Advertisement
ಖರ್ಗೆ, ದೇವೇಗೌಡ ಅವರಂಥವರೇ ನಿರೀಕ್ಷೆಗೂ ಮೀರಿ ಸೋಲಿನ ಅಘಾತ ಅನುಭವಿಸಿದ್ದಾರೆ. ಸಮ್ಮಿಶ್ರ ಸರಕಾರದ ಜನ ವಿರೋಧಿ, ರೈತ ವಿರೋಧಿ ನಿಲುವಿಗೆ ಮತದಾರರು ನೀಡಿದ ಉತ್ತರವಿದು ಎಂದು ಹೇಳಿದ ಅವರು, ಕಳೆದ 5 ವರ್ಷ ಮಾಡಿದ ಕೆಲಸಕ್ಕಿಂತಲೂ ಇಮ್ಮಡಿಯಾಗಿ ಕೇಂದ್ರ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ ಎಂದರು.
ಕೊಂಕಣ ರೈಲ್ವೇ ಹಳಿಗಳನ್ನು ದ್ವಿಗುಣಗೊಳಿಸುವುದು ಮತ್ತು ವಿದ್ಯುದೀಕರಣಕ್ಕೆ ಆದ್ಯತೆ ನೀಡಿ ವಿದ್ಯುತ್ ಚಾಲಿತ ರೈಲು ಬಂಡಿಗಳ ಓಡಾಟಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಮುಂಬಯಿಯಲ್ಲಿರುವ ಈ ಭಾಗದ ಜನತೆಯ ಬೇಡಿಕೆಯೂ ಇದೇ ಆಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರವು ಕರಾವಳಿ ಮತ್ತು ಮುಂಬಯಿ ನಡುವಣ ರೈಲು ಪ್ರಯಾಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
Related Articles
ಕೇಂದ್ರ ಸರಕಾರವು ರಾಜ್ಯಕ್ಕೆ ಪ್ರಾಕೃತಿಕ ವಿಕೋಪ ಮತ್ತು ತುರ್ತು ಕಾಮಗಾರಿಗಳಿಗಾಗಿ ಕಳೆದ 5 ವರ್ಷಗಳ ಅವಧಿಯಲ್ಲಿ 7 ಸಾವಿರ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಆದರೆ ಹಿಂದಿನ ಕಾಂಗ್ರೆಸ್ ಸರಕಾರ 10 ವರ್ಷಗಳಲ್ಲಿ ಕೇವಲ 4 ಸಾವಿರ ರೂ. ಅನುದಾನವನ್ನು ಮಾತ್ರ ನೀಡಿತ್ತು ಎಂದು ಆರೋಪಿಸಿದ ಅವರು, ನಗರಸಭೆ ಮತ್ತು ಗ್ರಾ.ಪಂ. ಹೆಚ್ಚಿನ ಅನುದಾನ ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ಸ್ವಾಗತಿಸಿ, ನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಆರ್. ಗೌರಿ ವಂದಿಸಿದರು.
Advertisement
ಸಚಿವರಾಗಲಿಜಿಲ್ಲಾ ಬಿಜೆಪಿ ಅಧ್ಯ- ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಕರ್ನಾಟಕದಿಂದ ಆಯ್ಕೆಯಾದ 25 ಬಿಜೆಪಿ ಸಂಸದರಲ್ಲಿ ಮೂವರು ಪುತ್ತೂರು ತಾಲೂಕಿಗೆ ಸಂಬಂಧಿಸಿದವರು. ಈ ಮೂವರು ಕೇಂದ್ರದಲ್ಲಿ ಸಚಿವರಾಗಬೇಕು ಎಂಬ ಆಸೆ ಪುತ್ತೂರಿನ ಜನರಲ್ಲಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಇನ್ನಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿ ಭಾರತದ ಗೌರವವನ್ನು ಜಗತ್ತಿನಲ್ಲೇ ಎತ್ತಿ ಹಿಡಿಯಲಿದೆ ಎಂದರು.