Advertisement

ಕಾರ್ಮಿಕರ ಸಂಘಟನೆ ಉತ್ತಮ ಬೆಳವಣಿಗೆ’

06:14 AM May 05, 2019 | mahesh |

ಕಡಬ: ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸುತ್ತಿದ್ದ ಕಾಲ ಇಂದು ಮುಗಿದು ಹೋದ ಕಹಿ ನೆನಪು ಮಾತ್ರ. ಕಾರ್ಮಿಕರು ಕೂಡ ಸಂಘಟಿತರಾಗುತ್ತಿದ್ದಾರೆ. ತಮ್ಮ ಹಕ್ಕುಗಳ ಕುರಿತು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೊಕ್ಕಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಹೇಳಿದರು.

Advertisement

ಅವರು ಕಡಬ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮರ್ದಾಳದ ಸೈಂಟ್ ಮೇರಿಸ್‌ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಮತ್ತು ಕ್ರೀಡೋತ್ಸವ ಸಮಾರಂಭದ ಸಮಾರೋಪದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಕಾರ್ಲ್ ಮಾರ್ಕ್ಸ್ ವಿಶ್ವದಲ್ಲಿಯೇ ಕಾರ್ಮಿಕರ ಪರವಾಗಿ ದನಿ ಎತ್ತಿದ ಮಹಾನ್‌ ವ್ಯಕ್ತಿಯಾಗಿದ್ದಾರೆ. ದುಡಿಯುವ ಕೈಗಳು ಮತ್ತು ದುಡಿಸುವವರ ನಡುವಿನ ತಾರತಮ್ಯ ಹಾಗೂ ದುಡಿಯವರ ಜನರು ಶೋಷಣೆಗೊಳಗಾಗುತ್ತಿರುವ ಪರಿಯನ್ನು ಬೆಳಕಿಗೆ ತಂದ ಕಾರ್ಲ್ ಮಾರ್ಕ್ಸ್ ಕಾರ್ಮಿಕರ ಸಂಘಟನೆಗೆ ಪಥವನ್ನು ತೋರಿಸಿಕೊಟ್ಟರು. ಮುಂದೆ ಜಗತ್ತಿನಾದ್ಯಂತ ಕಾರ್ಮಿಕ ಸಂಘಟನೆ ಗಳು ಹುಟ್ಟಿಕೊಂಡವು. ಅದರ ಪರಿಣಾಮವಾಗಿ ಕಾರ್ಮಿಕರು ಕೂಡ ತಮ್ಮ ಶ್ರಮಕ್ಕೆ ಸಮನಾದ ಪ್ರತಿಫಲವನ್ನು ಪಡೆದುಕೊಳ್ಳುವಂತಾಗಿದೆ ಎಂದರು.

ಸರಕಾರವೂ ಕಾರ್ಮಿಕರ ಕಲ್ಯಾಣ ಕ್ಕಾಗಿ ಹಲವಾರು ಸವಲತ್ತುಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಸಂಘಟನೆಯಿಂದ ಕಾರ್ಮಿಕರಿಗೆ ಮಾರ್ಗದರ್ಶನ ದೊರೆಯಲಿ. ಕಡಬ ತಾಲೂಕು ಮಟ್ಟದಲ್ಲಿ ರಚನೆಗೊಂಡಿರುವ ಕಾರ್ಮಿಕ ಸಂಘಟನೆಯು ಇನ್ನಷ್ಟು ಬಲ ಪಡೆದುಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದವರು ತಿಳಿಸಿದರು.

