Advertisement

ಶಿಕ್ಷಕರುಜವಾಬ್ದಾರಿ ಅರಿತು ಕೆಲಸ ಮಾಡಿ

10:00 PM Jan 16, 2022 | Team Udayavani |

ಬಾದಾಮಿ: ಮಕ್ಕಳ ಕಲಿಕೆ ಜವಾಬ್ದಾರಿ ಎಲ್ಲರ ಮೇಲಿದೆ. ಜವಾಬ್ದಾರಿ ಅರಿತು ಕೆಲಸ ಮಾಡಿ. ಕಲಿಕಾ ಕೆಲಸದಲ್ಲಿ ಸಮಸ್ಯೆ ಇದ್ದರೆ ನನ್ನನ್ನು ನೇರವಾಗಿ ಶಿಕ್ಷಕರು ಸಂಪರ್ಕಿಸಬಹುದು ಎಂದು ನೂತನ ಬಿಇಒ ಆರೀಫ್‌ ಎಚ್‌.ಬಿರಾದಾರ ಹೇಳಿದರು.

Advertisement

ಚೊಳಚಗುಡ್ಡ ಶಾಖಾಂಬರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೇಲೂರ ಮತ್ತು ಚೊಳಚಗುಡ್ಡ ಕ್ಲಸ್ಟರ್‌ ಮುಖ್ಯಶಿಕ್ಷಕರ ಸಭೆ ಹಾಗೂ 100 ದಿನಗಳ ಓದು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ನಮ್ಮ ದೇಶದ ಆಸ್ತಿ. ಮಕ್ಕಳನ್ನು ಸನ್ಮಾರ್ಗದತ್ತ ಮತ್ತು ಒಳ್ಳೆಯ ಕಾರ್ಯದ ಕಡೆಗೆ ತೆಗೆದುಕೊಂಡು ಹೋಗುವ ಕಾರ್ಯ ಶಿಕ್ಷಕರದ್ದಾಗಿದೆ.

ನಮಗೆ ನಿರ್ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು. ಶಾಖಾಂಬರಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಗಿರೀಶ ದಾನಪ್ಪಗೌಡರ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೇಲೂರ ಮತ್ತು ಚೊಳಚಗುಡ್ಡ ಸಮೂಹದ ಪರವಾಗಿ ಸಿ.ಆರ್‌.ಪಿ. ಆರ್‌.ಎಂ.ಸಾರವಾಡ ಇವರು ನೂತನ ಬಿಇಒ ಆರೀಫ್‌ ಬಿರಾದಾರ ಅವರನ್ನು ಸನ್ಮಾನಿಸಿದರು.

ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಆರ್‌.ಟಿ. ಪಟ್ಟಣಶೆಟ್ಟಿ, ಹೊಸೂರ ಸಿ.ಆರ್‌.ಪಿ. ಪಿ.ಟಿ.ನೀಲಗುಂದ, ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್‌.ಎಸ್‌.ಕಲಗುಡಿ, ಎಸ್‌.ಎಸ್‌.ಕುಸಬಿ, ಎಸ್‌.ಎ.ಬಡಿಗೇರ, ಶಾಬಾದಿ ಹಾಜರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next