Advertisement

ಕಾರ್ಮಿಕರ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ

03:21 PM Feb 21, 2018 | Team Udayavani |

ರಾಯಚೂರು: ನೀರು ನಿರ್ವಹಣಾ ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮೀನ ಮೇಷ ಎಣಿಸುತ್ತಿರುವ ಕ್ರಮ ಸರಿಯಲ್ಲ ಎಂದು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ (ಟಿಯುಸಿಐ ಸಂಯೋಜಿತ) ಅಧ್ಯಕ್ಷ ಆರ್‌. ಮಾನಸಯ್ಯ ದೂರಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ನೀರು ಪೂರೈಕೆಗೆ ಸಹಕರಿಸದ ಕಾರ್ಮಿಕರಾದ ನರಸಿಂಹ ನಾಯಕ, ಬಸವರಾಜ, ಶಿವಕುಮಾರ ಹಾಗೂ ವೆಂಕಟೇಶರ ಮೇಲೆ ತುಂಗಭದ್ರಾ ಎಡದಂಡೆ ಕಾಲುವೆ ವಿತರಣಾ ಕಾಲುವೆ ನಂಬರ್‌ 76ರಲ್ಲಿ ನಡುಗಡ್ಡೆ ಕ್ಯಾಂಪ್‌ನ ಪುಲ್ಲರಾವ್‌, ಸುಬ್ಟಾರಾವ್‌ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಕಾರ್ಮಿಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ಕುರಿತು ಕವಿತಾಳ ಠಾಣೆಗೆ ದೂರು ಸಲ್ಲಿಸಿದರೂ 10 ಗಂಟೆಗಳ ನಂತರ ದೂರು ದಾಖಲಿಸಲಾಗಿದೆ. ಆದರೆ, ಕವಿತಾಳ ಪೊಲೀಸರು ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು. ಆರೋಪಿಗಳು ಎಂಎಲ್‌ಸಿ ಎನ್‌.ಎಸ್‌.ಬೋಸರಾಜ ಅವರ ಬೆಂಬಲಿಗರೊಂದಿಗೆ ಕಾರ್ಮಿಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. 

ನಡುಗಡ್ಡೆ ಕ್ಯಾಂಪ್‌ನಲ್ಲಿ ರೈತರಿಗಿಂತ ಭೂ ಮಾಲೀಕರ ಭೂಮಿ ಹೆಚ್ಚಿನ ಪ್ರಮಾಣದಲ್ಲಿದೆ. ರೈತರ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಕುಡಿಯುವ ನೀರಿಗಿಂತ ಸಾಗುವಳಿ ನೀರಿಗೆ ಹೆಚ್ಚಿನ ಮಹತ್ವ ನೀಡಬಾರದು ಎಂಬ ನಿಯಮವಿದೆ. ನೀರಾವರಿ ಇಲಾಖೆ ಮುನ್ಸೂಚನೆ ನೀಡಿದ್ದರೂ ಭತ್ತ ನಾಟಿ ಮಾಡಿದ್ದಾರೆ. ರೈತರ ಹೆಸರಿನಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅಕ್ರಮ ಮರಳು, ನೀರು, ಭೂಮಿ ಲಾಬಿ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲೆಯ ಪೊಲೀಸರು ನಿಷ್ಕ್ರಿàಯರಾಗಿದ್ದಾರೆ. ಎನ್‌.ಎಸ್‌.ಬೋಸರಾಜ ಹಾಗೂ ಅವರ ಪುತ್ರ ರವಿ ಬೋಸರಾಜ ಅವರಿಂದ ಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆಪಾದಿಸಿದರು.

24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ, ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಧುಮುಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್‌, ಕಾರ್ಮಿಕ ಮುಖಂಡ  ಜಿ.ಅಮರೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next