Advertisement

ದೇವೇಗೌಡರೊಂದಿಗೆ ಸೇರಿ ಕೆಲಸ ಮಾಡಿದ್ದೇವೆ, ಜೆಡಿಎಸ್ ಮೈತ್ರಿಗೆ ತಕರರಾರಿಲ್ಲ: ಜಿಗಜಿಣಗಿ

04:34 PM Sep 09, 2023 | keerthan |

ವಿಜಯಪುರ: ಲೋಕಸಭೆ ಚುನಾವಣೆ ಪೂರ್ವ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಯಾದರೆ ಆಗಲಿ‌. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ನಾನು ಕೆಲಸ ಮಾಡಿದ್ದು, ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದರು.

ಈ ಹಿಂದೆ ದೇವೇಗೌಡ ಜೊತೆ ನಾವೂ ಇದ್ದೆವು, ನಮ್ಮೊಂದಿಗೆ ದೇವೇಗೌಡರೂ ಇದ್ದರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನಾನು ಸಚಿವನಾಗಿ ಕೆಲಸ‌ ಮಾಡಿದ್ದೇನೆ ಎಂದರು.

ಇದನ್ನೂ ಓದಿ:Ramanagar; ಯೋಗೇಶ್ವರ್ ನಾಲಗೆ ಬಿಗಿ ಹಿಡಿದುಕೊಳ್ಳಲಿ: ಏಕವಚನದಲ್ಲಿ ಡಿ ಕೆ ಸುರೇಶ್ ವಾಗ್ದಾಳಿ

ಮೈತ್ರಿಯಾದರೆ ಪಕ್ಷಕ್ಕೆ ಒಳ್ಳೆಯದು. ನಮಗೆ ಅವರಾಗಿಯೇ ಬಂದು ಬೆಂಬಲ ನೀಡುತ್ತಿದ್ದಾರೆ. ನಾವು ಬನ್ನಿ ಎನ್ನುತ್ತಿದ್ದೇವೆ. ನೀವೂ ಬನ್ನಿ, ಬೇಡ ಎನ್ನುವವರು ಯಾರು ಎಂದು ಪ್ರಶ್ನಿಸಿದರು.

Advertisement

ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಮಾನಕಾರಿ ಹೇಳಿಕೆ ಸರಿಯಲ್ಲ. ಸಣ್ಣ ಸಣ್ಣ ಹುಡುಗರೆಲ್ಲ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಿನ್ನೆ ಮಂತ್ರಿಯಾಗಿದವರೆಲ್ಲ ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಕಾಲದಿಂದಲೂ ನಾನು ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರುವ ಅವರು ಉಳಿದಿಲ್ಲ ಎಂದು ದಯಾನಿಧಿ ಹೇಳಿಕೆ ಸತ್ಯವಲ್ಲ ಎಂದರು.

ದೇಶದಲ್ಲಿ ಧರ್ಮದ ಬಗ್ಗೆ ಮಾತನಾಡಿದ ಯಾರೂ ಉಳಿಯಲ್ಲ. ಅವರು ಯಾವ ಪಕ್ಷಕ್ಕೆ ಅಂಟಿಕೊಂಡಿದ್ದಾರೆ. ಆ ಪಕ್ಷವೂ ಉಳಿಯಲ್ಲ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next