Advertisement

ಕಾರ್ಮಿಕರು ನಾಡಿನ ಅಭಿವೃದ್ಧಿಯ ಶ್ರಮಿಕರು

02:48 PM Nov 07, 2022 | Team Udayavani |

ಮಾಗಡಿ: ಲಾರಿ ಚಾಲಕರು, ಕಾರ್ಮಿಕರು ಈ ನಾಡಿನ ಅಭಿವೃದ್ಧಿಯ ಶ್ರಮಿಕರು ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು.

Advertisement

ತಾಲೂಕಿನ ಸೋಲೂರು ಬಿಪಿಸಿಎಲ್‌ ಗ್ಯಾಸ್‌ ಪ್ಲಾಂಟ್‌ ಬಳಿ ಜೈಮಾರುತಿ ಕನ್ನಡ ಲಾರಿ ಚಾಲಕರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯಿಂದ ಸಾಧನೆ ಮಾಡಬಹುದು. ಸಂಘಟಿತರಾಗಿ ರಾಜ್ಯೋತ್ಸವ ಆಚರಣೆ ಅರ್ಥ ಪೂರ್ಣ ಆಗಿದೆ. ಬೆವರಿನ ದುಡಿಮೆ, ಸಂಪಾದಿಸಿದ ಹಣದಿಂದ ತಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು. ಸ್ವಾಭಿಮಾನದ ದುಡಿಮೆ ಇರಲಿ. ಇದರಲ್ಲಿ ಕೀಳರಿಮೆ ಬೇಡ. ವಿದ್ಯೆಗೆ ಬೆಲೆ ಕೊಡಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತ ರನ್ನಾಗಿಸಿ ಜೀವನದಲ್ಲಿ ಸಂತೋಷ ಪಡಬೇಕು ಎಂದು ಹೇಳಿದರು.

ಜನತೆಗೆ ಚಿರಋಣಿ: ನಾನು ಕೂಡ ಜೀಪ್‌ ಚಾಲಕ ಮಗ. ನಮ್ಮ ತಂದೆ ನನಗೆ ವಿದ್ಯೆ ಕೊಡಿಸಿದಕ್ಕೆ ನಾನು ಮಾಗಡಿ ಜನರ ಹಾಗೂ ಶ್ರೀರಂಗನಾಥಸ್ವಾಮಿ ಆಶೀರ್ವಾದದಿಂದ ಪುರಸಭಾಧ್ಯಕ್ಷನಾದೆ. ಅನಂತರ ಶಾಸಕನಾಗಿ, 3 ಬಾರಿ ಸಚಿವನಾಗಿ, ರಾಷ್ಟ್ರಿಯ ಕಾಂಗ್ರೆಸ್‌ ಪಕ್ಷದ ಕೆಪಿಸಿಸಿ ಸದಸ್ಯರಾಗಿ ರಾಷ್ಟ್ರಮಟ್ಟದ ನಾಯಕನಾಗಿ ಬೆಳೆಯಲು ಅವಕಾಶ ದೊರಕಿಸಿಕೊಟ್ಟ ಮಹಾಜನತೆಗೆ ಚಿರಋಣಿಯಾಗಿದ್ದೇನೆ ಎಂದರು.

ಅಭಿನಂದನೆ ಸಮಾರಂಭ: ದೇಶದ ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಿರಿಯ ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಕ್ಕಿರುವುದು ಕರ್ನಾಟಕದ ಹಿರಿಮೆ ಎನಿಸಿದೆ. ಅವರಿಗೆ ರಾಜ್ಯದಿಂದ ಅಭಿನಂದನೆ ಸಮಾರಂಭ ಏರ್ಪಡಿಸಿದ್ದು, ಹೆಮ್ಮೆಯ ಸಂಗತಿ ಎಂದರು.

ಸಾಹಿತಿಗಳಿಂದ ಕನ್ನಡ ಭಾಷೆ ಶ್ರೀಮಂತ: ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಮಾತನಾಡಿ, ಕರ್ನಾಟದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ರಾಷ್ಟ್ರಿಯ ಸ್ಥಾನಮಾನವೂ ಸಿಕ್ಕಿದರೂ, ಸಹ ಕನ್ನಡದಲ್ಲಿ ಆಡಳಿತ ಜಾರಿಗೊಳಿಸುವಲ್ಲಿ ಸರ್ಕಾರ ವಿಫ‌ಲಗೊಂಡಿವೆ. ಕನ್ನಡ ಸಂಘ, ಸಂಸ್ಥೆಗಳು, ಕಾರ್ಮಿಕರು, ಆಟೋ, ಲಾರಿ ಚಾಲಕರಿಂದ ಹಾಗೂ ಸಾಹಿತಿಗಳಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದರು.

Advertisement

ಭಾಷೆಗೆ ಗೌರವ ಕೊಡಿ: ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಗೌರವ ಕೊಡುವ ಕೆಲಸ ಆಗಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಗೌರವಸಿಗುವಂತ ಕೆಲಸವನ್ನು ಸರ್ಕಾರ ಕ್ರಮ ವಹಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಕನ್ನಡಿಗರ ಏಳಿಗೆಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ರಮೇಶ್‌, ಇಪ್ರಾನ್‌, ಕುದೂರು ಮುನಿಯಪ್ಪ, ಶಂಕರಪ್ಪ, ಸುನೀಲ್‌, ಆದೀರು, ಅರವಿಂದ್‌ ಸಿಂಗ್‌, ಸ್ವಾಮಿ, ಉಮೇಶ್‌, ಕೆ.ಪಿ. ರಮೇಶ್‌, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ಶರ್ಮ, ರಾಘವೇಂದ್ರ, ಯುವ ಮುಖಂಡ ದೇವೇಂದ್ರಕುಮಾರ್‌, ಬಿಜೆಪಿ ಮುಖಂಡ ನಾಗಶರ್ಮ, ಗೋಪಾಲ್‌ ಹಾಗೂ ಇತರರು ಇದ್ದರು.

ಆಲೂರು ವೆಂಕಟರಾಯರ ಹೋರಾಟ ಅವಿಸ್ಮರಣೆ: ಲಾರಿ ಚಾಲಕರು, ಕಾರ್ಮಿಕರು ಕರ್ನಾಟಕ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಕಟ್ಟುವಲ್ಲಿ ಆಲೂರು ವೆಂಕಟರಾಯರ ಹೋರಾಟ ಅವಿಸ್ಮರಣೆಯವಾದುದ್ದು. ಮೈಸೂರು ರಾಜ್ಯವಾಗಿದ್ದ ಕರುನಾಡನ್ನು ಮುಖ್ಯಮಂತ್ರಿ ಯಾಗಿದ್ದ ಡಿ.ದೇವರಾಜ ಅರಸು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡದಲ್ಲಿಯೇ ಆಡಳಿತ ನಡೆಸಿದ ಧೀಮಂತ ನಾಯಕ. ನನ್ನ ರಾಜಕೀಯ ಗುರುಗಳಾದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡದಲ್ಲೇ ಸಹಿ ಮಾಡಿ ಆಡಳಿತ ನಡೆಸಿದರು ಎಂದು ಮಾಜಿ ಸಚಿವ ಎಚ್‌. ಎಂ.ರೇವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next