ಸವಲತ್ತು ಪಡೆಯೋಣ
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಅರುಣ್‌ ರೈ ಕಳಾರ, ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಕಾರ್ಮಿಕರಿಗೆ ಸರಕಾರದಿಂದ ಹಲವು ಸೌಲಭ್ಯಗಳು ಸಿಗುತ್ತಿವೆ. ಮುಖ್ಯವಾಗಿ ಕಾರ್ಮಿಕರಿಗೆ ಈ ಕುರಿತು ಅರಿವು ಇಲ್ಲದೇ ಇರುವುದು ಸವಲತ್ತುಗಳು ಸಮರ್ಪಕವಾಗಿ ಆರ್ಹ ಫಲಾನುಭವಿಗಳಿಗೆ ತಲುಪದೇ ಇರಲು ಕಾರಣವಾಗಿದೆ. ಕಾರ್ಮಿಕರನ್ನು ಸಂಘಟಿಸಿ ಸರಕಾರದ ಕಾರ್ಮಿಕ ಇಲಾಖೆಯ ಮೂಲಕ ನೋಂದಾಯಿಸಿ ಕೊಂಡು ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಸಿಗುವಂತೆ ಮಾಡುವ ಉದ್ದೇಶದಿಂದ ಆರಂಭಗೊಂಡಿರುವ ತಾಲೂಕುಮಟ್ಟದ ಈ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲ ಕಾರ್ಮಿಕರು ಕೈಜೋಡಿಸಬೇಕು ಎಂದವರು ಮನವಿ ಮಾಡಿದರು.

Advertisement

ಸಂಘದ ಗೌರವಾಧ್ಯಕ್ಷ ಮೋಹನ್‌ ಕೆ.ಪಿ. ಅವರು ವಿಶೇಷ ಅತಿಥಿಯಾಗಿದ್ದರು. ಸಂಘದ ಉಪಾಧ್ಯಕ್ಷ ಉಮೇಶ್‌ ಕೋಕಳ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಗೌಡ ಬಿಳಿನೆಲೆ, ಜತೆ ಕಾರ್ಯದರ್ಶಿ ವಿದ್ಯಾಧರ ಕೋಕಳ, ಕೋಶಾಧಿಕಾರಿ ಗಿರಿಯಪ್ಪ ಗೌಡ ಬಿಳಿನೆಲೆ ಉಪಸ್ಥಿತರಿದ್ದರು.

ಮಹೇಶ್‌ ಕುಂಬಾರ ದೊಡ್ಡಕೊಪ್ಪ ಕೋಡಿಂಬಾಳ ಅವರು ಸ್ವಾಗತಿಸಿ, ಲೋಕನಾಥ ಗೌಡ ಕೈಕಂಬ ಬಿಳಿನೆಲೆ ಅವರು ವಂದಿಸಿದರು. ಕಮಲಾಕ್ಷಿ ಮೋಹನ್‌ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್‌ ಮೂಜೂರು ಅತಿಥಿಗಳನ್ನು ಪರಿಚಯಿಸಿದರು.

ಹಿರಿಯ ಕಾರ್ಮಿಕರಾದ ತಂಗಪ್ಪ ನ್‌ ಮೇಸ್ತ್ರಿ ಐತ್ತೂರು (ನುರಿತ ಗಾರೆ ಕೆಲಸಗಾರ), ಪರಮೇಶ್ವರ ಆಚಾರಿ ನೆಟ್ಟಣ (ಮರದ ಶಿಲ್ಲಿ ಹಾಗೂ ವಾಸ್ತು ತಜ್ಞ) ಹಾಗೂ ಬಾಬು ಥಾಮಸ್‌ ಕುಟ್ರಾಪ್ಪಾಡಿ ಹೊಸಮಠ (ಪೈಂಟರ್‌) ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ಕಾರ್ಮಿಕರಿಗೆ ಸಮ್ಮಾನ

ಹಿರಿಯ ಕಾರ್ಮಿಕರಾದ ತಂಗಪ್ಪ ನ್‌ ಮೇಸ್ತ್ರಿ ಐತ್ತೂರು (ನುರಿತ ಗಾರೆ ಕೆಲಸಗಾರ), ಪರಮೇಶ್ವರ ಆಚಾರಿ ನೆಟ್ಟಣ (ಮರದ ಶಿಲ್ಲಿ ಹಾಗೂ ವಾಸ್ತು ತಜ್ಞ) ಹಾಗೂ ಬಾಬು ಥಾಮಸ್‌ ಕುಟ್ರಾಪ್ಪಾಡಿ ಹೊಸಮಠ (ಪೈಂಟರ್‌) ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next