Advertisement

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

10:29 AM Jun 20, 2024 | Team Udayavani |

ಪಣಜಿ: ವೆರ್ಣಾದಲ್ಲಿರುವ ಡ್ಯುರಾಲೈನ್ ಕಂಪನಿಯಿಂದ ಹಠಾತ್ ಸೇವೆಯಿಂದ ವಜಾಗೊಂಡ 49 ಜನ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಎಐಟಿಕೆ ಪಣಜಿಯ ಆಜಾದ ಮೈದಾನದಲ್ಲಿ ಪ್ರತಿಭಟನೆ ನಡೆಸಿತು. ಈ ಕಾರ್ಮಿಕರ ಸಮಸ್ಯೆ ಬಗೆಹರಿಯುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

Advertisement

ಆಜಾದ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇವೆಯಿಂದ ವಜಾಗೊಂಡ ಎಲ್ಲ 49 ಜನ ಕಾರ್ಮಿಕರು ಉಪಸ್ಥಿತರಿದ್ದು ಘೋಷಣೆಗಳನ್ನು ಕೂಗಿದರು. ಕಳೆದ ಏಪ್ರಿಲ್ 1 ರಿಂದ ಕಂಪನಿಯು ಯಾವುದೇ ಮುನ್ಸೂಚನೆ ನೀಡದೆಯೇ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತಾವು ಕಂಪನಿಯ ಗೇಟ್ ಹೊರಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

ಡ್ಯುರಾಲೈನ್ ಕಂಪನಿಯು ಅಮೇರಿಕನ್ ಕಂಪನಿಯಾಗಿದ್ದು ಕಳೆದ 30 ವರ್ಷಗಳಿಂದ ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಲಸದಿಂದ ವಜಾಗೊಂಡ ಕಾರ್ಮಿಕರು ಇದೇ ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ 31 ರ ಮಧ್ಯರಾತ್ರಿ ಈ ಕಾರ್ಮಿಕರ ಮೊಬೈಲ್ ಪೋನ್‍ಗೆ ನಾಳೆಯಿಂದ ಕೆಲಸಕ್ಕೆ ಬರದಂತೆ ಸಂದೇಶ ಕಳುಹಿಸಲಾಗಿತ್ತು ಎಂದು ಎಐಟಿಕೆ ಮುಖಂಡರು ಆರೋಪಿಸಿದ್ದಾರೆ. ಸೆಟಲ್‍ಮೆಂಟ್ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಕೂಡ ತಿಳಿಸಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.

ಇದನ್ನೂ ಓದಿ: Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Advertisement

Udayavani is now on Telegram. Click here to join our channel and stay updated with the latest news.

Next