ಅಕ್ಕಿಆಲೂರು: ಕಾರ್ಮಿಕರು ಸರ್ಕಾರದಿಂದ ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ದೊರೆಯಬೇಕಿದ್ದು, ಕಾರ್ಮಿಕರು ಸಂಘಟನಾತ್ಮಕವಾಗಿ ಹೋರಾಡಬೇಕಾಗಿರುವುದು ಅಗತ್ಯವಾಗಿದೆ ಎಂದು ಜೈ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮುಖ್ಯಸ್ಥ ಎಂಜಿನಿಯರ್ ತನ್ವೀರ್ ಮಾಸೂರ ಹೇಳಿದರು.
ಕಟ್ಟಡ ನಿರ್ಮಾಣ ಮಾಡುವ ವಿವಿಧ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸುತ್ತಿರುವ ಪ್ರತಿ ಯೋಜನೆಗಳು ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ನಿರೀಕ್ಷೆ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಕಾರ್ಮಿಕರ ಜೀವನ ಭದ್ರತೆ, ಆರೋಗ್ಯ ವಿಮೆ ಮತ್ತು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಇರುವ ಪ್ರತಿ ಸೌವಲತ್ತುಗಳನ್ನು ಕಾರ್ಮಿಕರು ಮೊದಲು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಅಲ್ತಾಫ್ ಶಿರಹಟ್ಟಿ ಮಾತನಾಡಿ, ಸರ್ಕಾರದ ಕೆಲವು ನೀತಿ ನಿರ್ಧಾರಗಳಿಂದ ಕಟ್ಟಡ ಕಾರ್ಮಿಕರ ಕಾರ್ಯಕ್ಕೆ ಅನೇಕ ತೊಂದರೆಗಳಾಗುತ್ತಿವೆ. ವಿದ್ಯೆ ಇಲ್ಲದೇ ಇದ್ದರೂ ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಲ್ಲೂ ವಿಶಿಷ್ಠ ಪ್ರತಿಭೆಗಳಿವೆ. ಅವುಗಳನ್ನು ಅರಿತು ಕಾರ್ಮಿಕರು ಆತ್ಮವಿಶ್ವಾಸ ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಬೀರ ಬಾಳೂರ, ಶಿವಕುಮಾರ ದೇಶಮುಖ, ಅರುಣ ಮೋಟಗಿ, ಸದಾಶಿವ ಕಂಬಾಳಿ, ಶಿವಯೋಗಿ ಉಪ್ಪಿನ, ಮುನೀರ ಅಂದಲಗಿ, ಅಸ್ಕರ್‌ಅಲಿ ಸುರಳೇಶ್ವರ, ಸತ್ತಾರ ಪಾಟೀಲ, ಖಾಸೀಂ ಶಿಡೇನೂರ, ಹೈದರ ಕಾರಡಗಿ, ಮೆಹಮೂದಸಾಬ್ ಮದರಂಗಿ, ಶಹಬಾಜಖಾನ್ ದಾವಣಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Advertisement
ಪಟ್ಟಣದ ಕುಂಬಾರ ಓಣಿಯಲ್ಲಿ ಇತ್ತೀಚೆಗೆ ನಡೆದ ಜೈ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ನೂತನ ಕಚೇರಿ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement