Advertisement

ಛತ್ತೀಸಗಡ್‌ಗೆ ಕಾರ್ಮಿಕರು ವಾಪಸ್‌

10:40 AM Jun 02, 2020 | Suhan S |

ಅಥಣಿ: ಕಳೆದ ಎಪ್ಪತ್ತು ದಿನಗಳಿಂದ ಸರ್ಕಾರಿ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಛತ್ತೀಸ್‌ಗಡ್‌ ರಾಜ್ಯದ 30 ಕಾರ್ಮಿಕರನ್ನು ಸರ್ಕಾರದ ನಿರ್ದೇಶನದಂತೆ ಅವರ ರಾಜ್ಯಕ್ಕೆ ಕಳುಹಿಸಲಾಯಿತು.

Advertisement

ಎಪ್ಪತ್ತು ದಿನಗಳ ಹಿಂದೆ ಛತ್ತೀಸಗಡ್‌ ಮೂಲದ ಕಾರ್ಮಿಕರು ಶೇಗುಣಸಿ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು, ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಆಗ ತಾಲೂಕು ಆಡಳಿತ ಸಂಕ್ರಟ್ಟಿ ಗ್ರಾಮದಲ್ಲಿ ಅವರನ್ನು ಕ್ವಾರಂಟೈನ್‌ ಮಾಡಿತ್ತು. ಕಳೆದವಾರ ಸ್ಥಳಕ್ಕೆ ಡಿಸಿಎಂ ಲಕ್ಷ್ಮಣ್‌ ಸವದಿ ಭೇಟಿ ನೀಡಿ, ಕಾರ್ಮಿಕರನ್ನು ಮರಳಿ ಅವರು ಊರಿಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಸಚಿವರ ಸೂಚನೆಯಂತೆತಹಶೀಲ್ದಾರ ದುಂಡಪ್ಪ ಕೋಮಾರ 30 ಕಾರ್ಮಿಕರನ್ನು ಕೆಎಸ್ಸಾರ್ಟಿಸಿ ಬಸ್‌ ಮುಖಾಂತರ ಮರಳಿ ಅವರ ಊರಿಗೆ ಕಳಿಹಿಸಲು ವ್ಯವಸ್ಥೆ ಮಾಡಿದ್ದರು. ಕಾರ್ಮಿಕರನ್ನು ಕಳುಹಿಸುವಾಗ ತಹಶೀಲ್ದಾರ್‌ ದುಂಡಪ್ಪ ಕೋಮಾರ, ತಾಪಂ ಇಒ ರವಿ ಬಂಗಾರಪ್ಪನವರ, ಪಿಡಿಒ ಎಸ್‌ ಎಸ್‌ ಸತ್ತಿಗೇರಿ ಹಾಗೂ ಸಂಕ್ರಟ್ಟಿ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next