನು ಯಾಕೆ ಕಾಂಗ್ರೆಸ್‌ ಬಿಟ್ಟೆ ಎಂಬುದನ್ನು ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು.

ಮೈತ್ರಿ ಪಕ್ಷಗಳ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಈ ದೇಶದ ಆಸ್ತಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅವರು ಸಂಸತ್ತಿನಲ್ಲಿರಬೇಕು. ನಮ್ಮ ರಾಜ್ಯದ ವಿಚಾರಗಳ ಜತೆಗೆ ದೇಶದ ಪ್ರಮುಖ ಸಮಸ್ಯೆಗಳನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡುವ ಶಕ್ತಿ ಅವರಿಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಬಿಟ್ಟು ಬಂದ ನೀವು ಈಗ ರಾಹುಲ್‌ಗಾಂಧಿ ನಾಯಕತ್ವ ಒಪ್ಪಿಕೊಳ್ಳುವಂತಾಗಿದೆಯಲ್ಲಾ ಎಂದಾಗ, “ಒಪ್ಪಿಕೊಂಡಿದ್ದೇನೆ. ರಾಹುಲ್‌ಗಾಂಧಿ ಈಗ
ಮೆಚೂರ್‌ ಲೀಡರ್‌’ ಎಂದು ತಿಳಿಸಿದರು.

Advertisement

ಲೋಕಸಭೆ ಚುನಾವಣೆ ನಂತರವೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇಧಕ್ಕೆಯಾಗದು. ಜೆಡಿಎಸ್‌-ಕಾಂಗ್ರೆಸ್‌ ಜಾತ್ಯತೀತ ತತ್ವ-ಸಿದಾ ಟಛಿಂತದಡಿ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಕುಟುಂಬ ರಾಜಕಾರಣ ವಿಷಯವೇ ಅಲ್ಲ. ದೇವೇಗೌಡರ ಕುಟುಂಬದಲ್ಲಿ ಮೂವರು ಸ್ಪರ್ಧೆಗೆ ನಿಂತರೆ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ನಿಖೀಲ್‌, ಪ್ರಜ್ವಲ್‌, ದೇವೇಗೌಡರ ಸ್ಪರ್ಧೆ ತಪ್ಪೇನಿಲ್ಲ. ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದವರು, ಭಾರತವೇ ಅವರ ಕ್ಷೇತ್ರ, ಎಲ್ಲಿಂದಾದರೂ ಸ್ಪರ್ಧೆ ಮಾಡುವ ಹಕ್ಕು ಹಾಗೂ ಅರ್ಹತೆ ಅವರಿಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ, ಯಡಿಯೂರಪ್ಪ ಹಾಗೂ ಅವರ ಸೇರಿ ಎಷ್ಟು ಕುಟುಂಬಸ್ಪರ್ಧಿಸಿರಲಿಲ್ಲ .

ನಕಲಿ ರಾಷ್ಟ್ರೀಯವಾದ: ಈ ಚುನಾವಣೆ ನಕಲಿ ರಾಷ್ಟ್ರೀಯವಾನಡುವಿನ ಸಂಘರ್ಷ ಎಂದು ವಿಶ್ವನಾಥ್‌ ವಿಶ್ಲೇಷಿಸಿದರು. ನರೇಂದ್ರಮೋದಿ ಅವರನ್ನು ಹೊಗಳಿದರೆ ರಾಷ್ಟ್ರಾಭಿಮಾನಿಗಳು,ವಿರೋಧಿಸಿದವರು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಇದುಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ ಅಪಾಯಕಾರಿ ಎಂದು ಹೇಳಿದರು.

ದಯವಿಟ್ಟು ಬೇರೆ ಕ್ಷೇತ್ರಗಳ ಬಗ್ಗೆಯೂ ತೋರಿಸಿ…
“ಮಾಧ್ಯಮಗಳು ಇಂದು ಮಂಡ್ಯ ಬಿಟ್ಟರೆ ಬೇರೇನೂ ತೋರಿಸುತ್ತಿಲ್ಲ. ಮಂಡ್ಯ ಮಾತ್ರ ತೋರಿಸುತ್ತಿರುವವರ ಮೇಲೆ ಜನತೆಗೆ ಬೇಸರವುಂಟಾಗಿದೆ. ದಯವಿಟ್ಟು ಬೇರೆ ಕ್ಷೇತ್ರಗಳ ಬಗ್ಗೆಯೂ ತೋರಿಸಿ’ ಎಂದು ವಿಶ್ವನಾಥ್‌ ಮನವಿ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡರು, ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ
ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಸ್ಪರ್ಧೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ನೀಡುವ ಕೆಲಸ ವಿದ್ಯುನ್ಮಾನ ಮಾಧ್ಯಮಗಳು ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next