Advertisement

ದಿನವಿಡೀ ದುಡಿದು ಪಡೆಯುವ ಕೂಲಿ

01:23 AM Jan 16, 2021 | Team Udayavani |

ಕೆಲಸ ಮತ್ತು ವಿಶ್ರಾಂತಿ – ಇವೆರಡೂ ವಿರುದ್ಧ ಧ್ರುವಗಳು ಎಂಬುದು ಒಂದು ವಾದ. ಇನ್ನೊಂದು ವಾದವೆಂದರೆ, ಇವುಗಳು ಒಂದಕ್ಕೊಂದು ಪೂರಕ. ಸದಾ ಕೆಲಸ ಮಾಡುತ್ತಿದ್ದರೆ ವಿಶ್ರಾಂತಿ ಇಲ್ಲವಾಗುತ್ತದೆ, ಹೀಗಾಗಿ ವಿಶ್ರಾಂತಿ ಪಡೆಯಬೇಕಿದ್ದರೆ ದಿನವಿಡೀ ಸುಮ್ಮನೆ ಕುಳಿತಿರಬೇಕು ಅಥವಾ ನಿದ್ದೆ ಮಾಡ ಬೇಕು ಎನ್ನುವುದು ಒಂದು ವಾದ. ಇನ್ನೊಂದು ಇದನ್ನು ವಿರೋಧಿ ಸುತ್ತದೆ. ದಿನವಿಡೀ ಬೆವರು ಸುರಿಸಿ ದುಡಿಯ ಬೇಕು, ಆಗ ನಿದ್ದೆ ಆವರಿಸಿ ಬರುತ್ತದೆ. ದುಡಿದು ದಣಿದ ದೇಹ ಬಡಿದು ಹಾಕಿದಂತೆ ವಿಶ್ರಾಂತಿಯನ್ನು ಅನು ಭವಿಸುತ್ತದೆ ಎನ್ನುವುದು ಎರಡನೆಯ ವಾದದ ಪ್ರತಿಪಾದನೆ.

Advertisement

ಒಂದು ಹಳೆಯ ಕಥೆ ಯಿದೆ. ಇದು ವೃದ್ಧ ನೊಬ್ಬನ ಕಥೆ.

ಚೀನೀ ತಣ್ತೀಜ್ಞಾನಿ ಕನ್‌ಫ್ಯೂಶಿಯಸ್‌ ಒಮ್ಮೆ ನಡೆದು ಹೋಗುತ್ತಿದ್ದಾಗ ಒಬ್ಬ ವೃದ್ಧನನ್ನು ಕಂಡ. ವಿಚಿತ್ರ ಎಂದರೆ ಸುಮಾರು 90 ವರ್ಷಗಳಷ್ಟು ವಯಸ್ಸಿನ ಆ ವೃದ್ಧ 30ರ ಆಸುಪಾಸಿನಲ್ಲಿದ್ದ ತನ್ನ ಮಗನ ಜತೆಗೆ ಸೇರಿಕೊಂಡು ಏತದಲ್ಲಿ ನೀರೆತ್ತುತ್ತಿದ್ದ. ಏತಕ್ಕೆ ಎತ್ತುಗಳನ್ನು ಕಟ್ಟಿರ ಲಿಲ್ಲ; ಒಂದು ಬದಿಯಲ್ಲಿ ವೃದ್ಧ, ಇನ್ನೊಂದು ಬದಿಯಲ್ಲಿ ಅವನ ಮಗ ನೊಗಕ್ಕೆ ಕೊರಳೊಡ್ಡಿದ್ದರು.

ಕನ್‌ಫ್ಯೂಶಿಯಸ್‌ಗೆ ಬಹಳ ವಿಚಿತ್ರ ವಾಗಿ ಕಂಡದ್ದು ಇದೇ. ಅವನಿಗೆ ಅಪ್ಪನ ಜತೆಗೆ ಕಷ್ಟಪಡುತ್ತಿದ್ದ ಯುವಕನ ಬಗ್ಗೆ ಬಹಳ ಕನಿಕರ ಉಂಟಾಯಿತು.

ಕನ್‌ಫ್ಯೂಶಿಯಸ್‌ ಸುಮಾರು ಹೊತ್ತಿನ ವರೆಗೆ ವೃದ್ಧ ತಂದೆ ಮತ್ತು ಯುವಕ ಮಗ ನೀರೆಳೆಯುತ್ತಿದ್ದುದನ್ನು ನೋಡಿದ. ಬಳಿಕ ಮೆಲ್ಲನೆ ವೃದ್ಧ ತಂದೆಯ ಬಳಿಗೆ ಹೋಗಿ, “ನಿನ್ನ ಮಗನಿಗೆ ಸುಮ್ಮನೆ ಯಾಕೆ ಕಷ್ಟ ಕೊಡುತ್ತಿದ್ದೀಯಾ? ಇದು ಮೂರ್ಖ ತನ ಅನ್ನಿಸುವುದಿಲ್ಲವೇ? ಎತ್ತುಗಳನ್ನು ಹೂಡಿ ಈ ಕೆಲಸ ಮಾಡಿಸಬಾರದೇ’ ಎಂದು ಪ್ರಶ್ನಿಸಿದ.

