ಕೊಯಮುತ್ತೂರು : ಇಲ್ಲಿಂದ 35 ಕಿ.ಮೀ. ದೂರದ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರಂತಸ್ತಿನ ಕಟ್ಟಡದ ಸೂರು ಕುಸಿದ ದುರ್ಘಟನೆಯಲ್ಲಿ ಹದಿಹರೆಯದ ಒಬ್ಬ ಕಾರ್ಮಿಕ ಮೃತಪಟ್ಟು ಇತರ 14 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಒಡಿಶಾ ಮೂಲದ ಕಣ್ಣನ್ (18) ಎಂದು ಗುರುತಿಸಲಾಗಿದೆ.
ಶಾಲೆಗಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಸೂರು ಹಠಾತ್ ಕುಸಿದಾಗ ಸುಮಾರು 15 ಕಾರ್ಮಿಕರು ಅದರಡಿ ಸಿಲುಕಿಕೊಂಡರು.
ಅಗ್ನಿ ಶಾಮಕ ಮತ್ತು ರಕ್ಷಣಾ ಸಿಬಂದಿಗಳು ಹಾಗೂ ಪೊಲೀಸರು ಜತೆಗೂಡಿ 15 ಮಂದಿಯನ್ನು ಅವಶೇಷಗಳಡಿಯಿಂದ ಮೇಲುತ್ತಲು ಸಫಲರಾದರು.
ಪೊಲ್ಲಾಚಿ ಸರಕಾರಿ ಆಸ್ಪತ್ರೆಗೆ ಒಯ್ಯಲ್ಪಡುವ ಮಾರ್ಗದಲ್ಲೇ ಕಣ್ಣನ್ ಕೊನೆಯುಸಿರೆಳೆದ. ಇತರ 9 ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಯಿತು.