Advertisement

ಬಾಕಿ ವೇತನಕ್ಕಾಗಿ ಪೌರ ಕಾರ್ಮಿಕರ ಸತ್ಯಾಗ್ರಹ

01:27 PM Aug 20, 2019 | Suhan S |

ಕಾರಟಗಿ: ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಜಿಲ್ಲಾ ಪ್ರಗತಿಪರ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಮಾತನಾಡಿ, ಕಾರಟಗಿ ಪುರಸಭೆಯಲ್ಲಿ 21 ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ 2 ವರ್ಷದಿಂದ ಈ ಕಾರ್ಮಿಕರಿಗೆ ವೇತನ ಪಾವತಿಸದೇ ಪುರಸಭೆ ಆಡಳಿತ ಮಲತಾಯಿ ಧೋರಣೆ ತೋರುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ 21 ಜನರಲ್ಲಿ 7 ಜನ ಲೋಡರ್, 10 ಜನ ಮನೆಮುಂದೆ ಕಸ ಸಂಗ್ರಹಿಸುವವರು. ಮೂವರು ವಾಹನ ಚಾಲಕರು, ಒಬ್ಬರು ಪುರಸಭೆ ಕಚೇರಿಯಲ್ಲಿ ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇತನ ಪಾವತಿಗಾಗಿ ಎರಡು ವರ್ಷಗಳಿಂದ ಎರಡು ತಿಂಗಳಿಗೊಮ್ಮೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕಾರ್ಯ ನಿರ್ವಹಿಸುತ್ತಲಿದ್ದರೂ ವೇತನ ಪಾವತಿಸದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವೇತನ ನೀಡದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಪೌರಕಾರ್ಮಿಕರಿಗೆ ನೇರ ಪಾವತಿ ಯೋಜನೆಯಡಿ ಉದ್ಯೋಗ ಭದ್ರತೆ ಕಲ್ಪಿಸಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

Advertisement

ಪ್ರಗತಿಪರ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಭಾರಧ್ವಾಜ್‌ ಮಾತನಾಡಿ, ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರಟಗಿ ಪುರಸಭೆ ಗುತ್ತಿಗೆ ಪೌರ ಕಾರ್ಮಿಕರನನ್ನು ಮೊದಲು ಕಾಯಂಗೊಳಿಸಬೇಖು. 2 ವರ್ಷದಿಂದ ಬಾಕಿಯಿರುವ ವೇತನ ಶೀಘ್ರ ಪಾವತಿಸಬೇಕು. ಈಗಾಗಲೆ ವೇತನವಿಲ್ಲದೇ ಪೌರಕಾರ್ಮಿಕರ ಕುಟುಂಬಗಳು ಜೀವನ ನಿರ್ವಹಿಸಲಾಗದೆ ಬೀದಿಪಾಲಾಗುವ ಸ್ಥಿತಿಗೆ ತಲುಪಿದ್ದಾರೆ. 2-3 ಬಾರಿ ಧರಣಿ ನಡೆಸಿದ ಸಂದರ್ಭದಲ್ಲಿ ನೀಡಿದ್ದ ಭ‌ರವಸೆಗಳು ಈಡೇರಿಲ್ಲ ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದರು.

ಪೌರ ಕಾರ್ಮಿಕ ಹನುಮಂತಿ ಮಾತನಾಡಿ, ವೇತನವಿಲ್ಲದೇ ನಿತ್ಯ ಹೊಟ್ಟೆ ತುಂಬಿಸಿಕೊಳ್ಳುವುದು ದುಸ್ತರವಾಗಿದೆ. ಪೌರ ಕಾರ್ಮಿಕರ ಹಿತ ಕಾಪಾಡುವವರೆ ಹೀಗೆ ನಿರ್ಲಕ್ಷ ವಹಿಸಿದರೆ ನಮ್ಮ ಮುಂದಿನ ನಮ್ಮ ಸ್ಥಿತಿಗತಿ ಹೊಣೆಯಾರು? ನಮ್ಮ ಮುಂದಿನ ತರಾತುರಿ ನಿರ್ಧಾರಗಳಿಗೆ ಪುರಸಭೆಯೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಪೌರಕಾರ್ಮಿಕರಾದ ಶೇಖರಪ್ಪ, ಹುಲಗಪ್ಪ, ದುರಗಪ್ಪ, ಕೆ. ಗಂಗಪ್ಪ, ದುರಗಪ್ಪ, ಆನಂದ, ಹುಲಗಪ್ಪ, ಮಲ್ಲೇಶಪ್ಪ, ಮಾರೆಮ್ಮ, ಹುಲಿಗೆಮ್ಮ, ಅಯ್ಯಮ್ಮ, ಜಲಾಲೆಮ್ಮ, ಮಹಾಕಾಳಮ್ಮ, ದುರಗಮ್ಮ, ಹನುಮಂತ, ಮಹಾಂಕಾಳಿ, ಶರಣಮ್ಮ, ಜ್ಯೋತಿ, ಲಕ್ಷಿ ್ಮೕ, ದ್ಯಾವಮ್ಮ, ದೊಡ್ಡ ದ್ಯಾವಮ್ಮ, ಸಣ್ಣ ದ್ಯಾವಮ್ಮ, ಶರಣಮ್ಮ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next