ಮುಂಬಯಿ, ಫೆ. 13: ಮೀರಾ-ಭಾಯಂದರ್ ಹೊಟೇಲ್ ಅಸೋಸಿಯೇಶನ್ ಇದರ ಹೊಟೇಲ್ ಕಾರ್ಮಿಕರಿಗಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರವು ಫೆ. 13 ರಂದು ಬೆಳಗ್ಗೆ ಮೀರಾ-ಭಾಯಂದರ್ ರೋಡ್, ಗೋಲ್ಡನ್ ನೆಸ್ಟ್ ಸಮೀಪದ ಪಯ್ಯಡೆ ರೆಸಿಡೆನ್ಸಿ ಹೊಟೇಲ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೀರಾ – ಭಾಯಂದರ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ ಶೆಟ್ಟಿ ಅವರು ಮಾತನಾಡಿ, ಹೋಟೆಲ್ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲು ಕಾರ್ಮಿಕರ ಸಹಭಾಗಿತ್ವ ಅಗತ್ಯವಾಗಿದೆ. ಸಿಬಂದಿಗಳ ಆರೈಕೆಯಿಂದ ಮಾಲಕರೊಂದಿಗೆ ಅವಿನಾಭಾವ ಸಂಬಂದ ಬೆಳೆಯಲು ಸಾದ್ಯವಾಗಲಿದೆ. ಆರಂಭಿಕ ಹಂತದಲ್ಲಿ ಖಾಯಿಲೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಈ ಶಿಬಿರದ ಉದ್ದೇಶವಾಗಿದೆ. ಪರಿಸದ 155 ಹೊಟೇಲ್ ಗಳಿಂದ ಸುಮಾರು 620 ಮಂದಿ ಉದ್ಯೊಗಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಶಿಬಿರಗಳ ಸದುಪಯೋಗವನ್ನು ಹೊಟೇಲ್ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ನುಡಿದು ಶುಭಹಾರೈಸಿದರು.
ಈ ಸಂದರ್ಭ ರಕ್ತದೊತ್ತಡ, ಮಧುಮೇಹ, ಚರ್ಮರೋಗ, ಕಿವಿ, ಮೂಗು, ಗಂಟಲು ಸಮಸ್ಯೆ, ಹೃದಯ ಕಾಯಿಲೆ, ಕಣ್ಣಿನ ಮತ್ತು ಮೂಳೆಗಳ ತಪಾಸಣೆಗಳನ್ನು ವಿಶೇಷ ತಜ್ಞರಾದ ಡಾ| ಭಾಸ್ಕರ ಶೆಟ್ಟಿ ಆಥೊìಪೆಡಿಕ್ಸ್, ಡಾ| ಅಂಜನ ಗಾಳ, ಡಾ| ನೀಪಾ ವಿ., ಡಾ| ದೀರಜ್ ಪಾಲ್, ಡಾ| ರಾಮ್ ವಿಲಾಸ್‌ನಾಗ್, ಡಾ| ಬ್ರಿಗೇಶ್ ದುಬೆ, ಬೊಗಿಲಾಲ್ ಎಂ., ಡಾ| ಹೇಮಂತ್ ಪಾಂಚಲ್, ಡಾ| ಸ್ವಪ್ನಾಲಿ ದೆವಲ್ಕರ್ ಹಾಗೂ ಸಿಬಂದಿ ವರ್ಗದವರು ಮಾಡಿ ಸಹಕರಿಸಿದರು.
ಮೀರಾ- ಭಾಯಂದರ್ ಹೊಟೇಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಉಪಾಧ್ಯಾಕ್ಷರಾದ ಚಂದ್ರಕಾಂತ ಶೆಟ್ಟಿ, ಮೋಹನ್ ಶೆಟ್ಟಿ,ಪ್ರಶಾಂತ್ ಪೂಜಾರಿ, ಸಲಹೆಗಾರರಾದ ರತ್ನಾಕರ ಶೆಟ್ಟಿ ತಾಳಿಪಾಡಿಗುತ್ತು, ಸದಸ್ಯರಾದ ಆನಂದ ಶೆಟ್ಟಿ, ಶುಭಂ ವಿನೀತ್ ಶೆಟ್ಟಿ, ಜೀವನ್ ಶೆಟ್ಟಿ, ಅನಿಲ್ ಶೆಟ್ಟಿ, ಸಾಯಿದೀಪ್ ಮೋಹನ್ ಶೆಟ್ಟಿ, ಹರೀಶ್ ಶೆಟ್ಟಿ, ಸಾಯಿ ಪೂಜಾ ಸಂತೋಷ್ ಶೆಟ್ಟಿ, ಸಮ್ಮಾನ್ ಹರೀಶ್ ಶೆಟ್ಟಿ, ಉದಯ ಶೆಟ್ಟಿ, ದೇವಿ ಜ್ಯೋತಿ ದಿನೇಶ್ ಶೆಟ್ಟಿ, ಅಶೀಷ್, ಜಿ. ಕೆ. ಕೆಂಚನಕೆರೆ, ಹಾರ್ದಿಕ್ ಪ್ಯಾಲೇಸ್ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಭಾಂಗಣ ನೀಡಿ ಸಹಕರಿಸಿದ ಪದ್ಮನಾಭ ಪಯ್ಯಡೆ ಅವರನ್ನು ಗೌರವಿಸಲಾಯಿತು. ಮೀರಾ- ಭಾಯಂದರ್ ಹೊಟೇಲ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ ಹೊಟೇಲ್ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ–ವರದಿ: ರಮೇಶ ಅಮೀನ್