Advertisement
Related Articles
Advertisement
ಹೀಗೆ ಅದೆಷ್ಟೋ ಹಾವುಗಳನ್ನು ಹಿಡಿದಿದ್ದರೂ ಅದರ ಲೆಕ್ಕವನ್ನು ಸ್ವತಃ ಅವರೇ ಇಟ್ಟಿಲ್ಲ. ದಕ್ಷಿಣ ಭಾರತದಲ್ಲಿ ಕಂಡುಬರುವ ಎಲ್ಲಾ ಪ್ರಭೇದದ ಹಾವುಗಳನ್ನು ಹಿಡಿದ ಅನುಭ ವವಿರುವ ಸ್ನೇಕ್ ಸುಕುಮಾರ್ ಈಚೆಗೆ ಮೈನವಿರೇಳಿಸುವ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡಿದ್ದರು. ಆ ವಿವರಣೆ ಹೀಗೆ- ನಾಗರಹಾವನ್ನು ದೇವರೆಂದು ಕಾಣುವ, ಆರಾಧಿಸುವ ತುಳುನಾಡಿನವರಾದ ನಮಗೆ ದಾರಿಯಲ್ಲಿ ಸತ್ತ ಹಾವು ಕಾಣಲು ಸಿಕ್ಕಿದರೂ ಕೂಡಾ ಹಾಗೇ ಬಿಟ್ಟು ಹೋಗುವುದಿಲ್ಲ.ಅದಕ್ಕೆ ಸೂಕ್ತ ಅಂತ್ಯಸಂಸ್ಕಾರವನ್ನು ಮಾಡಿ ಅದಕ್ಕೆ ಸದ್ಗತಿಯನ್ನು ಕೊಡುವ ವಿಧಿವಿಧಾನಗಳನ್ನೂ ನೆರವೇರಿಸುವವರು ನಾವು. ಇನ್ನು ನಾಗರಹಾವೊಂದು ನಮ್ಮ ಕಣ್ಣೆದುರೇ ಹೀಗೆ ಒ¨ªಾಡುವುದನ್ನು ನಾವೆಂದೂ ನೋಡಲಾರೆವು. ಆದರೆ ಇಂತಹುದೇ ಒಂದು ವಿದ್ಯಮಾನಕ್ಕೆ ಸಾಕ್ಷಿಯಾದದ್ದು ನಮ್ಮ ಕಂಪೆನಿಯ ಒ.ಎಮ್.ಎಸ್ ವಿಭಾಗದ ಉದ್ಯೋಗಿಯಾದ ದಿನೇಶ್ ಪೂಜಾರಿಯವರ ಮನೆಯ ಬಾವಿ. ಅವರ ಮನೆಯ ಬಾವಿಗೆ ಹಾಕಿದ್ದ ಬಲೆಯೊಳಗೆ ನಾಗರಹಾವೊಂದು ಸಿಕ್ಕಿಕೊಂಡು ಮುಂದಕ್ಕೂ ಹಿಂದಕ್ಕೂ ಹೋಗಲಾಗದೇ ಒ¨ªಾಡುತಿತ್ತು. ಅತೀ ಸೂಕ್ಷ¾ವಾದ ದೇಹ ಪ್ರಕೃತಿ ಹೊಂದಿರುವ ನಾಗರ ಹಾವು ಇನ್ನು ಸ್ವಲ್ಪ ಹೊತ್ತು ಅದೇ ಪರಿಸ್ಥಿಯಲ್ಲಿ ಒದ್ದಾಡಿದರೂ ಜೀವ ಕಳೆದುಕೊಳ್ಳುವ ಆತಂಕವಿತ್ತು. ಆ ಪರಿಸ್ಥಿತಿಯಲ್ಲಿ ಹಾವನ್ನು ನೋಡಿದ ದಿನೇಶ್ ಕೂಡಲೇ ಸುಕುಮಾರ್‌ಗೆ ದೂರವಾಣಿ ಮುಖಾಂತರ ವಿಷಯ ತಿಳಿದ್ದಾರೆ. ಇಂತಹ ಕರೆ ಬಂದ ಕೂಡಲೇ ಸುಕುಮಾರ್ ಹೆಚ್ಚು ಹೊತ್ತು ಕಾಯಿಸುವವರಲ್ಲ.ಎಲ್ಲಿದ್ದರೂ ತನ್ನ ಬೈಕನ್ನೇರಿ ಕ್ಷಣದಲ್ಲಿಯೇ ಹಾಜರಾಗುತ್ತಾರೆ. ಇಲ್ಲೂ ಅವರು ಬಂದದ್ದು ಅದೇ ವೇಗದಿಂದ.
