Advertisement

ಕಾರ್ಮಿಕರಿಗೆ ಮಳೆಗಾಲದವರೆಗೆ ಕೆಲಸ

05:18 PM May 16, 2020 | Suhan S |

ತಾವರಗೇರಾ: ಕೃಷಿ ಇಲಾಖೆಯ ಜಲಾಮೃತ ಯೋಜನೆಯಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 4012 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿ ಕಾರಿ ಎಸ್‌.ವಿ. ಹುಣಿಸಿಹಾಳ ತಿಳಿಸಿದ್ದಾರೆ.

Advertisement

ಇತ್ತೀಚಿಗೆ ಸಮೀಪದ ಮ್ಯಾದರಡೊಕ್ಕಿ, ಗರ್ಜನಾಳ, ಕಳಮಳ್ಳಿ ಗ್ರಾಮಗಳ ಹೊರ ವಲಯದ ಜಮೀನುಗಳಲ್ಲಿ ಬದು ನಿರ್ಮಾಣ, ಕಂದಕ ನಿರ್ಮಾಣ ಕಾಮಗಾರಿಗಳನ್ನು ತೆಗೆದುಕೊಂಡಿದ್ದು ಸುಮಾರು 11 ಲಕ್ಷ ರೂ. ಕಾಮಗಾರಿ ಮುಗಿದಿದೆ. ಒಂದು ದಿನದ ಕೂಲಿ 275 ರೂ. ನೀಡಲಾಗುತ್ತದೆ. ಮಳೆಗಾಲ ಬರುವ ತನಕ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ಹನಮಗೌಡ ಪೊಲೀಸಪಾಟೀಲ್‌ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಜುಮಲಾಪೂರ ಗ್ರಾಪಂ ಅಧ್ಯಕ್ಷೆ ಕಮಲಮ್ಮ ರಾಠೊಡ್‌, ಸಹಾಯಕ ಕೃಷಿ ಅಧಿಕಾರಿಗಳಾದ ಯಲ್ಲಪ್ಪ ಗಿಟಗಿ, ಶಿವಾನಂದ ಮಾಳಗಿ, ದೊಡ್ಡಬಸವ ಇದ್ಲಾಪೂರ, ಮತ್ತು ಗ್ಯಾನಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next