ಸಂಘಟನೆಗಳ ಮುಖಂಡರು ಜೀಪ್ ಜಾಥಾ ನಡೆಸಿದರು.
Advertisement
ಈ ವೇಳೆ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ದೇವಮ್ಮ ಅನ್ನದಾನಿ ಮಾತನಾಡಿ, ದೇಶದಲ್ಲಿ ಕಾರ್ಮಿಕರ ಪರವಾದ 44 ಕಾನೂನುಗಳಿವೆ. ಅವುಗಳನ್ನು ಕೇಂದ್ರ ಸರ್ಕಾರ ಬದಲಿಸಿ ನಾಲ್ಕು ಕೋಡ್‌ಗಳಾಗಿ ಮಾಡಲು ಹೊರಟಿದೆ. ಜತೆಗೆ ಕಾರ್ಮಿಕರ ಕಾನೂನು ತಿದ್ದುಪಡಿ ಮಸೂದೆ ತರಲು ಮುಂದಾಗಿದೆ.
8,9 ರಂದು ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳಿದರು. ದಿನನಿತ್ಯ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ತಡೆಗಟ್ಟಲು, ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಟಿಸಲು, 18 ಸಾವಿರ ರೂ. ಕನಿಷ್ಠ ವೇತನ ಜಾರಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಕಡಿತ, ಸ್ಕೀಂ ನೌಕರರನ್ನು ಕಾಯಂ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ದೇಶದ ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಟೋ, ಬಸ್, ಲಾರಿ, ಹಮಾಲರು, ಅಂಗನವಾಡಿ, ಬ್ಯಾಂಕ್, ಎಲ್.ಐ.ಸಿ, ಸರ್ಕಾರಿ ನೌಕರರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ಭಾಗವಹಿಸಲಿವೆ. ಎರಡು ದಿನ ಇಡೀ ಭಾರತ ಸಂಪೂರ್ಣ ಸ್ತಬ್ದಗೊಳ್ಳಲಿದೆ ಎಂದು ಹೇಳಿದರು.
Related Articles
ಬಡವರ ವಿರುದ್ಧ ಕಾನೂನು ತರಲು ಹೊರಟಿರುವ ಕೇಂದ್ರದ ಕಣ್ಣು ತೆರೆಸಲು ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
Advertisement
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ಮಾತ್ರ ದುಬಾರಿ ಬೆಲೆ ಕೊಡುವಂತಾಗಿದೆ. ಅನೀಲ ಬೆಲೆಯೂ ಗಗನಕ್ಕೆ ಏರುತ್ತಿದೆ. ಪರಿಣಾಮ ಕೆಳ ವರ್ಗದ ಬಡ ಕಾರ್ಮಿಕರು ಸರಳ ಜೀವನ ನಡೆಸುವುದಕ್ಕೆ ತುಂಬ ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪಾರ್ವತಿ ಕಾಳಗಿ, ಸಾಬಮ್ಮ ನಾಲವಾರ, ಶೇಕಮ್ಮ ಕುರಿ ಇದ್ದರು.