Advertisement
ನಗರದ ತಾಪಂ ಆವರಣದಲ್ಲಿ ಸೋಮವಾರ ಪಿಡಿಒ, ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕೊರೊನಾ ಸೋಂಕುನಿಯಂತ್ರಣ ಸಂಬಂಧ ಸಭೆ ನಡೆಸಿ ಮಾತನಾಡಿದರು. ಬೆಂಗಳೂರು, ಮೈಸೂರು ಹೊರತುಪಡಿಸಿದರೆ ತುಮಕೂರು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಕೊರೊನಾ ನಿರ್ವಹಣೆ ಸಮಿತಿಯಾಗಲಿ, ರಾಜ್ಯ ಸರ್ಕಾರವಾಗಲಿ ಜಿಲ್ಲೆಗೆ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ಗ್ರಾಮಾಂತರ ಕ್ಷೇತ್ರದ ಕಾರ್ಖಾನೆಗಳು ಸರ್ಕಾರಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರಕರಣ ದಾಖಲಿಸಿ ಮುಚ್ಚಿಸಬೇಕು. ಪ್ರತಿದಿನ ನಿಯ ಮಾನುಸಾರ ಪಡಿತರ ವಿತರಣೆಗೆ ಕ್ರಮವಹಿಸಬೇಕು. ಕೋವಿಡ್ ಹಾಟ್ ಸ್ಪಾಟ್‌ನಲ್ಲಿ ಸೋಂಕು ತಗ್ಗಿಸಲು ಯೋಜನೆ ರೂಪಿಸಬೇಕೆಂದರು.
ಸಹಾಯವಾಣಿ ಸಂಪರ್ಕಿಸಿ: ಗ್ರಾಮಾಂತರ ಕ್ಷೇತ್ರಕ್ಕಾಗಿಯೇ 4 ಆ್ಯಂಬುಲೆನ್ಸ್ ಮತ್ತು ಸೋಂಕಿತರ ಅಂತ್ಯಸಂಸ್ಕಾರಕ್ಕೆ ಜೆಸಿಬಿ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಜೆಸಿಬಿ ಬಾರದೇ ಹೋದರೆ ಅಥವಾ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಅವಶ್ಯಕವಾದರೆ ಶಾಸಕರ ಸಹಾಯ ವಾಣಿಯನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಡಿವೈಎಸ್ಪಿ ಎಚ್.ಶ್ರೀನಿವಾಸ್, ತಹಶೀಲ್ದಾರ್‌ಮೋಹನ್‌ಕುಮಾರ್, ಇಒ ಜೈಪಾಲ್, ಆರೋಗ್ಯಾಧಿಕಾರಿ ಲೋಕೇಶ್, ಗ್ರಾಮಾಂತರಕ್ಷೇತ್ರ ವ್ಯಾಪ್ತಿಯ ಸಬ್ ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳಿದ್ದರು.
ವೈಯಕ್ತಿಕ ಹಣದಿಂದ ಮಾತ್ರೆಖರೀದಿಸಿ ನೀಡುವೆ :
ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು2-3 ಸಾವಿರ ರೂ.ನ ಔಷಧಿ ಬರೆದುಕೊಟ್ಟರೆ, ರೈತರು ಎಲ್ಲಿಂದ ತಂದು ಕೊಡುತ್ತಾರೆ. ಎಬಿಆರ್‌ಕೆ ಯೋಜನೆಯಡಿ ದಾಖಲಾದವರಿಗೂ ಔಷಧ ನೀಡುತ್ತಿಲ್ಲ ಎಂಬ ಆರೋಪಕೇಳಿ ಬರುತ್ತಿವೆ. ಗ್ರಾಮಾಂತರ ಕ್ಷೇತ್ರದ ಸೋಂಕಿತರಿಗೆ ಔಷಧಕೊರತೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. 2 ದಿನಕ್ಕೊಮ್ಮೆ6ಸಾವಿರ ಮಾತ್ರೆಗಳನ್ನು ವೈಯಕ್ತಿಕವಾಗಿ ಖರೀದಿಸಿ ನೀಡುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಗ್ರಾಮಾಂತರಕ್ಷೇತ್ರದಲ್ಲಿ ಸೋಂಕಿತರು ಹೆಚ್ಚಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ಈಗ 2ನೇ ಅಲೆತೀವ್ರವಾಗಿದೆ. ಮುಂದೆ 3ನೇ ಅಲೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಗೃತರಾಗಲಿ.-ಡಿ.ಸಿ.ಗೌರಿಶಂಕರ್, ಶಾಸಕರು