Advertisement

“ಶ್ಶೂ… ಸುಮ್ಮನಿರಿ. ಈಗ ನನ್ನ ಮಗನಿಗೆ ಕೇಳುವ ಹಾಗೆ ಇಂಥ ಅಪದ್ಧಗಳನ್ನೆಲ್ಲ ನುಡಿಯಬೇಡಿ. ಇದೆಲ್ಲ ಅವನ ಕಿವಿಗೆ ಬೀಳಬಾರದು. ಸ್ವಲ್ಪ ಹೊತ್ತಿನ ಬಳಿಕ ಅವನು ಉಣ್ಣಲು ಹೊರಡುತ್ತಾನೆ. ನಿಮ್ಮದೇನಿದ್ದರೂ ಆಗ ಮಾತನಾಡಿ’ ಎಂದು ವೃದ್ಧ ತಂದೆ ಕನ್‌ಫ್ಯೂಶಿಯಸ್‌ನ ಬಾಯಿ ಮುಚ್ಚಿಸಿದ.

ಕನ್‌ಫ್ಯೂಶಿಯಸ್‌ಗೆ ಮತ್ತಷ್ಟು ಆಶ್ಚರ್ಯವಾಯಿತು. ಆದರೂ ವೃದ್ಧನ ವಿನಂತಿಯಂತೆ ಆತ ಅಲ್ಲೇ ಬದಿಯ ಮರದಡಿಯಲ್ಲಿ ಕೊಂಚ ವಿಶ್ರಮಿಸಿದ. ಸ್ವಲ್ಪ ಹೊತ್ತಿನಲ್ಲಿ ವೃದ್ಧನ ಮಗ ಊಟಕ್ಕಾಗಿ ಹೊರಟು ಹೋದಾಗ ಕನ್‌ಫ್ಯೂಶಿ ಯಸ್‌ ಮತ್ತೆ ವೃದ್ಧನ ಬಳಿಗೆ ಬಂದು ಪ್ರಶ್ನೆಗ ಳನ್ನು ಪುನ ರಾವರ್ತಿ ಸಿದ. ಮಾತ್ರ ವಲ್ಲದೆ, ಈ ಪ್ರಶ್ನೆಗಳನ್ನು ಯುವಕ ಮಗ ಕೇಳ ಬಾರದು ಯಾಕೆ ಎಂದೂ ಪ್ರಶ್ನಿಸಿದ.

ವೃದ್ಧ ಕೊಟ್ಟ ಉತ್ತರ ಹೀಗಿತ್ತು, “ನನಗೆ ಈಗ 90 ವರ್ಷ ವಯಸ್ಸಾಗಿದೆ. ಆದರೂ 30ರ ನನ್ನ ಮಗನ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಮರ್ಥ್ಯ ಹೊಂದಿದ್ದೇನೆ. ಈಗ ನಾನು ಏತ ತಿರುಗಿಸಲು ಎತ್ತುಗಳನ್ನು ನಿಯೋ ಜಿಸಿದರೆ ನನ್ನ ಮಗ ಜಡ್ಡುಗಟ್ಟುತ್ತಾನೆ, ಅವನಿಗೆ 90 ವರ್ಷವಾಗುವ ಹೊತ್ತಿಗೆ ಏನೂ ಸಾಮರ್ಥ್ಯ ಉಳಿದಿರುವುದಿಲ್ಲ. ಇದಕ್ಕಾಗಿಯೇ ನಿಮ್ಮ ಪ್ರಶ್ನೆಗಳನ್ನೆಲ್ಲ ಮಗನಿಗೆ ಕೇಳುವ ಹಾಗೆ ಎತ್ತಬೇಡಿ ಎಂದು ಹೇಳಿದ್ದು. ನಗರದಲ್ಲಿ ಇದಕ್ಕಾಗಿ ಯಂತ್ರಗಳು ಲಭ್ಯವಿವೆ ಎಂಬುದು ಕೂಡ ನನಗೆ ಗೊತ್ತು. ಅವನ್ನೆಲ್ಲ ಅಳವಡಿಸಿಕೊಂಡರೆ ನನ್ನ ಮಗನ ಕಥೆ ಏನಾದೀತು, ಅವನ ಆರೋಗ್ಯ ಹೇಗಾ ದೀತು, ಶರೀರದ ಕಥೆಯೇನು…’

ನಾವು ಒಂದು ಕೈಯಿಂದ ಮಾಡು ವುದು ಇನ್ನೊಂದು ಕೈಯ ಮೇಲೆ ಪರಿಣಾಮ ಬೀರುತ್ತದೆ. ಮೈಮುರಿ ಯುವಂತೆ ದುಡಿದವನನ್ನು ಮಾತ್ರ ನಿದ್ದೆ ಒತ್ತರಿಸಿಕೊಂಡು ಬರುತ್ತದೆ. ವಿಶ್ರಾಂತಿ ಬೇಕಲ್ಲ ಎಂದುಕೊಂಡು ಹಗಲಿಡೀ ಆರಾಮ ಕುರ್ಚಿಯಲ್ಲಿ ಕುಳಿತವನು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡ ಬೇಕಾಗುತ್ತದೆ. ವಿಶ್ರಾಂತಿ ಎಂಬುದು ದುಡಿದು ಪಡೆ ಯಬೇಕಾದ ಕೂಲಿ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next