ಬಾವಿಯ ಹತ್ತಿರ ಹೋದ ಸುಕುಮಾರ್ ಮೊದಲು ಪರಿಸ್ಥಿತಿಯನ್ನು ಸೂಕ್ಷ¾ವಾಗಿ ಅವಲೋಕಿಸುತ್ತಾರೆ.ಹಾವಿನ ಇದುವರೆಗಿನ ಹೋರಾಟದಲ್ಲಿ ಎಲ್ಲಿಯೂ ಗಾಯವಾಗಿಲ್ಲ ಅನ್ನುವುದನ್ನು ಖಾತರಿ ಪಡಿಸಿಕೊಂಡು ನಿಧಾನವಾಗಿ ಹತ್ತಿರ ಸುಳಿದು ಹಾವಿನ ಬಾಲವನ್ನು ಎಡಗೈಯಲ್ಲಿ ಹಿಡಿದು ಬಲಗೈಯಿಂದ ಕತ್ತರಿಹಿಡಿದು ನಿಧಾನಕ್ಕೆ ಬಲೆಯನ್ನು ಕತ್ತರಿಸುತ್ತಾ ಹೋಗುತ್ತಾ ರೆ.ಹಾಗೆಯೇ ಇಡೀ ದೇಹವನ್ನು ಬಲೆಯಿಂದ ಬಿಡಿಸಿದ ನಂತರವೇ ಇರುವುದು ಫೈನಲ್ ಆಪರೇಷನ್, ತಲೆಯನ್ನು ಬಿಡಿಸುವುದು! ಕೋಲಿನಿಂದ ಒಮ್ಮೆ ಅದರ ತಲೆಯನ್ನು ಆಧರಿಸಿ ಕೈಯಿಂದ ಹಾವಿನ ತಲೆಯನ್ನು ಗಕ್ಕನೆ ಹಿಡಿದುಬಿಡುತ್ತಾರೆ! ನೆರೆದವರಿಗೆ ರೋಮಾಂಚನ!
ನಂತರ ಅದರ ಸುತ್ತಲಿನ ಬಲೆಯನ್ನೂ ಕತ್ತರಿಸಿ ಇಡೀ ಹಾವಿನ ದೇಹವನ್ನು ಬಲೆಯಿಂದ ಬಂಧಮುಕ್ತಗೊಳಿಸಿ ತನ್ನ ಕೈಯಲ್ಲಿ ತೆಗೆದುಕೊಳ್ತಾರೆ.
