Advertisement

ಕಾರ್ಮಿಕರ ಉದ್ಯೋಗ ಕಸಿದುಕೊಳ್ಳದಿರಲು ಆಗ್ರಹ

01:20 PM Jul 27, 2017 | Team Udayavani |

ಸಂಡೂರು: ತಾಲೂಕಿನಾದ್ಯಂತ ಇರುವ ಚಾಲಕರು, ಕ್ಲಿನರ್‌ಗಳು, ಗ್ಯಾರೇಜ್‌ ಕೆಲಸಗಾರರು ಅದಿರು ಸಾಗಾಟವನ್ನೇ ನಂಬಿಕೊಂಡು ಬದುಕುತ್ತಿದ್ದು, ಈಗ ಏಕಾಏಕಿ ಕ್ವೇಯರ್‌ ಬ್ಯಾಲ್ಟ್ ಹಾಕುವ ಮೂಲಕ ಸಾವಿರಾರು ಕಾರ್ಮಿಕರ
ಉದ್ಯೋಗ ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದ್ದು ತಕ್ಷಣ ನಿಲ್ಲಿಸಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಒತ್ತಾಯಿಸಿದರು.

Advertisement

ಅವರು ಪಟ್ಟಣದಲ್ಲಿ ತಾಲೂಕು ಲಾರಿ ಮಾಲೀಕರು, ರೈತ ಸಂಘದವರು, ಕರವೇ, ದಸಂಸ, ಹಸಿರುಸೇನೆ, ಆಟೋ ಮಾಲೀಕರ ಸಂಘ, ಪ್ರಜಾಸೇನೆ ಹಾಗೂ ಇತರ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಾಲೂಕಿನಾದ್ಯಂತ ಗಣಿಯಿಂದ ಬದುಕುತ್ತಿರುವವರಿಗೆ ಉದ್ಯೋಗ ತಪ್ಪುತ್ತಿದ್ದು ಎಲ್ಲಾ ರೀತಿಯಲ್ಲಿ ಯಾಂತ್ರೀಕರಣ ಮಾಡುತ್ತಿದ್ದಾರೆ. ಕನ್ವೇಯರ್‌ ಬೆಲ್ಟ್ ಹಾಕುತ್ತಿದ್ದು ಇದರಿಂದ ಸಾವಿರಾರು ಕುಟುಂಬಗಳು
ಬೀದಿಪಾಲಾಗುತ್ತಿದ್ದು ಇವುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸಂಘಗಳ ಅಧ್ಯಕ್ಷರಾದ ಯರ್ರಿಸ್ವಾಮಿ, ಕೊಟ್ರೇಶ್‌, ಹೆಗಡೆ, ಡಿ.ಎಸ್‌. ಬಾಬು, ಪರಶುರಾಮ, ಶಿವಲಿಂಗಪ್ಪ, ಕೆ.ಆರ್‌.
ಕುಮಾರಸ್ವಾಮಿ, ಪಿ.ರಾಜು, ಪಿ.ಜಯಣ್ಣ, ಸತೀಶ್‌, ಭಾಷಾ, ಪಿ.ಎಸ್‌. ಧರ್ಮಾನಾಯ್ಕ, ಮಂಜು, ಬಿ.ಎಂ. ಉಜ್ಜಿನಯ್ಯ, ಧರ್ಮಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಸ್‌.ಸಿದ್ದಪ್ಪ, ಖಾಸೀಂ, ಪ್ರಕಾಶ್‌, ಬದ್ರುದ್ದೀನ್‌, ಚಿನ್ನಪ್ಪ, ಸಿದ್ದಪ್ಪ, ಮಲ್ಲಿಕಾರ್ಜುನ, ಆಟೋ ಮಾಲೀಕರ ಅಧ್ಯಕ್ಷರು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next