ಹಾಸನ: ನಗರಸಭೆಯ ನೇರ ಪಾವತಿ ಮತ್ತು ಹೊರಗುತ್ತಿಗೆ ನೌಕರರ ಹಾಗೂ ಪೌರ ಕಾರ್ಮಿಕರ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕೆಂ ದು ಆಗ್ರಹಿಸಿ ನಗರಸಭೆ ಆವರಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಪೌರ ಕಾರ್ಮಿಕರು ಧರಣಿ ನಡೆಸಿದರು.
ಹಾಸನ ನಗರ ಸಭೆಯಲ್ಲಿ ನೇರ ಪಾವತಿ ಗುತ್ತಿಗೆ, ಹೊರ ಗುತ್ತಿಗೆ ಅಡಿ ಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ಲೋಡರ್‌ಗಳು, ನೀರು ಗಂಟಿಗಳು, ಕಸದ ಅಟೋ ಚಾಲಕರು, ವಾಹನಗಳ ಚಾಲಕರು, ಕಂಪ್ಯೂ ಟರ್ ಅಪರೇಟರ್‌ಗಳು, ಯುಜಿಡಿ ಕಾರ್ಮಿಕರು, ಕಚೇರಿ ಸಹಾಯಕರಿಗೆ ಉದ್ಯೋಗ ಭದ್ರತೆ ಇಲ್ಲ. ಕೆಲಸಕ್ಕೆ ಸರಿಯಾದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು.
ನೇರ ವೇತನಕ್ಕೆ ಪಾವತಿಗೆ ಆಗ್ರಹ: ಈ ನೌಕರರ ಸೇವೆಗಳನ್ನು ಹಂತ ಹಂತವಾಗಿ ಕಾಯಂಗೊಳಿಸ ಬೇಕು. ಕಾಯಂಗೊಳಿಸುವ ತನಕ ಎಲ್ಲ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ವೇತನ ಪಾವತಿಸಬೇಕು. ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಎಲ್ಲ ಕಾರ್ಮಿಕ ರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಎಲ್ಲ ಪೌರ ಕಾರ್ಮಿ ಕರು, ಲೋಡರ್, ಹೆಲ್ಪರ್ಸ್ ಮತ್ತು ಕಸ ಸಾಗಿಸುವ ವಾಹನ ಚಾಲಕರು ಮತ್ತು ಸಹಾಯಕರು, ಯುಜಿಡಿ ಕಾರ್ಮಿಕರನ್ನು ಸಫಾಯಿ ಕರ್ಮಚಾರಿ ಗಳೆಂದು ಪರಿಗಣಸಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರ ಬೇಡಿಕೆ: ಈ ಎಲ್ಲ ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿ ಉಚಿತ ನಿವೇಶನ ನೀಡಿ ವಸತಿ ನಿರ್ಮಿಸಿಕೊv ಬೇಕು. ಸಮವಸ್ತ್ರ ಮತ್ತು ಸುರಕ್ಷತ ಸಲಕರಣೆ ಕಡ್ಡಾಯವಾಗಿ ನೀಡಬೇಕು. ಕಾರ್ಮಿಕರ ಕಾನೂನುಗಳನ್ನು ಬದಲಿಸಿರುವ ಕೇಂದ್ರ ಸರ್ಕಾರದ ನೀತಿ ಕೈ ಬಿಡಬೇಕು. ಗುತ್ತಿಗೆ ಪದ್ಧತಿ ನಿಷೇಧಿಸಿ ಎಲ್ಲ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಮನವಿಯನ್ನು ನಗರಸಭೆ ಅಧ್ಯಕ್ಷರಿಗೆ ಸಲ್ಲಿಸಿದರು.
ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ದೇಶದ ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಒಕ್ಕೂಟಗಳ ಬೆಂಬಲದೊಂದಿಗೆ 28 ಮತ್ತು 29ರಂದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ದೇಶವ್ಯಾಪಿ ಮುಷ್ಕರ ನಡೆಸಲಿದೆ. ಈ ಮುಷ್ಕರದಲ್ಲಿ ಜೆಸಿಟಿಯು ಭಾಗವಾಗಿರುವ ಸಿಐಟಿಯು ಸಂಘಟನೆ ನೇತೃತ್ವ ದಲ್ಲಿ ಮುನಿಸಿಪಲ್ ಕಾರ್ಮಿಕರು ಭಾಗವಸಲಿದ್ದಾರೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಖಜಾಂಚಿ ಮಂಜು ನಾಥ್, ಎಂ.ಜಿ. ಪೃಥ್ವಿ, ಅರವಿಂದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.