ಇಲ್ಲಿಗೇ ಈ ಕಾರ್ಯಾಚರಣೆ ಮುಗಿಯಿತು ಅಂದುಕೊಂಡು ಹೋದವರು ಕೊನೆಯ ಬಹಳ ರೋಮಾಂಚಕ ಅಂಕವನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ತಾರೆ, ಧೋನಿಯ ಗೆಲುವಿನ ಹೆಲಿಕಾಪ್ಟರ್ ಶಾಟ್ ಮಿಸ್ ಮಾಡಿಕೊಂಡ ಹಾಗಿನ ಬೇಸರ ಅವರಿಗೆ ಬಾರದೇ ಇರದು. ಅದುವೇ ಹಿಡಿದ ವಿಷಪೂರಿತ ಹಾವನ್ನು ಚೀಲದೊಳಕ್ಕೆ ಹಾಕುವುದು.ಈ ಹಂತದಲ್ಲಿ ಹಾವಿನ ತಲೆ ಸುಕುಮಾರ್ ಕೈಯಲ್ಲಿದೆ ಮತ್ತು ಅದೇ ರೀತಿಯಲ್ಲಿ ಚೀಲದೊಳಗೆ ಹಾಕಿ ಕೈಯನ್ನು ಬಿಡಬೇಕು! ಈಗಾಗಲೇ ಹೆದರಿದ ಹಾವು ಮೇಲೆ ಚಿಮ್ಮಿ ಕೈಗೆ ಕಚ್ಚುವ ಅಪಾಯ ಇಲ್ಲಿ ಅತೀ ಹೆಚ್ಚು.ಸಾಧಾರಣವಾಗಿ ತಾನು ಹಿಡಿಯುವ ಎಲ್ಲಾ ಹಾವುಗಳ ಗುಣಲಕ್ಷಣಗಳು ಸುಕುಮಾರ್‌ಗೆ ಚೆನ್ನಾಗಿ ಪರಿಚಿತ. ಹಾಗೆಂದೇ ಈ ನಾಗರ ಹಾವು ಕೂಡಾ ಹೆದರಿದ ಇಂತಹ ಸಂದರ್ಭ ಗಳಲ್ಲಿ ಏನೆಲ್ಲಾ ಮಾಡಬಲ್ಲದು ಅನ್ನುವುದರ ಸಂಪೂರ್ಣವಾದ ಅರಿವೂ ಇವರಲ್ಲಿದೆ. ಆದ್ದರಿಂದಲೇ ಬಹಳ ಬಹಳ ಸಂಯಮದಿಂದ,ಮೈಯೆಲ್ಲಾ ಕಣ್ಣಾಗಿ ಹಾವನ್ನು ಪೂರ್ತಿಯಾಗಿ ಚೀಲಕ್ಕೆ ವರ್ಗಾಯಿಸಿ ಕೊನೆಯ ಹಂತವಾಗಿ ಕ್ಷಿಪ್ರಗತಿಯಲ್ಲಿ ಹಾವಿನ ತಲೆಯನ್ನು ಬಿಟ್ಟು ಚೀಲದ ಬಾಯನ್ನು ಸುತ್ತುತ್ತಾರೆ.ಅಷ್ಟಾದರೂ ಆ ಹಾವು ಮೇಲ್ಮುಖವಾಗಿ ಚಿಮ್ಮಿದ್ದು ಚೀಲದ ಹೊರ ಮೈಯಿಂದಲೇ ಸ್ಪಷ್ಟವಾಗಿ ಗೋಚರಿಸಿ ನೆರೆದು ನೋಡಿದವರ ಮೈ ಒಂದು ಕ್ಷಣ ಜುಮ್ಮೆಂದಿತು!
ಹೀಗೆ ಜೀವ ಕಳೆದುಕೊಳ್ಳುವ ಅಪಾಯದಲ್ಲಿದ್ದ ನಾಗರಹಾವನ್ನು ಉಪಾಯದಿಂದ ಬಿಡಿಸಿ ಮತ್ತೆ ಕಾಡಿಗೆ ಕಳಿಸುವಲ್ಲಿ ಈ ಕಾರ್ಯಾಚರಣೆ ಸುಖಾಂತ್ಯ ಕಂಡಿತು. ಈ ಸಮಾಜ ಮುಖೀ ಕಾರ್ಯವನ್ನು ಊರಿನ ಸಂಘಸಂಸ್ಥೆಗಳು ಬೇಗನೆ ಗುರುತಿಸುವಂತಾಗಲಿ. ಸುಕುಮಾರ್‌ಗೆ ಸಿಗುವಂತಾಗಲಿ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು