Advertisement

ಅಷ್ಟದಿಕ್ಕುಗಳಿಂದ ಹರಿದುಬಂದ ಕಾರ್ಯಕರ್ತರು

03:12 PM Jan 03, 2018 | Team Udayavani |

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಪುತ್ತೂರಿನಲ್ಲಿ ನಡೆದ ಬೃಹತ್‌ ಹಿಂದೂ ಜಾಗೃತ ಸಮಾವೇಶಕ್ಕೆ ಮೊದಲು ನಗರದ ಅಷ್ಟ ದಿಕ್ಕಿನಿಂದ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ 2 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ಈ ಸಭೆಗೆ ನಗರದ ಎಂಟು ದಿಕ್ಕುಗಳಿಂದ ಮೆರವಣಿಗೆ ಸಾಗಿಬಂದದ್ದು ವಿಶೇಷ. ಪ್ರಮುಖ ಸ್ಥಳಗಳಲ್ಲಿ ಜಮಾವಣೆಯಾದ ಜನರು, ಬಳಿಕ ಮೆರವಣಿಗೆಯಲ್ಲಿ ಸಾಗಿಬಂದರು. ಮೆರವಣಿಗೆಯಲ್ಲಿ ಬರುತ್ತಿದ್ದ ಕಾರ್ಯಕರ್ತರಿಗೆ ವಿವಿಧ ಕಡೆಗಳಲ್ಲಿ ಪಾನೀಯದ ವ್ಯವಸ್ಥೆ ಮಾಡುವ ಮೂಲಕ, ಸ್ವಾಗತ ಕೋರಿದರು.

Advertisement

ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಟ್ಲ, ಪಟ್ನೂರು ಪಳ್ಳ, ಪುರುಷರಕಟ್ಟೆ, ಕೈಕಾರ ವಿನಾಯಕನಗರ, ಕುಂಜೂರುಪಂಜ, ಪರ್ಪುಂಜ, ಕೋಡಿಂಬಾಡಿ, ಮುಂಡೂರಿನಿಂದ ಮೆರವಣಿಗೆ ಹೊರಟಿತು. ಇದರ ನೇತೃತ್ವವನ್ನು ಬಜರಂಗದಳದ ಶರಣ್‌ ಪಂಪ್‌ವೆಲ್‌, ರಘು ಸಕಲೇಶಪುರ, ಭುಜಂಗ, ಜಗದೀಶ್‌ ಶೇಣವ, ಭಾಸ್ಕರ ಧರ್ಮಸ್ಥಳ, ಡಾ| ಕೃಷ್ಣಪ್ರಸನ್ನ, ಸುನೀಲ್‌ ಕೆ.ಆರ್‌., ಮುರಳೀಕೃಷ್ಣ ಹಸಂತ್ತಡ್ಕ ಹಾಗೂ ಹಿಂದೂ ಜಾಗರಣ ವೇದಿಕೆಯ ಸುಭಾಶ್‌ ಪಡೀಲ್‌, ರವಿರಾಜ್‌ ಬಿ.ಸಿ. ರೋಡ್‌, ರವಿರಾಜ್‌ ಕಡಬ, ಕಿಶೋರ್‌ ಮಂಗಳೂರು,
ರಾಧಾಕೃಷ್ಣ ಅಡ್ಯಂತಾಯ, ಮಂಜು ಮಂಡ್ಯ, ಅರವಿಂದ್‌ ಕೋಟೆಕಾರ್‌ ವಹಿಸಿಕೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ಇತರರು ಪಾದಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿದ್ದವು. ಠಾಣೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ಸಂಘಟನೆ ಪರ ಘೋಷಣೆ ಹಾಕುತ್ತಾ ಸಾಗಿಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next